ಅಪಾರ್ಟ್‌ಮೆಂಟಲ್ಲಿ ಕಾಣಿಸಿಕೊಂಡ ಚಿರತೆ: ಇನ್ನೂ ಮುಗಿಯದ ಶೋಧ ಕಾರ್ಯ

Kannadaprabha News   | Asianet News
Published : Jan 28, 2021, 09:01 AM IST
ಅಪಾರ್ಟ್‌ಮೆಂಟಲ್ಲಿ ಕಾಣಿಸಿಕೊಂಡ ಚಿರತೆ: ಇನ್ನೂ ಮುಗಿಯದ ಶೋಧ ಕಾರ್ಯ

ಸಾರಾಂಶ

ಚಿರತೆ ಸೆರೆಗಾಗಿ ಬೋನು ಅಳವಡಿಸಿದ ಅರಣ್ಯ ಇಲಾಖೆ| ಎಂಟು ಟ್ರ್ಯಾಪ್‌ ಕ್ಯಾಮೆರಾ ಅಳವಡಿಕೆ| ಡ್ರೋನ್‌ ಕ್ಯಾಮೆರಾದಿಂದ ಅಪಾರ್ಟ್‌ಮೆಂಟ್‌ನ ಸುತ್ತ ಎಂಟು ಕಿಲೋಮೀಟರ್‌ ವ್ಯಾಪ್ತಿಯಲ್ಲಿ ಶೋಧ ಕಾರ್ಯ| 

ಬೆಂಗಳೂರು(ಜ.28): ನಗರದ ಕೆ.ಆರ್‌.ಪುರ ವಲಯದ ಬೇಗೂರು ಬಳಿಯ ಪ್ರೆಸ್ಟೀಜ್‌ ಅಪಾರ್ಟ್‌ಮೆಂಟ್‌ ಬಳಿಯ ಜ.24ರಂದು ಕಾಣಿಸಿಕೊಂಡು ಸಾರ್ವಜನಿರಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆ ಶೋಧ ಕಾರ್ಯ ಮುಂದುವರಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಅಪಾರ್ಟ್‌ಮೆಂಟ್‌ ಹಿಂಭಾಗದಲ್ಲಿ 200 ಮೀಟರ್‌ ದೂರದಲ್ಲಿ ಚಿರತೆ ಸೆರೆಗಾಗಿ ಬೋನು ಅಳವಡಿಸಿದ್ದೇವೆ. ಸುಮಾರು 10ಕ್ಕೂ ಹೆಚ್ಚು ಸಿಬ್ಬಂದಿ ಭಾನುವಾರ ಬೆಳಗ್ಗೆಯಿಂದ ಶೋಧ ಕಾರ್ಯ ನಡೆಸುತ್ತಿದ್ದಾರೆ. ಅರಣ್ಯ ಇಲಾಖೆಯ ಎಂಟು ಟ್ರ್ಯಾಪ್‌ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಜೊತೆಗೆ ಒಂದು ಡ್ರೋನ್‌ ಕ್ಯಾಮೆರಾದಿಂದ ಅಪಾರ್ಟ್‌ಮೆಂಟ್‌ನ ಸುತ್ತ ಎಂಟು ಕಿಲೋಮೀಟರ್‌ ವ್ಯಾಪ್ತಿಯಲ್ಲಿ ಶೋಧ ನಡೆಸಿದ್ದೇವೆ. ಆದರೆ, ಈವರೆಗೂ ಪತ್ತೆಯಾಗಿಲ್ಲ. 

ಅಪಾರ್ಟ್‌ಮೆಂಟಲ್ಲಿ ಚಿರತೆಗಾಗಿ ತೀವ್ರ ಶೋಧ: ಜನರಲ್ಲಿ ಹೆಚ್ಚಿದ ಆತಂಕ

ಮುಂದಿನ ಒಂದು ವಾರ ಕಾಲ ಶೋಧ ಕಾರ್ಯ ನಡೆಯಲಿದೆ ಎಂದು ಕೆ.ಆರ್‌.ಪುರ ವಲಯದ ವಲಯ ಅರಣ್ಯ ಅಧಿಕಾರಿ ಶಿವರಾತ್ರೇಶ್ವರ ಮಾಹಿತಿ ನೀಡಿದ್ದಾರೆ.
 

PREV
click me!

Recommended Stories

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸಾವು
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