ಸಿಸಿಟಿವಿಯಲ್ಲಿ ಸೆರೆಯಾಯ್ತು ಭಯನಾಕ ದೃಶ್ಯ : ಬೆಚ್ಚಿ ಬೀಳಿಸುವ ಘಟನೆ

Kannadaprabha News   | Asianet News
Published : Oct 26, 2020, 12:39 PM IST
ಸಿಸಿಟಿವಿಯಲ್ಲಿ ಸೆರೆಯಾಯ್ತು ಭಯನಾಕ ದೃಶ್ಯ :  ಬೆಚ್ಚಿ ಬೀಳಿಸುವ ಘಟನೆ

ಸಾರಾಂಶ

ಸಿಸಿಟಿವಿಯಲ್ಲಿ ಸೆರೆಯಾಯ್ತು ಒಂದು ಭೀಕರ ದೃಶ್ಯ..  ಬೆಚ್ಚಿ ಬೀಳಿಸುವ ಆ ಘಟನೆ 

ಬೆಳಗಾವಿ (ಅ.26): ಹಳೇ ವೈಷಮ್ಯ ಹಿನ್ನೆಲೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಯ ಬರ್ಬರ ಹತ್ಯೆ ಮಾಡಲಾಗಿದೆ. 

 ಬೆಳಗಾವಿಯ ಗ್ಯಾಂಗ್‌ವಾಡಿಯಲ್ಲಿ ತಡರಾತ್ರಿ ಗ್ಯಾಂಗ್ ವಾರ್ ನಡೆದಿದ್ದು ನಿನ್ನೆ ರಾತ್ರಿ 11 ಗಂಟೆಗೆ ಶೆಹಬಾಜ್ ಪಠಾಣ್ ಅಲಿಯಾಸ್ ಶೆಹಬಾಜ್  ಹತ್ಯೆ ಮಾಡಲಾಗಿದೆ.

ಬರ್ತ್ ಡೇ ಪಾರ್ಟಿ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ  ಟಾಟಾ ಸುಮೋ ವಾಹನದಲ್ಲಿ ಬಂದು ಬೈಕ್‌ಗೆ ಡಿಕ್ಕಿ ಹೊಡೆಸಿದ್ದಾರೆ. ಈ ವೇಳೆ ಶೆಹಬಾಜ್ ಪಠಾಣ್  ಬೈಕ್‌‌ನಿಂದ ಬಿದ್ದು ಓಡಿದ್ದಾನೆ. ಆತನನ್ನು ಬೆನ್ನಟ್ಟಿದ್ದು, ಆತ ಈ ವೇಳೆ ನಿವೃತ್ತ ಡಿವೈಎಸ್‌ಪಿ ಮನೆಗೆ ನುಗ್ಗಿದ್ದಾನೆ.

ಹಾಡಹಗಲೇ ತುಳು ಚಿತ್ರನಟ ಸುರೇಂದ್ರ ಬಂಟ್ವಾಳ್‌ ಬರ್ಬರ ಹತ್ಯೆ!

ನಿವೃತ್ತ ಡಿವೈಎಸ್‌ಪಿ ಸಮ್ಮುಖದಲ್ಲಿಯೇ ಆತನನ್ನು ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದಾರೆ.

ಕೈಯಲ್ಲಿ ಮಾರಕಾಸ್ತ್ರ ಹಿಡಿದು ಬೆನ್ನಟ್ಟುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ.

ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

PREV
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC