ಸಾಹಿತ್ಯ ಸಮ್ಮೇಳನದಲ್ಲಿ ಇಂದು ನಾನಾ ಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ

By Kannadaprabha News  |  First Published Jan 7, 2023, 2:16 PM IST

ಹಾವೇರಿಯಲ್ಲಿ ನಡೆಯುತ್ತಿರುವ 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ಜ. 7ರಂದು ಮೂರು ವೇದಿಕೆಗಳಲ್ಲಿ ವಿವಿಧ ಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.


ಹಾವೇರಿ (ಜ.7) : ಹಾವೇರಿಯಲ್ಲಿ ನಡೆಯುತ್ತಿರುವ 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ಜ. 7ರಂದು ಮೂರು ವೇದಿಕೆಗಳಲ್ಲಿ ವಿವಿಧ ಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ವೇದಿಕೆ-1 ಗೋಷ್ಠಿ-3: ಕನ್ನಡದಲ್ಲಿ ಕಾನೂನು ಸಾಹಿತ್ಯ ಬೆಳಗ್ಗೆ 9ರಿಂದ 10 ಗಂಟೆವರೆಗೆ ಜರುಗಲಿದೆ. ಉಚ್ಚನ್ಯಾಯಾಲಯದ ವಿಶ್ರಾಂತ ನ್ಯಾಯಾಧೀಶರಾದ ನ್ಯಾಯಮೂರ್ತಿ ಅರಳಿ ನಾಗರಾಜ್‌ ಅಧ್ಯಕ್ಷತೆ ವಹಿಸಲಿದ್ದಾರೆ.

Latest Videos

undefined

ಹುಬ್ಬಳ್ಳಿ ಕರ್ನಾಟಕ ಕಾನೂನು ವಿಶ್ವವಿದ್ಯಾಲಯದ ಡಾ. ಸಿ. ಬಸವರಾಜು ಅವರಿಂದ ಆಶಯ ನುಡಿ, ಶ್ರೀ ಸಾಮಾನ್ಯನಿಗೆ ಕನ್ನಡದಲ್ಲಿ ಕಾನೂನಿನ ಅರಿವು ಕುರಿತು ನಿವೃತ್ತ ಜಿಲ್ಲಾ ನ್ಯಾಯಾಧೀಶ ಸಿದ್ದಪ್ಪ ಕೆಂಪಗೌಡರ ಹಾಗೂ ಕಾನೂನು ವಿಷಯಗಳ ಕುರಿತು ಸಾಹಿತ್ಯ ರಚನೆ ಕುರಿತು ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಬಿ. ಶಿವಲಿಂಗೇಗೌಡ ವಿಷಯ ಮಂಡನೆ ಮಾಡಲಿದ್ದಾರೆ.

ವಿಶೇಷ ಉಪನ್ಯಾಸ: ಬೆಳಗ್ಗೆ 10ರಿಂದ 11 ಗಂಟೆವರೆಗ ವಿಶೇಷ ಉಪನ್ಯಾಸ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ, ಸರಸ್ವತಿ ಸಮ್ಮಾನ್‌ ಪುರಸ್ಕೃತರ ಕುರಿತ ಗ್ರಂಥಗಳ ಬಿಡುಗಡೆ. ಹಿರಿಯ ಬರಹಗಾರ ಡಾ. ಪ್ರೇಮಶೇಖರ ಪ್ರಸ್ತಾವನೆ, ಸರಸ್ವತಿ ಸಮ್ಮಾನ ಪುರಸ್ಕೃತ ಡಾ.ಎಸ್‌.ಎಲ್‌. ಭೈರಪ್ಪ ಹಾಗೂ ಹಿರಿಯ ಸಾಹಿತಿ ಡಾ. ಪ್ರಧಾನ ಗುರುದತ್ತ ಅವರು ಉಪನ್ಯಾಸ ನೀಡಲಿದ್ದಾರೆ. ಸರಸ್ವತಿ ಸಮ್ಮಾನ ಪುರಸ್ಕೃತ ಎಂ. ವೀರಪ್ಪ ಮೊಯಿಲಿ ಉಪಸ್ಥಿತರಿರುವರು.

