ನೆರೆ ಪರಿಹಾರಕ್ಕಾಗಿ ವಾಟಾಳ್ ನಾಗರಾಜ್ ಉರುಳುಸೇವೆ

Published : Sep 24, 2019, 04:19 PM IST
ನೆರೆ ಪರಿಹಾರಕ್ಕಾಗಿ ವಾಟಾಳ್ ನಾಗರಾಜ್ ಉರುಳುಸೇವೆ

ಸಾರಾಂಶ

ಸರ್ಕಾರ ನೆರೆ ಪರಿಹಾರ ನೀಡದಿರುವುದನ್ನು ಖಂಡಿಸಿ ಕನ್ನಡ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದ್ದಾರೆ. ಚೆನ್ನಮ್ಮ ವೃತ್ತದಲ್ಲಿ ಸೇರಿದ ವಾಟಾಳ್ ಬೆಂಬಲಿಗರು ಉಭಯ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೆರೆ ಹಾನಿಯಿಂದ ರಾಜ್ಯದಲ್ಲಿ 50ರಿಂದ 60  ಸಾವಿರ ಕೋಟಿ ಹಾನಿಯಾಗಿದೆ. ಆದರೆ, ರಾಜ್ಯ ಸರ್ಕಾರ ಆರಂಭದಲ್ಲಿ ನೂರು ಕೋಟಿ ರು. ವೆಚ್ಚದ ರಕ್ಷಣೆ, ಪರಿಹಾರ ಕಾಮಗಾರಿ ಕೈಗೊಂಡಿದ್ದು ಬಿಟ್ಟರೆ ಉಳಿದಂತೆ ಯಾವುದೇ ಕಾರ್ಯಕ್ಕೆ ಮುಂದಾಗಿಲ್ಲ ಎಂದು ದೂರಿದ್ದಾರೆ.

ಹುಬ್ಬಳ್ಳಿ(ಸೆ.24): ಕೇಂದ್ರ ಸರ್ಕಾರ ನೆರೆ ಹಾನಿ ಪರಿಹಾರ ನೀಡದೆ ಇರುವುದನ್ನು ಖಂಡಿಸಿದ ಕನ್ನಡ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ನಗರದ ಚೆನ್ನಮ್ಮ ವೃತ್ತದಲ್ಲಿ ಉರುಳು ಸೇವೆ ಮಾಡಿ ಪ್ರತಿಭಟಿಸಿದ್ದಾರೆ. ಚೆನ್ನಮ್ಮ ವೃತ್ತದಲ್ಲಿ ಸೇರಿದ ವಾಟಾಳ್ ಬೆಂಬಲಿಗರು ಉಭಯ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೂಡಲೆ ಪರಿಹಾರ ವಿತರಣೆಗೆ ಒತ್ತಾಯಿಸಿ ಜನರ ನೆರವಿಗೆ ಬರುವಂತೆ ಕೇಳಿಕೊಂಡ ಅವರು, ನಿರ್ಲಕ್ಷಿಸಿದಲ್ಲಿ ರಾಜ್ಯ ಬಂದ್ ಕರೆ ನೀಡುವುದಾಗಿ ಎಚ್ಚರಿಸಿದರು. ಈ ವೇಳೆ ಅವರನ್ನು ಉಪನಗರ ಠಾಣೆ 
ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದು ಬಳಿಕ ಬಿಡುಗಡೆ ಮಾಡಿದ್ದಾರೆ.

