ಗುಂಡ್ಲುಪೇಟೆ: ಗಾಯಗೊಂಡ ಗಂಡಾನೆ ಮರಿಯನ್ನೇ ಭಕ್ಷಿಸಿದ ಹುಲಿ!

By Kannadaprabha News  |  First Published Sep 19, 2020, 10:14 AM IST

ಲೊಕ್ಕೆರೆ ಬೀಟ್‌ನಲ್ಲಿ ಆನೆ ಮರಿಯ ಕಳೆಬರ ಪತ್ತೆ|  ಸುಮಾರು 5 ರಿಂದ 6 ವರ್ಷದ ಗಂಡಾನೆ ಮರಿಯೊಂದಿಗೆ ಕಾದಾಟ ನಡೆಸಿದ ಮತ್ತೊಂದು ಕಾಡಾನೆ| ಗಾಯಗೊಂಡಿದ್ದ ಆನೆಮರಿಯನ್ನು ಹುಲಿ ತಿಂದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ| 


ಗುಂಡ್ಲುಪೇಟೆ(ಸೆ.19): ಕಾಡಾನೆಗಳ ಕಾದಾಟದಲ್ಲಿ ಗಾಯಗೊಂಡಿದ್ದ ಗಂಡಾನೆ ಮರಿಯೊಂದನ್ನು ಹುಲಿ ಸಾಯಿಸಿ ತಿಂದು ಹಾಕಿರುವ ಘಟನೆ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಬೆಳಕಿಗೆ ಬಂದಿದೆ.

ಬಂಡೀಪುರ ಹುಲಿ ಯೋಜನೆಯ ಕುಂದಕೆರೆ ವಲಯದ ಲೊಕ್ಕೆರೆ ಬೀಟ್‌ನಲ್ಲಿ ಆನೆ ಮರಿಯ ಕಳೆಬರ ಗಸ್ತಿನಲ್ಲಿದ್ದ ಸಿಬ್ಬಂದಿಗೆ ಕಾಣಿಸಿದಾಗ ಸಿಬ್ಬಂದಿ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸುಮಾರು 5 ರಿಂದ 6 ವರ್ಷದ ಗಂಡಾನೆ ಮರಿಯೊಂದಿಗೆ ಮತ್ತೊಂದು ಕಾಡಾನೆ ಕಾದಾಟ ನಡೆಸಿವೆ ಎನ್ನಲಾಗಿದ್ದು, ಗಾಯಗೊಂಡಿದ್ದ ಆನೆಮರಿಯನ್ನು ಹುಲಿ ತಿಂದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

Tap to resize

Latest Videos

undefined

ಗುಂಡ್ಲುಪೇಟೆಯಲ್ಲಿ ನರಭಕ್ಷಕ ಹುಲಿ ಸೆರೆಗೆ ಆಪರೇಷನ್ ಸ್ಟಾರ್ಟ್

ವಿಷಯ ತಿಳಿದು ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕ್ಷೇತ್ರ ನಿರ್ದೇಶಕ ಟಿ.ಬಾಲಚಂದ್ರ, ಸಹಾಯಕ ಸಂರಕ್ಷಣಾಧಿಕಾರಿ ಕೆ.ಪರಮೇಶ್‌, ವಲಯ ಅರಣ್ಯಾಧಿಕಾರಿ ಶ್ರೀನಿವಾಸನಾಯಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಾಫಿ ತೋಟದಲ್ಲಿ ಆನೆಗಳ ಪಿಕ್ನಿಕ್!

"

click me!