ಗೋಷ್ಠಿ-4: ಬೆಳಗ್ಗೆ 11ರಿಂದ ಮಧ್ಯಾಹ್ನ 1 ಗಂಟೆವರೆಗೆ ಯುವ ಕರ್ನಾಟಕ ನಾಡು-ನುಡಿ ಚಿಂತನೆ ಜರುಗಲಿದೆ.

ಊಟೋಪಚಾರಕ್ಕೆ ಸಾಹಿತ್ಯಾಭಿಮಾನಿಗಳು ಖುಷ್‌; Mobile Network ಇಲ್ಲದೆ ಪರದಾಟ!

ಹಿರಿಯ ಕ್ರಿಕೆಟ್‌ ಆಟಗಾರ ವೆಂಕಟೇಶ ಪ್ರಸಾದ ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಅಂತಾರಾಷ್ಟ್ರೀಯ ಕ್ರೀಡಾಪಟು ಮಾಲತಿ ಹೊಳ್ಳ ಅವರು ಆಶಯ ನುಡಿಗಳನ್ನಾಡುವರು. ಯುವ ಕನ್ನಡಿಗರಿಗೆ ಸೈನ್ಯದಲ್ಲಿ ಅವಕಾಶಗಳ ಕುರಿತು ಸ್ಕಾ$್ವಡ್ರನ್‌ ಲೀಡರ್‌ ವಿನುತಾ ಜಿ.ಆರ್‌., ಯುವ ಕರ್ನಾಟಕ ಹೊಸ ತಲೆಮಾರಿನ ಮನಸ್ಥಿತಿ ಕುರಿತು ಪ್ರೊ.ಸ್ಮತಿ ಹರಿತ್ಸ ಹಾಗೂ ಯುವ ಲೇಖಕರು ಮತ್ತು ಪ್ರಸ್ತುತ ಸಾಹಿತ್ಯ ಕುರಿತು ದೀಪಾ ಹಿರೇಗುತ್ತಿ ಮಾತನಾಡಲಿದ್ದಾರೆ.

ಗೋಷ್ಠಿ-5: ಮಧ್ಯಾಹ್ನ 1 ರಿಂದ 3 ಗಂಟೆ ವರೆಗೆ ಮಾಧ್ಯಮ: ಹೊಸತನ ಮತ್ತು ಆವಿಷ್ಕಾರಗಳು ಕುರಿತು ಜರುಗಲಿದೆ. ಬೆಂಗಳೂರು ವಿವಿ ಹಿರಿಯ ಪ್ರಾಧ್ಯಾಪಕ ಡಾ.ಬಿ.ಕೆ. ರವಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಪತ್ರಕರ್ತ ಮೋಹನ ಹೆಗಡೆ ಆಶಯ ನುಡಿಗಳನ್ನಾಡಲಿದ್ದಾರೆ. ಮುದ್ರಣ ಮಾಧ್ಯಮದಲ್ಲಿ ಕನ್ನಡದ ಬಳಕೆ ಕುರಿತು ಸುದರ್ಶನ್‌ ಚನ್ನಂಗಿಹಳ್ಳಿ, ಸಾಮಾಜಿಕ ಜಾಲತಾಣಗಳು: ಅರಿವು ಮತ್ತು ಅಪಾಯ ಕುರಿತು ಎಚ್‌.ಎನ್‌. ಸುದರ್ಶನ್‌ ಹಾಗೂ ಡಿಜಿಟಲ್‌ ಮಾಧ್ಯಮದ ಮುಂದಿನ ಸವಾಲುಗಳು ಕುರಿತು ಡಾ. ಸಿಬಂತಿ ಪದ್ಮನಾಭ ಅವರು ವಿಷಯ ಮಂಡಿಸಲಿದ್ದಾರೆ.

ಗೋಷ್ಠಿ-6: ಮಧ್ಯಾಹ್ನ 3ರಿಂದ 5 ಗಂಟೆವರೆಗೆ ಶಿಕ್ಷಣದಲ್ಲಿ ಕನ್ನಡದ ಅಸ್ಮಿತೆ ಕುರಿತು ಜರುಗಲಿದೆ. ವಿಶ್ರಾಂತ ಕುಲಪತಿ ಡಾ.ಎ. ಮುರಿಗೆಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಪ್ರಾಧ್ಯಾಪಕ ಡಾ. ಮಾಧವ ಪೆರಾಜೆ ಆಶಯ ನುಡಿಗಳನ್ನಾಡಲಿದ್ದಾರೆ. ಕನ್ನಡ ಶಾಲೆಗಳ ವಸ್ತುಸ್ಥಿತಿ ಕುರಿತು ಡಾ. ಎಚ್‌.ಎನ್‌. ಮುರಳೀಧರ, ಕನ್ನಡ ಭಾಷೆಯ ಮೇಲೆ ಇಂಗ್ಲಿಷ್‌ ಮಾಧ್ಯಮ ಬೀರುವ ಪರಿಣಾಮಗಳು ಕುರಿತು ಡಾ. ಹರ್ಷಿತ್‌ ಜೋಸೆಫ್‌, ಉನ್ನತ ಶಿಕ್ಷಣದಲ್ಲಿ ಕನ್ನಡ ಪಠ್ಯ ಮತ್ತು ಬೋಧನೆ ಕುರಿತು ಡಾ. ಧನಂಜಯ್‌ ಕುಂಬ್ಳೆ ಅವರು ವಿಷಯ ಮಂಡಿಸಲಿದ್ದಾರೆ.

ಸಂಜೆ 5ರಿಂದ 6 ಗಂಟೆವರೆಗೆ ಸಮ್ಮೇಳನಾಧ್ಯಕ್ಷರ ಜೊತೆ ಮಾತು-ಮಂಥನ ಜರುಗಲಿದ್ದು, ಸಮ್ಮೇಳನಾದ್ಯಕ್ಷರಾದ ಡಾ. ದೊಡ್ಡರಂಗೇಗೌಡ ಅವರು ಪಾಲ್ಗೊಳ್ಳಲಿದ್ದಾರೆ. ಡಾ. ತಲಕಾಡು ಚಿಕ್ಕರಂಗೇಗೌಡ ಪ್ರಧಾನ ನಿರ್ವಹಣೆ ಮಾಡಲಿದ್ದಾರೆ.

ಸಾಧಕರಿಗೆ ಸನ್ಮಾನ

ಸಂಜೆ 6 ರಿಂದ 7ಗಂಟೆವರೆಗೆ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜರುಗಲಿದ್ದು, ಕಾಗಿನೆಲೆ ಶ್ರೀ ಕ್ಷೇತ್ರದ ನಿರಂಜನಾನಂದಪುರಿ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಲಿದ್ದು, ಬೆಂಗಳೂರು ಜಯದೇವ ಆಸ್ಪತ್ರೆಯ ನಾಡೋಜ ಡಾ. ಸಿ.ಎನ್‌. ಮಂಜುನಾಥ ಆಶಯ ನುಡಿಗಳನ್ನಾಡಲಿದ್ದಾರೆ. ಸರ್ವೋಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಾಧೀಶರಾದ ನ್ಯಾಯಮೂರ್ತಿ ಶಿವರಾಜ ಪಾಟೀಲ ಅವರು ಸನ್ಮಾನಿಸುವರು.

ವೇದಿಕೆ-2: ಬೆಳಗ್ಗೆ 9ರಿಂದ 11 ಗಂಟೆವರೆಗೆ ಗೋಷ್ಠಿ-4 ವಚನ ಪರಂಪರೆ ಜರುಗಲಿದ್ದು, ಹಿರಿಯ ಸಂಶೋಧಕ ಡಾ. ಸಂಗಮೇಶ ಸವದತ್ತಿಮಠ ಅಧ್ಯಕ್ಷತೆ ವಹಿಸಲಿದ್ದಾರೆ. ಮುಂಡರಗಿ ಶ್ರೀ ಅನ್ನದಾನೇಶ್ವರ ಸಂಸ್ಥಾನ ಮಠದ ನಾಡೋಜ ಅನ್ನದಾನೇಶ್ವರ ಸ್ವಾಮೀಜಿಗಳು ಆಶಯ ನುಡಿಗಳನ್ನಾಡಲಿದ್ದಾರೆ.

