Gadag: ಅನ್ನದಾತ ಬಾಳಲ್ಲಿ ಬಂಗಾರವಾಗಬೇಕಿದ್ದ ಬಾಳೆ ಬೆಂಕಿಗಾಹುತಿ!

By Gowthami K  |  First Published Jan 7, 2023, 1:33 PM IST

ಆಕಸ್ಮಿಕ ಬೆಂಕಿ‌ತಗುಲಿ ಲಕ್ಷಾಂತರ ರೂಪಾಯಿ ಮೌಲ್ಯದ ಬಾಳೆ ಬೆಳೆ ನಾಶವಾದ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಬಾಲೆಹೊಸೂರು ಗ್ರಾಮದಲ್ಲಿ ನಡೆದಿದೆ.  ದತ್ತಾತ್ರೆಯ ಕಟ್ಟಿಮನಿ ಅನ್ನೋರ ಎರಡುವರೆ ಎಕರೆ ಬಾಳೆ ತೋಟಕ್ಕೆ ಬೆಂಕಿ ತಗುಲಿ ಬಾಳೆ ತೋಟ ನಾಶವಾಗಿದೆ.


ಗದಗ (ಜ.7): ಹಗಲು ರಾತ್ರಿ ಎನ್ನದೆ ಕಷ್ಟಪಟ್ಟು ಬೆಳೆದಿದ್ದ ಬಾಳೆ ಬೆಳೆ ಬೆಂಕಿಗೆ ಆಹುತಿಯಾಗಿದೆ. ಬಾಳೆ ಬೆಳೆ ಬಂದಿದ್ದರೆ ರೈತರನಿಗೆ ಲಾಭದಾಯಕವಾಗುತ್ತಿತ್ತು. ಆದ್ರೆ ಆಕಸ್ಮಿಕ ಬೆಂಕಿದೆ ಜಮೀನಲ್ಲಿ ಬಾಳೆ ಸುಟ್ಟು ಕರಕಲಾಗಿ ಬಿಟ್ಟಿದೆ. ಬಾಳೆ ಬೆಳೆ ಹಾನಿ ಕಂಡು ಅನ್ನದಾತರ ಕಣ್ಣೀರು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಆಕಸ್ಮಿಕ ಬೆಂಕಿ‌ತಗುಲಿ ಲಕ್ಷಾಂತರ ರೂಪಾಯಿ ಮೌಲ್ಯದ ಬಾಳೆ ಬೆಳೆ ನಾಶವಾದ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಬಾಲೆಹೊಸೂರು ಗ್ರಾಮದಲ್ಲಿ ನಡೆದಿದೆ.  ದತ್ತಾತ್ರೆಯ ಕಟ್ಟಿಮನಿ ಅನ್ನೋರ ಎರಡುವರೆ ಎಕರೆ ಬಾಳೆ ತೋಟಕ್ಕೆ ಬೆಂಕಿ ತಗುಲಿ ಬಾಳೆ ತೋಟ ನಾಶವಾಗಿದೆ. ತೋಟದ ಪಕ್ಕದ ಪ್ರದೇಶದಲ್ಲಿ ಕಿಡಗೇಡಿಗಳು ಬೆಂಕಿ ಹಚ್ಚಿದ್ದಾರೆ ಎನ್ನಲಾಗುತ್ತಿದೆ. ಹುಲ್ಲುಗಾವಲಿನಿಂದ ತೋಟದವರೆಗೆ ಹಬ್ಬಿದ್ದ ಬೆಂಕಿ ಹಬ್ಬಿದೆ. 22 ಪೈಪು, ಹನಿ ನೀರಾವರಿ ಉಪಕರಣ, 2,500 ಸಸಿಗಳಿಗೆ ತಗುಲಿದ ಬೆಂಕಿಗೆ ಆಹುತಿಯಾಗಿವೆ.

Banana plant Vastu: ಸಮೃದ್ಧಿಗಾಗಿ ಬಾಳೆ ಮರದ ಪಕ್ಕ ಈ ಸಸ್ಯ ಬೆಳೆಸಲೇಬೇಕು!

Latest Videos

undefined

ರೈತ ದತ್ತಾತ್ರೇಯ ಅವರು ಎರಡುವರೆ ಎಕರೆಯಲ್ಲಿ ಯಾಲಕ್ಕಿ ಬಾಳೆ ಬೆಳೆದಿದ್ದರು. ಅದು ಸಮೃದ್ದವಾಗಿ ಬೆಳೆದ್ದು ನಿಂತಿತ್ತು. ಕಳೆದ ಎರಡು ವರ್ಷಗಳಿಂದ ಕಷ್ಟಪಟ್ಟು ಬಾಳೆ ಬೆಳೆದಿದ್ರು. ಈ ಬಾರಿ ಬಾಳೆ ಬೆಳೆ ಚೆನ್ನಾಗಿ ಬೆಳೆ ಬರುತ್ತೇ ಎಂಬ ನಂಬಿಕೆಯಲ್ಲಿದ್ದ ಅನ್ನದಾತ.

 

ಕಾಡಾನೆ ದಾಳಿ: ನಾಲ್ಕು ಎಕರೆಯಲ್ಲಿನ ಅಡಿಕೆ,ಬಾಳೆ ಬೆಳೆ ಸಂಪೂರ್ಣ ನಾಶ

ಈ ಬಾರಿ 25 ಕ್ಕೂ ಹೆಚ್ಚು ಟನ್ ಯಾಲಕ್ಕಿ ಬಾಳೆ ಹಣ್ಣೀನ ಇಳುವರಿ ಬರುವ ನಿರೀಕ್ಷೆಯಲ್ಲಿದ್ದ ರೈತ ದತ್ತಾತ್ರೇಯ. ಮಾರುಕಟ್ಟಿಯಲ್ಲಿ ಯಾಲಕ್ಕಿ ಬಾಳೆಗೆ 30-35 ರೂಪಾಯಿಗೆ ಕೆಜಿಯಂತೆ ಯಾಲಕ್ಕಿ ಬಾಳೆ ಹಣ್ಣು ಮಾರಾಟವಾಗುತ್ತಿದೆ. ಹೀಗಾಗಿ ಈ ಬಾರಿ ಬಾಳೆ ಹಣ್ಣು ರೈತನ ಬಾಳೆಗೆ ಬಂಗಾರವಾಗುತ್ತೇ ಅಂತಾ ನಂಬಿಕೆ ಇಟ್ಟಿಕೊಂಡಿದ್ದ ಆದ್ರೆ ಆಕಸ್ಮಿಕ ಬೆಂಕಿಗೆ ಬಾಳೆ ಬೆಳೆ ಜಮೀನಲ್ಲಿ ಹಾ‌ನಿಯಾಗಿದೆ‌‌. ಇದ್ರಿಂದ ರೈತನಿಗೆ ಬರ ಸಿಡಿಲು ಬಡೆದಂತಾಗಿದೆ. ಬೆಂಕಿಗೆ ಆಹುತಿಯಾದ ಬಾಳೆ ಬೆಳೆ ಸರ್ಕಾರ ಪರಿಹಾರ ನೀಡುವಂತ ಕೆಲಸ ಮಾಡಬೇಕು ಅಂತಾ ಅನ್ನದಾತನ ಅಳಲಾಗಿದೆ..

click me!