ವಂದೇ ಭಾರತ್ ಸ್ಲೀಪರ್ ರೈಲು: ಈ ವರ್ಷಾಂತ್ಯದಲ್ಲಿ ಮಂಗಳೂರಿಗೆ

Published : Apr 18, 2025, 07:27 PM ISTUpdated : Apr 18, 2025, 08:08 PM IST
ವಂದೇ ಭಾರತ್ ಸ್ಲೀಪರ್ ರೈಲು: ಈ ವರ್ಷಾಂತ್ಯದಲ್ಲಿ ಮಂಗಳೂರಿಗೆ

ಸಾರಾಂಶ

ತಿರುವನಂತಪುರಂ-ಮಂಗಳೂರು ಮಾರ್ಗದಲ್ಲಿ ೧೬ ಬೋಗಿಗಳ ವಂದೇ ಭಾರತ್ ಸ್ಲೀಪರ್ ರೈಲು ವರ್ಷಾಂತ್ಯದಲ್ಲಿ ಸಂಚರಿಸಲಿದೆ. ಆಧುನಿಕ ಸೌಲಭ್ಯಗಳೊಂದಿಗೆ ೧೧೨೮ ಪ್ರಯಾಣಿಕರ ಸಾಮರ್ಥ್ಯ ಹೊಂದಿದೆ. ಯಶವಂತಪುರ-ಮಂಗಳೂರು ರೈಲು ಸೆಂಟ್ರಲ್‌ಗೆ ವಿಸ್ತರಣೆಗೆ ಮನವಿ ಸಲ್ಲಿಸಲಾಗಿದೆ. ಮಂಗಳೂರು ಸೆಂಟ್ರಲ್‌-ಮಡಗಾಂವ್‌ ವಂದೇ ಭಾರತ್‌ ರೈಲನ್ನು ಮುಂಬೈಗೆ ವಿಸ್ತರಿಸಲು ಒತ್ತಾಯಿಸಲಾಗಿದೆ.

ಮಂಗಳೂರು: ಕೇರಳದ ತಿರುವನಂತಪುರಂ- ಮಂಗಳೂರು ಮಾರ್ಗದಲ್ಲಿ ವಂದೇ ಭಾರತ್ ಸ್ಲೀಪರ್ ರೈಲು ಈ ವರ್ಷಾಂತ್ಯದಲ್ಲಿ ಸಂಚರಿಸುವ ನಿರೀಕ್ಷೆ ಇದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಇತ್ತೀಚೆಗೆ ಮಂಗಳೂರಿಗೆ ವಂದೇ ಭಾರತ್ ಸ್ಲೀಪರ್ ರೈಲು ಶೀಘ್ರ ಆರಂಭ ಆಗುವ ಬಗ್ಗೆ ಪ್ರಕಟಿಸಿದ್ದರು.

16 ಬೋಗಿ ಹೈಸ್ಪೀಡ್:
16 ಬೋಗಿಗಳ ಹೈಸ್ಪೀಡ್ ಸ್ಲೀಪರ್ ರೈಲು ಇದಾಗಿದ್ದು, ದಕ್ಷಿಣ ರೈಲ್ವೆ ವಲಯದ ಭಾಗವಾಗಲಿದೆ. ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಿಂದ ವಿನ್ಯಾಸಗೊಳಿಸಲಾದ ಈ ವಂದೇ ಭಾರತ್ ಸ್ಲೀಪರ್ ರೈಲು ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್‌ನಿಂದ ತಯಾರಿಸಲ್ಪಟ್ಟಿದೆ. ಆಧುನಿಕ ಹವಾನಿಯಂತ್ರಿತ ಸ್ಲೀಪರ್ ಬರ್ತ್‌ಗಳು, ಸ್ವಯಂಚಾಲಿತ ಬಾಗಿಲುಗಳು, ಕವಚ್ ಸುರಕ್ಷತಾ ವ್ಯವಸ್ಥೆಗಳು, ಸುಧಾರಿತ ಪ್ರವೇಶ ಮತ್ತು ಜಿಪಿಎಸ್ ಆಧಾರಿತ ಡಿಸ್ಪ್ಲೇ ವ್ಯವಸ್ಥೆಗಳನ್ನು ಒಳಗೊಂಡಿರುತ್ತದೆ. 1,128 ಪ್ರಯಾಣಿಕರ ಸಾಮರ್ಥ್ಯ ಹೊಂದಿರಲಿದೆ.

ರೈಲಿನಲ್ಲಿ ಇಡ್ಲಿ, ದೋಸೆ ಇಲ್ಲವೇ ಇಲ್ಲ; ಹಿಂದಿ ಭಾಷೆಯಾಯ್ತು, ಈಗ ಆಹಾರ ಹೇರಿಕೆ!