ಗೋಷ್ಠಿ-5: ಬೆಳಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ ಕನ್ನಡಪರ ಮತ್ತು ಪ್ರಗತಿಪರ ವರದಿಗಳ ಅನುಷ್ಠಾನ ಜರುಗಲಿದೆ. ಡಾ. ವೀರಣ್ಣ ರಾಜೂರ ಅಧ್ಯಕ್ಷತೆ ವಹಿಸಲಿದ್ದಾರೆ. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಉಪ ಆಯುಕ್ತ ಡಾ. ಕೆ. ಮುರಳಿಧರ ಅವರು ಆಶಯ ನುಡಿಗಳನ್ನಾಡಲಿದ್ದಾರೆ.

ಸಮಗ್ರ ಕನ್ನಡ ಭಾಷಾ ಅಭಿವೃದ್ಧಿ ವಿಧೇಯಕ/ಕಾನೂನು ಚಿಂತನೆ ಕುರಿತು ಅಶೋಕ ಹಾರನಹಳ್ಳಿ, ಹಾವನೂರು ವರದಿಗೆ ಐವತ್ತು ವರ್ಷ ಕುರಿತು ಕೆ. ಜಯ ಪ್ರಕಾಶ್‌ ಹೆಗ್ಡೆ ಹಾಗೂ ಮಹಾಜನ ವರದಿ ಕುರಿತು ಡಾ. ಓಂಕಾರ ಕಾಕಡೆ ಅವರು ಮಾತನಾಡಲಿದ್ದಾರೆ.

ಗೋಷ್ಠಿ-6: ಮಧ್ಯಾಹ್ನ 1ರಿಂದ 3ರ ವರೆಗೆ ಕವಿಗೋಷ್ಠಿ-2 ಜರುಗಲಿದೆ, ಹಿರಿಯ ಕವಯತ್ರಿ ಡಾ.ಎಚ್‌.ಆರ್‌. ಸುಜಾತಾ ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಸಾಹಿತಿ ಡಾ.ಜಯಪ್ಪ ಹೊನ್ನಾಳಿ ಅವರು ಆಶಯನುಡಿಗಳನ್ನಾಡಲಿದ್ದಾರೆ.

ಗೋಷ್ಠಿ -7: ಮಧ್ಯಾಹ್ನ 3ರಿಂದ 4ರ ವರೆಗೆ ಕನ್ನಡ ಸಾಹಿತ್ಯದ ಹೊಸ ಒಲವುಗಳು ಜರುಗಲಿದೆ. ಹಿರಿಯ ಬರಹಗಾರರಾದ ಸುನಂದಾ ಪ್ರಕಾಶ ಕಡಮೆ ಅಧ್ಯಕ್ಷತೆ ವಹಿಸಲಿದ್ದಾರೆ. ಸಣ್ಣಕಥೆ ಮತ್ತು ಕವಿತೆ ಕುರಿತು ಡಾ.ವಿ.ಎ.ಲಕ್ಷ್ಮಣ ಹಾಗೂ ಪ್ರಬಂಧ ಮತ್ತು ಲಘು ಬರಹ ಕುರಿತು ಡಾ. ತಮಿಳ್‌ ಸೆಲ್ವಿ ಅವರು ಮಾತನಾಡಲಿದ್ದಾರೆ.

ಗೋಷ್ಠಿ-8: ಸಂಜೆ 4ರಿಂದ 6ರ ವರೆಗೆ ಮಕ್ಕಳ ಸಾಹಿತ್ಯ ಮನೋವಿಕಾಸ ಜರುಗಲಿದೆ. ಹಿರಿಯ ಸಾಹಿತಿ ದುಂಡಿರಾಜ್‌ ಅಧ್ಯಕ್ಷತೆ ವಹಿಸಲಿದ್ದು, ಮಕ್ಕಳ ಸಾಹಿತಿ ಆನಂದ್‌ ಪಾಟೀಲ್‌ ಆಶಯ ನುಡಿಗಳನ್ನಾಡಲಿದ್ದಾರೆ.

