ರಸ್ತೆ ಕಾಮಗಾರಿಗೆ 300 ರೂ. ದೇಣಿಗೆ ನೀಡಿದ ಪಾರಮ್ಮ ಸಂಗನಾಳ| ಕೊಪ್ಪಳ ಜಿಲ್ಲೆಯ ಜಿಲ್ಲೆಯ ಕುಕನೂರ ತಾಲೂಕಿನ ಮಂಡಲಗೇರಿ ಗ್ರಾಮದಲ್ಲಿ ನಡೆದ ಘಟನೆ| ನೀವ್ಯಾಕೆ ಬರೋಕೆ ಹೋದ್ರೆ ನೀವು ತಾಯಿ ಸಮಾನ ಎಂದು ಕಾಲಿಗೆ ಬಿದ್ದು ನಮಸ್ಕಾರಿಸಿದ ಶಾಸಕ ಹಾಲಪ್ಪ ಆಚಾರ್|
ಕೊಪ್ಪಳ(ಫೆ.14): ಯಲಬುರ್ಗಾ ಬಿಜೆಪಿ ಶಾಸಕ ಹಾಲಪ್ಪ ಆಚಾರ್ ಅವರು ಕೋಟಿ ವೆಚ್ಚದ ರಸ್ತೆ ನಿರ್ಮಾಣಕ್ಕೆ 300 ರೂ. ದೇಣಿಗೆ ನೀಡಿದ ಅಜ್ಜಿಗೆ ಕಾಲಿಗೆ ನಮಸ್ಕರಿಸಿದ ಘಟನೆ ಜಿಲ್ಲೆಯ ಕುಕನೂರ ತಾಲೂಕಿನ ಮಂಡಲಗೇರಿ ಗ್ರಾಮದಲ್ಲಿ ಇಂದು(ಭಾನುವಾರ) ನಡೆದಿದೆ.
ಪಾರಮ್ಮ ಸಂಗನಾಳ ಎಂಬ ಅಜ್ಜಿ ರಸ್ತೆ ಕಾಮಗಾರಿಗೆ 300 ರೂ. ಹಣವನ್ನ ದೇಣಿಗೆಯಾಗಿ ನೀಡಿದ್ದಾರೆ. ಹೀಗಾಗಿ ದೇಣಿಗೆ ನೀಡಿದ ಅಜ್ಜಿಗೆ ಸನ್ಮಾನ ಮಾಡಿ ಕಾಲಿಗೆ ನಮಸ್ಕಾರ ಮಾಡಿದ್ದಾರೆ ಹಾಲಪ್ಪ ಆಚಾರ್ ಅವರು.
ಬಿಜೆಪಿ ವಾಟ್ಸಾಪ್ ಗ್ರುಪ್ನಲ್ಲಿ ಅಶ್ಲೀಲ ವಿಡಿಯೋ..!
ನೀವ್ಯಾಕೆ ಬರೋಕೆ ಹೋದ್ರೆ ನೀವು ತಾಯಿ ಸಮಾನ ಎಂದು ಶಾಸಕ ಹಾಲಪ್ಪ ಆಚಾರ್ ಕಾಲಿಗೆ ಬಿದ್ದು ನಮಸ್ಕಾರ ಮಾಡುವ ಮೂಲಕ ಸರಳತೆ ಮೆರೆದಿದ್ದಾರೆ.