ದೇಶದಲ್ಲಿ ಪ್ರೇಮಿಗಳ ದಿನವನ್ನು ಆಚರಣೆ ಮಾಡಬೇಕು. ಪ್ರೇಮಿಗಳ ದಿನಕ್ಕೆ ರಜೆ , ಪ್ರೇಮ ವಿವಾಹ ಆಗುವವರಿಗೆ. ಒಂದೂವರೆಯಿಂದ ಎರಡು ಲಕ್ಷ ರು. ಕೊಡಬೇಕು. ನಾನು ಮುಖ್ಯಮಂತ್ರಿ ಆದರೆ ರಜೆ ಘೋಷಿಸುತ್ತೇನೆ. 2 ಲಕ್ಷ ಅಲ್ಲ 5 ಲಕ್ಷ ರು.ಕೊಡುತ್ತೇನೆ ಎಂದು ವಾಟಾಳ್ ನಾಗರಾಜ್ ಹೇಳಿದರು.
ಬೆಂಗಳೂರು (ಫೆ.14): ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರೇಮಿಗಳ ದಿನಾಚರಣೆ ಮಾಡಿದ್ದಾರೆ. ಅವರ ಆಚರಣೆಗೆ ಭಾರತೀಯ ಸೇವಾ ಸಮಿತಿ ಸಂಘಟನೆ ಸಾಥ್ ನೀಡಿದೆ.
ಬೆಂಗಳೂರಿನ ಕಬ್ಬನ್ ಪಾರ್ಕ್ ಬಳಿಯ ವಿಕ್ಟೋರಿಯಾ ರಾಣಿ ಪ್ರತಿಮೆ ಬಳಿ ಜೋಡಿ ಕತ್ತೆಗೆ ಮದುವೆ ಮಾಡಿ ವಿಶೇಷವಾಗಿ ಪ್ರೇಮಿಗಳ ದಿನ ಆಚರಣೆ ಮಾಡಿದ್ದಾರೆ.
undefined
ಈ ವೇಳೆ ಮಾತನಾಡಿದ ವಾಟಾಳ್ ನಾಗರಾಜ್ ಇಂದು ಪ್ರಪಂಚದಲ್ಲೇ ಐತಿಹಾಸಿಕ ದಿನ. ಪ್ರೇಮಿಗಳ ದಿನ. ಪ್ರೇಮಿಗಳು ಎಂದರೆ ಪ್ರಾಣಿ, ಪಕ್ಷಿ, ಮನುಷ್ಯರು ಎಲ್ಲರೂ ಸೇರುತ್ತಾರೆ. ಇಂದು ಎರಡು ಪ್ರಾಣಿಗಳಿಗೆ ಹೆಸರಿಟ್ಟಿದ್ದೇವೆ. ಸುಂದರಾಂಗ, ಸೌಂದರ್ಯವತಿ ಎಂಬ ಹೆಸರಿಟ್ಟು ಪ್ರಾಣಿಗಳಿಗೆ ಮದುವೆ ಮಾಡಿದ್ದೇವೆ ಎಂದರು.
ವ್ಯಾಲೆಂಟೈನ್ ಡೇಗೆ 5 ದಿನದ ರಜಾ ಅರ್ಜಿ ವೈರಲ್, ವಿದ್ಯಾರ್ಥಿಯೇ ಕೊಟ್ಟ ಟ್ವಿಸ್ಟ್..!
ಪ್ರೇಮಿಗಳ ದಿನವನ್ನು ವಿಶಿಷ್ಟವಾಗಿ ಆಚರಿಸಬೇಕು. ಪ್ರೇಮಿಗಳಿಗೆ ನನ್ನ ಸಂಪೂರ್ಣ ಬೆಂಬಲವಿದೆ. ಪ್ರೇಮಿಗಳ ದಿನಾಚರಣೆಯನ್ನು ಸರ್ಕಾರಿ ದಿನವನ್ನಾಗಿ ಆಚರಿಸಬೇಕು. ನರೇಂದ್ರ ಮೋದಿಯವರು ಏನೇನೊ ದಿನಾಚರಣೆ ಮಾಡ್ತಾರೆ. ನಾನು ಮೋದಿಯವರಿಗೆ ಮನವಿ ಮಾಡುತ್ತೇನೆ.
ದೇಶದಲ್ಲಿ ಪ್ರೇಮಿಗಳ ದಿನವನ್ನು ಆಚರಣೆ ಮಾಡಬೇಕು. ಪ್ರೇಮಿಗಳ ದಿನಕ್ಕೆ ರಜೆ ಕೊಡಬೇಕು. ಪ್ರೇಮ ವಿವಾಹ ಆಗುವವರಿಗೆ. ಒಂದೂವರೆಯಿಂದ ಎರಡು ಲಕ್ಷ ರು. ಕೊಡಬೇಕು. ನಾನು ಮುಖ್ಯಮಂತ್ರಿ ಆದರೆ ರಜೆ ಘೋಷಿಸುತ್ತೇನೆ. 2 ಲಕ್ಷ ಅಲ್ಲ 5 ಲಕ್ಷ ರು.ಕೊಡುತ್ತೇನೆ ಎಂದರು.
ವಿಧಾನಸೌಧದ ಮುಂದೆ ಪ್ರೇಮಿಗಳ ದಿನ ಆಚರಣೆ ಮಾಡುತ್ತೇನೆ. ಮುಂದೆ ಕುಡುಕರ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಮಾಡುತ್ತೇನೆ. ನೀವು ಪ್ರೀತಿ ಅಭಿಮಾನಕ್ಕೆ ಬೆಲೆ ಕೊಡಬೇಕು ಎಂದು ವಾಟಾಳ್ ನಾಗರಾಜ್ ಹೇಳಿದರು.
ಈ ವೇಳೆ ಮಠಾಧಿಪತಿಗಳಿಗೂ ಮನವಿ ಮಾಡಿದ ವಾಟಾಲ್ ನಾಗರಾಜ್ ಯಾರೂ ಬೀದಿಗೆ ಬರಬೇಡಿ ಎಂದರು.