ವೇದಿಕೆ-3: ಗೋಷ್ಠಿ-4 ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡ ಬೆಳಗ್ಗೆ 9ರಿಂದ 10-30ರ ವರೆಗೆ ಜರುಗಲಿದೆ. ಭಾರತ ಸರ್ಕಾರದ ವರಮಾನ ತೆರಿಗೆ ಇಲಾಖೆ ಪ್ರಧಾನ ಮುಖ್ಯ ಆಯುಕ್ತ ಕೆ.ಸತ್ಯನಾರಾಯಣ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಉನ್ನತ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಐಚ್ಛಿಕ ಕನ್ನಡ ಕುರಿತು ಶ್ರೀಮತಿ ನಂದಿನಿ, ಶೈಕ್ಷಣಿಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡ ಕುರಿತು ಮಹಮ್ಮದ ರಫಿ ಪಾಶಾ ಹಾಗೂ ಕನ್ನಡದಲ್ಲಿ ಸಾಮಾನ್ಯ ಜ್ಞಾನ ಪತ್ರಿಕೆ ಕುರಿತು ಡಾ. ಪ್ರಕಾಶ್‌ ಜೆ.ಪಿ ಅವರು ಮಾತನಾಡಲಿದ್ದಾರೆ.

ಗೋಷ್ಠಿ-5: ಮರೆಯಲಾಗದ ಮಹನೀಯರು ಬೆಳಗ್ಗೆ 10-30ರಿಂದ 1 ಗಂಟೆವರೆಗೆ ಜರುಗಲಿದೆ. ಹಿರಿಯ ಸಾಹಿತಿ ಪ್ರೊ. ಚಂದ್ರಶೇಖರ ವಸ್ತ್ರದ ಅವರು ಅಧ್ಯಕ್ಷತೆ ವಹಿಸಲಿದ್ದು, ಹಿರಿಯ ಸಾಹಿತಿ ಪ್ರೊ.ಎಚ್‌.ಎ. ಭಿಕ್ಷಾವರ್ತಿಮಠ ಆಶಯ ನುಡಿಗಳನ್ನಾಡಲಿದ್ದಾರೆ. ವಚನ ಸಾಹಿತ್ಯ ಸಂರಕ್ಷಕ ಹಾನಗಲ್‌ ಕುಮಾರ ಶಿವಯೋಗಿಗಳ ಕುರಿತು ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ಪುಸ್ತಕ ಸಂಸ್ಕೃತಿ ವಿಸ್ತಾರಕ ಕಾದಂಬರಿ ಪಿತಾಮಹ ಗಳಗನಾಥರ ಕುರಿತು ಬಾಗಲಕೋಟೆಯ ಸುರೇಖಾ ದತ್ತಾತ್ರೇಯ, ಕನ್ನಡದ ಸೀಮಾ ಪುರುಷ ಡಾ. ವಿ.ಕೃ. ಗೋಕಾಕ್‌ ಕುರಿತು ಶ್ರೀಧರ ಹೆಗಡೆ ಭದ್ರನ್‌, ಚೆಂಬೆಳಕಿನ ಕವಿ ನಾಡೋಜ ಡಾ. ಚನ್ನವೀರ ಕಣವಿ ಬಗ್ಗೆ ಡಾ.ಸಂಗಮನಾಥ ಎಂ. ಲೋಕಾಪುರ (ಬಾಗಲಕೋಟೆ) ಹಾಗೂ ಅಂಧರ ಬಾಳಿನ ಬೆಳಕು ಪಂ. ಪುಟ್ಟರಾಜ ಗವಾಯಿಗಳು ಮತ್ತು ಪಂಚಾಕ್ಷರಿ ಗವಾಯಿಗಳ ಕುರಿತು ಗದಗ ಡಾ. ರಾಜಶೇಖರ ದಾನರಡ್ಡಿ ಅವರು ಮಾತನಾಡಲಿದ್ದಾರೆ.

