ಮೈಸೂರು ದಸರಾ: ಅರಮನೆಯಲ್ಲಿ ಸಿಂಹಾಸನ ಜೋಡಣೆ

By Kannadaprabha NewsFirst Published Sep 19, 2020, 12:04 PM IST
Highlights

ಅರಮನೆಯಲ್ಲಿ ಚಾಮುಂಡೇಶ್ವರಿ ಪೂಜೆ, ಹೋಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿತು ಸಂಪ್ರದಾಯದಂತೆ ಅರಮನೆ ದರ್ಬಾರ್‌ ಹಾಲ್‌ನಲ್ಲಿ ಮೈಸೂರು ತಾಲೂಕು ಗೆಜ್ಜಗಳ್ಳಿ ನುರಿತರು ಸಿಂಹಾಸನೆ ಜೋಡಣೆ ಕಾರ್ಯ ಆರಂಭ| ಕೊರೋನಾ ಹಿನ್ನೆಲೆಯಲ್ಲಿ ಸಿಂಹಾಸನ ಜೋಡಣೆ ಹಾಗೂ ವೀಕ್ಷಣೆಗೆ ಕೆಲವರಿಗೆ ಮಾತ್ರ ಅವಕಾಶ| 

ಮೈಸೂರು(ಸೆ.19):ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಮೈಸೂರು ಅರಮನೆಯಲ್ಲಿ ರಾಜವಂಶಸ್ಥರಿಂದ ನಡೆಯುವ ಖಾಸಗಿ ದರ್ಬಾರ್‌ಗಾಗಿ ರತ್ನ ಖಚಿತ ಸಿಂಹಾಸನ ಜೋಡಣೆ ಕಾರ್ಯವು ಶುಕ್ರವಾರ ನಡೆಯಿತು. 

ಸಿಂಹಾಸನ ಜೋಡಣೆ ಹಿನ್ನೆಲೆಯಲ್ಲಿ ಅರಮನೆಯಲ್ಲಿ ಚಾಮುಂಡೇಶ್ವರಿ ಪೂಜೆ, ಹೋಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿತು. ಬಳಿಕ ಸಂಪ್ರದಾಯದಂತೆ ಅರಮನೆ ದರ್ಬಾರ್‌ ಹಾಲ್‌ನಲ್ಲಿ ಮೈಸೂರು ತಾಲೂಕು ಗೆಜ್ಜಗಳ್ಳಿ ನುರಿತರು ಸಿಂಹಾಸನೆ ಜೋಡಣೆ ಕಾರ್ಯ ಆರಂಭಿಸಿದರು. 

'ಅರಮನೆಯಲ್ಲಿ ಸಿಂಹಾಸನ ಜೋಡಣೆ ಮಾಡುತ್ತೆ ವೀರಶೈವ ಕುಟುಂಬ'

ಅ.17 ರಿಂದ 26 ರವರೆಗೆ ದಸರಾ ಮಹೋತ್ಸವ ವೇಳೆ ಅರಮನೆಯಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಸಿಂಹಾಸನದಲ್ಲಿ ಕುಳಿತು ಖಾಸಗಿ ದರ್ಬಾರ್‌ ನಡೆಸಲಿದ್ದಾರೆ. ಕೊರೋನಾ ಹಿನ್ನೆಲೆಯಲ್ಲಿ ಸಿಂಹಾಸನ ಜೋಡಣೆ ಹಾಗೂ ವೀಕ್ಷಣೆಗೆ ಕೆಲವರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಅಲ್ಲದೆ, ಮೈಸೂರು ಅರಮನೆಗೆ ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರಗೆ ಪ್ರವಾಸಿಗರು ಪ್ರವೇಶಕ್ಕೆ ನಿರ್ಬಂಧಿಸಲಾಗಿತ್ತು.
 

click me!