ಯಶವಂತಪುರ- ಮಂಗಳೂರು ರೈಲು ಸಂಚಾರ ಸೆಂಟ್ರಲ್‌ಗೆ ವಿಸ್ತರಣೆಗೆ ರೈಲ್ವೆ ಸಚಿವಗೆ ಮನವಿ
ಮಂಗಳೂರು- ಕಬಕ ಪುತ್ತೂರು ರೈಲು ಸಂಚಾರವನ್ನು ಸುಬ್ರಹ್ಮಣ್ಯಕ್ಕೆ ವಿಸ್ತರಣೆ ಮಾಡಿ ಚಾಲನೆ ನೀಡಿರುವ ಕಾರ್ಯಕ್ಕೆ ಕೇಂದ್ರದ ರೈಲ್ವೇ ಇಲಾಖೆಯ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಕೃತಜ್ಞತೆ ಸಲ್ಲಿರುವ ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿ ಅಭಿವೃದ್ಧಿ ಸಮಿತಿ, ಯಶವಂತಪುರ- ಮಂಗಳೂರು ಜಂಕ್ಷನ್‌ ಎಕ್ಸ್‌ಪ್ರೆಸ್‌ ರೈಲು ಸಂಚಾರವನ್ನು ಸೆಂಟ್ರಲ್‌ ರೈಲು ನಿಲ್ದಾಣಕ್ಕೆ ವಿಸ್ತರಿಸಲು ಮನವಿ ಸಲ್ಲಿಸಿದೆ.

ರೈಲು ಸಂಖ್ಯೆ 16575/ 76 ಮತ್ತು 16539/ 40 ರೈಲನ್ನು ಮಂಗಳೂರು ಜಂಕ್ಷನ್‌ ರೈಲು ನಿಲ್ದಾಣದಿಂದ ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಬೇಕು. ಇದೇ ವೇಳೆ ರೈಲು ಸಂಖ್ಯೆ 12133/ 34 ಸಿಎಸ್‌ಟಿಎಂ ಮುಂಬೈ- ಮಂಗಳೂರು ಜಂಕ್ಷನ್‌ ಎಕ್ಸ್‌ಪ್ರೆಸ್‌ ರೈಲು ಸಂಚಾರವನ್ನೂ ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಬೇಕು ಎಂದು ಸಚಿವರಿಗೆ ಸಲ್ಲಿಸಲಾದ ಮನವಿಯಲ್ಲಿ ಆಗ್ರಹಿಸಿದ್ದಾರೆ.

ಕೋಚ್ ಉತ್ಪಾದನೆಯಲ್ಲಿ ಭಾರತೀಯ ರೈಲ್ವೆ ದಾಖಲೆ, ಹಿಂದಿನ ವರ್ಷಕ್ಕಿಂತ 9% ಹೆಚ್ಚಳ!

ಮಗಂಳೂರು ಸೆಂಟ್ರಲ್‌- ಮಡಗಾಂವ್‌ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಸಂಚಾರನ್ನು ಕೂಡಾ ಮುಂಬೈಗೆ ವಿಸ್ತರಿಸಬೇಕು. ಮಂಗಳೂರು ಕಾತ್ರಾ ನವಯುಗ ಎಕ್ಸ್‌ಪ್ರೆಸ್‌ ರೈಲನ್ನು ಪುನರ್‌ ಪರಿಚಯಿಸುವ ಜತೆಗೆ ಅದನ್ನು ಸುಬ್ರಹ್ಮಣ್ಯ- ಹಾಸನ- ಪುಣೆ- ಭೋಪಾಲ- ದೆಹಲಿ ಮಾರ್ಗವಾಗಿ ಸಂಚರಿಸಲು ಕ್ರಮ ವಹಿಸಬೇಕು. ಮಂಗಳೂರು ಸೆಂಟ್ರಲ್‌ ನಿಲ್ದಾಣವನ್ನು ವಿಶ್ವ ದರ್ಜೆ ನಿಲ್ದಾಣವಾಗಿ ಅಭಿವೃದ್ಧಿಪಡಿಸಬೇಕು. ಮಂಗಳೂರು ಸೆಂಟ್ರಲ್‌ ಮತ್ತು ಮಂಗಳೂರು ಜಂಕ್ಷನ್‌ ರೈಲು ನಿಲ್ದಾಣಗಳಲ್ಲಿ ಸೂಕ್ತ ಪ್ರಿ ಪೇಯ್ಡ್‌ ರಿಕ್ಷಾ ಕೌಂಟರ್‌ಗಳನ್ನು ಒದಗಿಸಬೇಕು ಎಂದು ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿ ಅಭಿವೃದ್ಧಿ ಸಮಿತಿಯು ಸಚಿವರಿಗೆ ಸಲ್ಲಿಸಿರುವ ಮನವಿಯಲ್ಲಿ ಆಗ್ರಹಿದೆ.

PREV
Read more Articles on
click me!

Recommended Stories

ನ್ಯಾಷನಲ್ ಹೆರಾಲ್ಡ್ ಪ್ರಕರಣ ರೀತಿ RSS ವಿರುದ್ಧ ಯಾಕೆ ಕೇಸ್ ಇಲ್ಲ? ಕೇಂದ್ರದ ವಿರುದ್ಧ ಪ್ರಿಯಾಂಕ್ ಪ್ರಶ್ನೆಗಳ ಸುರಿಮಳೆ!
ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವ ಪೊಲೀಸ್ ಸಿಬ್ಬಂದಿಗೆ ಡಿಜಿ ಐಜಿಪಿ ಡಾ ಸಲೀಂ ಖಡಕ್ ಎಚ್ಚರಿಕೆ