ಚಿಕ್ಕಬಳ್ಳಾಪುರ: ಭಾರೀ ಮಳೆಗೆ ನೂರಾರು ಮನೆಗಳು ಜಲಾವೃತ

By Kannadaprabha News  |  First Published Sep 24, 2019, 3:25 PM IST

ಚಿಕ್ಕಬಳ್ಳಾಪುರದಲ್ಲಿ ಸುರಿದ ಭಾರೀ ಮಳೆಗೆ ಜಿಲ್ಲಾ ಕೇಂದ್ರ ಜಲಾವೃತವಾಗಿದೆ. ಕಳೆದ ಒಂದು ದಶಕದಲ್ಲಿಯೇ ದಾಖಲೆ ಮಳೆಯಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದ್ದು, ಅವೈಜ್ಞಾನಿಕ ಕಾಮಗಾರಿಗಳು, ಒತ್ತುವರಿಯಾದ ಚರಂಡಿಗಳು, ಮುಚ್ಚಿದ ಕಾಲುವೆಗಳ ಪರಿಣಾಮ ಮಳೆ ನೀರು ತಗ್ಗು ಪ್ರದೇಶಗಳಿಗೆ ನುಗ್ಗಿದೆ.


ಚಿಕ್ಕಬಳ್ಳಾಪುರ(ಸೆ. 24):  ಮುಂಗಾರು ಪೂರ್ವದಲ್ಲಿ ಹಾಗೆ ಬಂದು ಹೀಗೆ ಹೋಗಿದ್ದ ವರುಣ ನಂತರ ಕಾಣಿಸದೆ ಕಣ್ಮರೆಯಾಗಿದ್ದು, ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಕುಂಭದ್ರೋಣ ಮಳೆಗೆ ಜಿಲ್ಲೆಯ
ಜನತೆ ಸಂಕಷ್ಟ ಎದುರಿಸುವಂತಾಗಿದೆ.

ಕಳೆದ ಎರಡು ದಿನಗಳಿಂದ ರಾತ್ರಿ ವೇಳೆ ಮಾತ್ರ ಆಗಮಿಸುವ ಮೂಲಕ ಜನಕಿಗೆ ಕಿರಿಕಿರಿ ಕಡಿಮೆ ಮಾಡುತ್ತಿದ್ದ ಮಳೆಯರಾಯ ಸೋಮವಾರ ಏಕಾಏಕಿ ಮಧ್ಯಾಹ್ನವೇ ಆಗಮಿಸಿದ್ದು, ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ನಿರಂತರವಾಗಿ ಸುರಿಯುವ ಮೂಲಕ ಕಳೆದ ಒಂದು ದಶಕದಲ್ಲಿಯೇ ದಾಖಲೆ ಮಳೆಯಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

Tap to resize

Latest Videos

ಕೆರೆಯಂತಾದ ಜಿಲ್ಲಾಕೇಂದ್ರ:

ಅವೈಜ್ಞಾನಿಕ ಕಾಮಗಾರಿಗಳು, ಒತ್ತುವರಿಯಾದ ಚರಂಡಿಗಳು, ಮುಚ್ಚಿದ ಕಾಲುವೆಗಳ ಪರಿಣಾಮ ಮಳೆ ನೀರು ತಗ್ಗು ಪ್ರದೇಶಗಳಿಗೆ ನುಗ್ಗಿದ್ದು, ಜನರು ದಿಕ್ಕು ಕಾಣದ ಸ್ಥಿತಿಯಲ್ಲಿ ಮನೆ ಬಿಟ್ಟು ಹೊರಹೋಗುವಂತಾಗಿದೆ.

ಮಳೆ ಎಡೆಬಡದೆ ಸುರಿಯುತ್ತಿರುವ ಪರಿಣಾಮ ರೈತರಿಗೂ ಆತಂಕ ಎದುರಾಗಿದೆ. ನಗರದ ಬಜಾರ್ ರಸ್ತೆಯಲ್ಲಿ ಈ ಹಿಂದೆ ಕಾಮಗಾರಿ ನಡೆಸಿರುವ ಗುತ್ತಿಗೆದಾರರು ಚರಂಡಿಯ ನೀರು ಸರಾಗವಾಗಿ  ಹರಿದುಹೋಗಲು ಮುಂದಿನ ಚರಂಡಿಗೆ ಸಂಪರ್ಕ ಕಲ್ಪಿಸದೆ ಬಲಮುರಿ ವೃತ್ತದಲ್ಲಿಯೇ ಚರಂಡಿಯನ್ನು ಅಂತ್ಯಗೊಳಿಸಿದ್ದಾರೆ. ಹಾಗಾಗಿ ಚರಂಡಿಯಲ್ಲಿ ಹರಿಯುವ ನೀರು ಮುಂದೆ ದಾರಿ ಇಲ್ಲದೆ ರಸ್ತೆಗೆ ಹರಿಯುತ್ತಿದ್ದು, ರಸ್ತೆ ಯಾವ ಕಡೆಗೆ ಇಳಿಜಾರಿದ್ದರೆ ಅತ್ತ ನೀರು ನುಗ್ಗಿ ನಾಗರಿಕರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮನೆಗಳಿಗೆ ನುಗ್ಗಿದ ನೀರು:

