ಕಲಬುರಗಿಯಲ್ಲಿ ಸತತ ಮೂರು ದಿನಗಳಿಂದ ಸುರಿಯುತ್ತಿರುವ ಮಳೆ| ತುಂಬಿ ಹರಿಯುತ್ತಿರುವ ಭೀಮಾ, ಕಮಲಾವತಿ, ಕಾಗಿಣಾ ನದಿಗಳು| ಚಿತ್ತಾಪುರ, ಸೇಡಂ, ಶಹಾಬಾದ್, ಜೇವರ್ಗಿ ತಾಲೂಕಿನಲ್ಲಿ 180ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು|
ಕಲಬುರಗಿ(ಸೆ.19): ಕಲ್ಯಾಣ ಕರ್ನಾಟಕ ಭಾಗದಲ್ಲಿ ಶುಕ್ರವಾರವೂ ಮಳೆಯಬ್ಬರ ಮುಂದುವರಿದಿದ್ದು, ಕಲಬುರಗಿ ಸೇರಿ ನಾಲ್ಕು ಜಿಲ್ಲೆಗಳಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ. 500ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ಸಾವಿರಾರು ಎಕರೆ ಬೆಳೆ ನೀರುಪಾಲಾಗಿದೆ. ಕಾಗಣಿ, ಭೀಮಾ, ಕಮಲಾವತಿ ನದಿಗಳು ಉಕ್ಕಿ ಹರಿದ ಪರಿಣಾಮ ಕಲಬುರಗಿ ಜಿಲ್ಲೆಯ ವಾಡಿ ಪಟ್ಟಣ ಸಂಪೂಣ ಜಲಾವೃತವಾಗಿದ್ದರೆ, ರಾಯಚೂರಲ್ಲಿ 5ಕ್ಕೂ ಹೆಚ್ಚು ಗ್ರಾಮಗಳಿಗೆ ನೀರು ನುಗ್ಗಿದೆ.
ಕಲಬುರಗಿಯಲ್ಲಿ ಸತತ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಭೀಮಾ, ಕಮಲಾವತಿ, ಕಾಗಿಣಾ ಮಾತ್ರವಲ್ಲದೆ ಹಲವು ಹಳ್ಳಕೊಳ್ಳಗಳೂ ತುಂಬಿ ಹರಿಯುತ್ತಿವೆ. ಚಿತ್ತಾಪುರ, ಸೇಡಂ, ಶಹಾಬಾದ್, ಜೇವರ್ಗಿ ತಾಲೂಕಿನಲ್ಲಿ 180ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಆಳಂದ ತಾಲೂಕಿನ ಸಾಲೇಗಾಂವ ಗ್ರಾಮದಲ್ಲಿ ಮೂವರು ಟ್ರ್ಯಾಕ್ಟರ್ ಸಮೇತ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಅದೃಷ್ಟವಶಾತ್ ಈಜಿ ದಡ ಸೇದಿದ್ದಾರೆ. ರಾಯಚೂರಲ್ಲಿ 300ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಮಳೆ, ಪ್ರವಾಹದಬ್ಬರಕ್ಕೆ 30ಕ್ಕೂ ಹೆಚ್ಚು ವಿದ್ಯುತ್ ಕಂಬಗಳು, ಮರಗಳು ಉರುಳಿ ಬಿದ್ದಿವೆ. ಯಾದಗಿರಿ, ಕೊಪ್ಪಳದಲ್ಲೂ ಭಾರೀ ಮಳೆಗೆ ನೂರಾರು ಎಕರೆ ಬೆಳೆ ಹಾನಿಯಾಗಿದೆ.
undefined
ಕಲಬುರಗಿ: ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನ ರಕ್ಷಣೆ
ಪ್ರಾಣಾಪಾಯದಿಂದ ಪಾರು:
ಗದಗ ಜಿಲ್ಲೆಯ ಕಣವಿ ಗ್ರಾಮದಲ್ಲಿ ಮಳೆಗೆ ಮನೆಯೊಂದರ ಗೋಡೆ ಕುಸಿದು ಅದರಡಿ ಸಿಲುಕಿದ್ದ ದಂಪತಿ ಅದೃಷ್ಟವಶಾತ್ ಸಣ್ಣಪುಟ್ಟಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕರಾವಳಿ ಜಿಲ್ಲೆಗಳಲ್ಲಿ ದಿನವಿಡೀ ಸಾಧಾರಣ ಮಳೆಯಾಗಿದೆ. ಬಳ್ಳಾರಿ ಹಾಗೂ ಕೊಡಗಿನಲ್ಲೂ ಬಿಟ್ಟು ಬಿಟ್ಟು ಮಳೆ ಸುರಿದಿದೆ.