ಗೋಷ್ಠಿ-6: ಕರ್ನಾಟಕ: ಭಾಷಾ ವೈವಿಧ್ಯ ಮಧ್ಯಾಹ್ನ 1ರಿಂದ 3ರವರೆಗೆ ಜರುಗಲಿದ್ದು, ವಿಶ್ರಾಂತ ಪ್ರಾಧ್ಯಾಪಕ ಡಾ. ವಿಠ್ಠಲ್‌ರಾವ್‌ ಗಾಯಕವಾಡ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಭಾಷಾ ತಜ್ಞರಾದ ಡಾ. ಪಾರ್ವತಿ ಜಿ. ಐತಾಳ್‌ ಅವರು ಆಶಯನುಡಿಗಳನ್ನಾಡಲಿದ್ದಾರೆ.

ಗೋಷ್ಠಿ-7: ಕಲಾ ಸಂಗಮ ಮಧ್ಯಾಹ್ನ 3ರಿಂದ 5 ಗಂಟೆವರೆಗೆ ಜರುಗಲಿದೆ. ಹಿರಿಯ ಕಲಾವಿದ ಸುಚೇಂದ್ರ ಪ್ರಸಾದ್‌ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ರಂಗಕರ್ಮಿ ಶ್ರೀಪತಿ ಮಂಜನಬೈಲು ಅವರು ಆಶಯ ನುಡಿಗಳನ್ನಾಡಲಿದ್ದಾರೆ. ಶಿಲ್ಪಕಲೆ ಕುರಿತು ವೀರಣ್ಣ ಅರ್ಕಸಾಲಿ, ಸಂಗೀತ ಮತ್ತು ನೃತ್ಯ ಕ್ಷೇತ್ರದ ಹೊಸ ಪ್ರಯೋಗಗಳು ಕುರಿತು ಡಾ. ಜಯದೇವಿ ಜಂಗಮಶೆಟ್ಟಿ, ಜನಜಾಗೃತಿಗೆ ಬೀದಿ ನಾಟಕಗಳ ಪ್ರಭಾವ ಕುರಿತು ಗ್ಯಾರಂಟಿ ರಾಮಣ್ಣ ಅವರು ಮಾತನಾಡಲಿದ್ದಾರೆ.

ಸಮ್ಮೇಳನದಲ್ಲಿ ಅತಿಥಿಯನ್ನೇ ಒಳಬಿಡದ ಪೊಲೀಸರು, ಪೊಲೀಸರ ಮೇಲೆ ಮಹೇಶ್ ಜೋಶಿ ಗರಂ

ಗೋಷ್ಠಿ-8: ಪುಸ್ತಕೋದ್ಯಮದ ಸವಾಲುಗಳು ಸಂಜೆ 5ರಿಂದ 7ರ ವರೆಗೆ ಜರುಗಲಿದ್ದು, ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ಅಧ್ಯಕ್ಷ ನಿಡಸಾಲೆ ಪುಟ್ಟಸ್ವಾಮಯ್ಯ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಪ್ರಕಾಶಕ ಎಂ.ಎ. ಸುಬ್ರಹ್ಮಣ್ಯ ಅವರು ಆಶಯನುಡಿಗಳನ್ನಾಡಲಿದ್ದಾರೆ. ಪ್ರಕಾಶಕರು ಹಾಗೂ ಮಾರಾಟ ವ್ಯವಸ್ಥೆ ಕುರಿತು ಬಸವರಾಜ ಕೊನೇಕ, ಕೃತಿ ಹಕ್ಕುಸ್ವಾಮ್ಯದ ಕಾನೂನಿನ ಅರಿವು ಕುರಿತು ಶ್ರೀಧರ ಪ್ರಭು ಹಾಗೂ ಆನ್‌ಲೈನ್‌ ಓದುಗರು ಮತ್ತು ಇ-ಪುಸ್ತಕ ಕುರಿತು ದೇವು ಪತ್ತಾರ ಅವರು ಮಾತನಾಡಲಿದ್ದಾರೆ. ರಾತ್ರಿ 7ರಿಂದ 10ರ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

click me!