ನಗದರದ ಧರ್ಮ ಛತ್ರ ರಸ್ತೆ, ಮಹಾಕಾಳಿ ದೇವಾಲಯ, ೮ನೇ ವಾರ್ಡ್, ನಕ್ಕಲಕುಂಟೆ, ಕೆಳಗಿನ ತೋಟಗಳು ಸೇರಿದಂತೆ ನಗರದ ಎಲ್ಲ ಕಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಏಕಾಏಕಿ ನೀರು ನುಗ್ಗಿದ ಪರಿಣಾಮ ಮನೆಗಳಲ್ಲಿರುವ ದಿನಸಿ, ಗೃಹುಪಯೋಗ ವಸ್ತುಗಳು ಮಳೆ ನೀರಿನಲ್ಲಿ ಮುಳುಗಿದ್ದು, ದಿಕ್ಕು ಕಾಣದ ಸ್ಥಿತಿಯಲ್ಲಿ ನಾಗರಿಕರು ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ. ಮಹಾಕಾಳಿ ದೇವಾಲಯಕ್ಕೆ ನೀರು ನುಗ್ಗಿದ ಪರಿಣಾಮ ಇಡೀ ದೇವಾಲಯ ಜಲಾವೃತವಾಗಿದೆ. ಧರ್ಮ ಛತ್ರ ರಸ್ತೆಯ ಸುಮಾರು ೨೦ಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ನುಗ್ಗಿದ್ದರೆ, ನಕ್ಕಲಕುಂಟೆ ಮತ್ತು ೮ನೇ ವಾರ್ಡಿನಲ್ಲಿ ನೂರಾರು ಮನೆಗಳಿಗೆ ನೀರು ನುಗ್ಗಿ ನಾಗರಿಕರ ನೆಮ್ಮದಿಗೆ ಕೊಳ್ಳಿ ಇಟ್ಟಿದೆ.

ನದಿಯಂತಾದ ಕಾಲುವೆಗಳು:

ಈ ವರೆಗೆ ನಗರ ವ್ಯಾಪ್ತಿಯಲ್ಲಿ ಮಾತ್ರ ಹೆಚ್ಚು ಮಳೆಯಾಗುತ್ತಿದ್ದು, ಸೋಮವಾರ ಸಂಜೆ ಸುರಿದ ಮಳೆ ಗ್ರಾಮೀಣ ಪ್ರದೇಶಕ್ಕೂ ವಿಸ್ಕತರಿಸಿದೆ.  ಹಾಗಾಗಿ ಗ್ರಾಮೀಣ ಪ್ರದೇಏಶದ ಕಾಲುವೆಗಳು ಉಕ್ಕಿ ಹರಿಯುತ್ತಿವೆ. ಅಲ್ಲದೆ ಈ ಹಿಂದೆ ನಿರ್ಮಿಸಿದ್ದ ಹಲವು ಚೆಕ್ ಡ್ಯಾಂಗಳಿಗೂ ನೀರು ಹರಿದು ಬಂದಿದೆ. ಜೊತೆಗೆ ಕಂದವಾರ ಕೆರೆಗೆ ಸಂಪರ್ಕ ಕಲ್ಪಿಸುವ ಪೋಷಕ ಕಾಲುವೆಗಳು ತುಂಬಿ ಹರಿಯುತ್ತಿದ್ದು,
ಕಂದವಾರ ಕೆರೆಗೆ ಸ್ವಲ್ಪ ಮಟ್ಟಿಗೆ ನೀರು ಬರುವ ನಿರೀಕ್ಷೆ ಬಂದಿರುವ ಕಾರಣ ನಗರ ವ್ಯಾಪ್ತಿಯಲ್ಲಿ ಕೈಕೊಟ್ಟಿದ್ದ ಕೊಳವೆ ಬಾವಿಗಳು ಪುನರಜ್ಜೀವನ ಪಡೆದು ನೀರಿನ ಸಮಸ್ಯೆ ಸ್ವಲ್ಪ ಮಟ್ಟಿಗೆ ನಿವಾರಣೆಯಾಗುವ ಸೂಚನೆಗಳು ಕಾಣತೊಡಗಿವೆ.

ಮತ್ತೆ ಮೂರು ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ : ಭವಿಷ್ಯ

click me!