ನಾಡಿದ್ದಿನಿಂದ ಫೆ.5ರವೆಗೆ ವಾಣಿಜ್ಯ ವಿಮಾನಗಳ ಸಮಯ ಬದಲು| ಜ.30 ಮತ್ತು 31ರಂದು ಮಧ್ಯಾಹ್ನ 1.30ರಿಂದ 4.30ರವರೆಗೆ ಭಾಗಶಃ ವಾಣಿಜ್ಯ ವಿಮಾನಗಳ ಹಾರಾಟ ಸ್ಥಗಿತ| ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಗರಿಕ ವಿಮಾನ ಹಾರಾಟದಲ್ಲಿ ವ್ಯತ್ಯಯ|
ಬೆಂಗಳೂರು(ಜ.28): ಯಲಹಂಕದ ವಾಯುನೆಲೆಯಲ್ಲಿ ಫೆ.3ರಿಂದ 5ರವರೆಗೆ ನಡೆಯಲಿರುವ ‘13ನೇ ಏರೋ ಇಂಡಿಯಾ- 2021’ ಪ್ರದರ್ಶನ ಅಂಗವಾಗಿ ವಿಮಾನಗಳ ಹಾರಾಟ ನಡೆಸುವುದರಿಂದ ಜ.30ರಿಂದ ಫೆ.5ರವರೆಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಗರಿಕ ವಿಮಾನ ಹಾರಾಟದಲ್ಲಿ ವ್ಯತ್ಯಯವಾಗಲಿದೆ.
ವೈಮಾನಿಕ ಪ್ರದರ್ಶನ ಹಾಗೂ ತಾಲೀಮು ನಡೆಸಲು ಅನುಕೂಲವಾಗಲು ಜ.30ರಿಂದ ಫೆ.5ರ ವರೆಗೆ ಸಮಯ ಬದಲಾವಣೆ ಮಾಡಲಾಗಿದೆ. ಅಲ್ಲದೆ, ಪ್ರದರ್ಶನ ಮತ್ತು ತಾಲೀಮು ವೇಳೆ ದೇಶ ಮತ್ತು ವಿದೇಶಗಳಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ಆಗಮಿಸುವ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ ಎಂದು ವಿಮಾನ ನಿಲ್ದಾಣ ಮೂಲಗಳು ತಿಳಿಸಿವೆ.
undefined
ವಿಶ್ವದ ಮೊಟ್ಟ ಮೊದಲ ಹೈಬ್ರಿಡ್ ಏರ್ ಶೋಗೆ ದಿನಗಣನೆ: ಸಾರಂಗ್-ಸೂರ್ಯಕಿರಣ್ ಜಂಟಿ ಪ್ರದರ್ಶನ
ವೇಳಾಪಟ್ಟಿ
ವಿಮಾನಗಳು ತಾಲೀಮು ನಡೆಸುವುದಕ್ಕಾಗಿ ಜ.30 ಮತ್ತು 31ರಂದು ಮಧ್ಯಾಹ್ನ 1.30ರಿಂದ 4.30ರವರೆಗೆ ಭಾಗಶಃ ವಾಣಿಜ್ಯ ವಿಮಾನಗಳ ಹಾರಾಟ ಸ್ಥಗಿತಗೊಳಿಸಲಾಗಿದೆ. ಫೆ.1ರಂದು ಏರ್ ಶೋ ಉದ್ಘಾಟನೆ, ಫೆ.2ರಂದು ವೈಮಾನಿಕ ಪ್ರದರ್ಶನ, ಫೆ.4ಮತ್ತು 5ರಂದು ಏರೋ ಇಂಡಿಯಾ ಕಾರ್ಯಕ್ರಮ ಇರುವುದರಿಂದ ಮೂರೂ ದಿನಗಳ ಕಾಲ ಬೆಳಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ಮತ್ತು ಮಧ್ಯಾಹ್ನ 2ರಿಂದ ಸಂಜೆ 5ರವರೆಗೆ ವಿಮಾನಗಳ ಆಗಮನವನ್ನು ಸ್ಥಗಿತಗೊಳಿಸಲಾಗಿದೆ.
ಪ್ರಸ್ತುತ ಇರುವ ವೇಳಾಪಟ್ಟಿಯಲ್ಲಿ ವಿಮಾನಗಳ ಹಾರಾಟಕ್ಕೆ ಅಡೆತಡೆ ಉಂಟಾಗುವ ಬಗ್ಗೆ ಪ್ರಯಾಣಿಕರಿಗೆ ಸೂಚನೆಗಳನ್ನು ನೀಡುವಂತೆ ವಿಮಾನ ಯಾನ ಸಂಸ್ಥೆಗಳಿಗೆ ತಿಳಿಸಲಾಗಿದೆ. ವಿಮಾನ ನಿಲ್ದಾಣ ಕಾರ್ಯಾಚರಣೆಗಳನ್ನು ಕುರಿತ ಮಾಹಿತಿಯನ್ನು ಬಿಐಎಎಲ್ www.bengaluruairport.com ಭೇಟಿ ನೀಡುವಂತೆ ತಿಳಿಸಿದೆ.