ಪ್ರಧಾನಿ ಕಾರ‍್ಯಕ್ರಮಕ್ಕೆ ಹುಬ್ಬಳ್ಳಿ ಪೌರಕಾರ್ಮಿಕನಿಗೂ ಆಹ್ವಾನ

ಮಾಧ್ಯಮದವರೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್, ನೆರೆ ಹಾನಿಯಿಂದ ರಾಜ್ಯದಲ್ಲಿ 50ರಿಂದ 60  ಸಾವಿರ ಕೋಟಿ ಹಾನಿಯಾಗಿದೆ. ಆದರೆ, ರಾಜ್ಯ ಸರ್ಕಾರ ಆರಂಭದಲ್ಲಿ ನೂರು ಕೋಟಿ ರು. ವೆಚ್ಚದ ರಕ್ಷಣೆ, ಪರಿಹಾರ ಕಾಮಗಾರಿ ಕೈಗೊಂಡಿದ್ದು ಬಿಟ್ಟರೆ ಉಳಿದಂತೆ ಯಾವುದೇ ಕಾರ್ಯಕ್ಕೆ ಮುಂದಾಗಿಲ್ಲ. ಇನ್ನು ಕೇಂದ್ರದ ಇಬ್ಬರು ಘಟಾನುಘಟಿ ಸಚಿವರು ರಾಜ್ಯಕ್ಕೆ ಭೇಟಿ ನೀಡಿ ಪರಿಶೀಲಿಸಿ ಹೋಗಿದ್ದಾರೆ. ಆದರೆ, ಇಲ್ಲಿವರೆಗೆ ಬಿಡಿಗಾಸು ನೀಡಿಲ್ಲ ಎಂದು ಕಿಡಿಕಾರಿದ್ದಾರೆ.

ಉತ್ತರ ಕರ್ನಾಟಕ ಭಾಗ ನಿರ್ಲಕ್ಷ್ಯ:

ನೆರೆ ಪರಿಹಾರ್ಥವಾಗಿ ಕೇಂದ್ರ ಸರ್ಕಾರ ಕೂಡಲೇ ರಾಜ್ಯಕ್ಕೆ 50 ಸಾವಿರ ಕೋಟಿ ಬಿಡುಗಡೆ ಮಾಡಬೇಕು. ಪ್ರಧಾನಿ ಮೋದಿ ರಾಜ್ಯಕ್ಕೆ ಭೇಟಿ ನೀಡಿ ನೆರೆಪೀಡಿತ ಪ್ರದೇಶಗಳ ಸಮೀಕ್ಷೆ ಮಾಡಬೇಕು ಎಂದಿದ್ದಾರೆ. ರಾಜ್ಯದಲ್ಲಿ ಬಂದ ಎಲ್ಲ ಸರ್ಕಾರಗಳು  ಮೊದಲಿನಿಂದಲೂ ಉತ್ತರ ಕರ್ನಾಟಕ ಭಾಗ ವನ್ನು ನಿರ್ಲಕ್ಷಿಸುತ್ತಲೇ ಬಂದಿದೆ. ಪ್ರಸ್ತುತ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರದಲ್ಲಿದ್ದರೂ ಯಾವುದೇ ಫಲ ಸಿಗದಿರುವುದು ಬೇಸರ ಮೂಡಿಸಿದೆ ಎಂದಿದ್ದಾರೆ.

ದರ್ಗಾ, ಮಂದಿರದ ತೆರವಿಗೆ ಕೂಡಿ ಬಂದ ಕಾಲ?

 ಉತ್ತರ ಕರ್ನಾಟದ ಜನತೆ ಹೋರಾಟ ಮಾಡಿಯೇ ಎಲ್ಲವನ್ನು ಪಡೆಯಬೇಕಾದ ಪರಿಸ್ಥಿತಿಯಲ್ಲಿದ್ದಾರೆ. ರಾಜ್ಯದ ಸಂಸದರು, ಶಾಸಕರು, ಮುಖ್ಯಮಂತ್ರಿಗಳಲ್ಲಿ
ಇಚ್ಛಾಶಕ್ತಿ ಇರದಿರುವುದೇ ಇದಕ್ಕೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಪರಿಹಾರ ನಿಧಿಗೆ ನೆರೆ ಪರಿ ಹಾರಾರ್ಥವಾಗಿ ಸಹಾಯಧನ ಕೇಳಿಕೊಂಡಿದ್ದರೂ ಕೂಡ ಜನತೆಯಿಂದ ಅಗತ್ಯ ಸ್ಪಂದನೆ ಸಿಗದಿರುವುದು ಬೇಸರದ ಸಂಗತಿ ಎಂದಿದ್ದಾರೆ.

PREV
click me!

Recommended Stories

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಮತ್ತು ಬೆಳಗಾವಿ ವಿಭಜನೆ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಹತ್ವದ ಮಾಹಿತಿ
ದೇವರ ದರ್ಶನ ಮುಗಿಸಿ ಬೆಂಗಳೂರಿಗೆ ಮರಳುತ್ತಿದ್ದ ಬಸ್ ಮಂಡ್ಯ ಬಳಿ ಪಲ್ಟಿ, 8 ಮಂದಿಗೆ ಗಾಯ