ಹೆಬ್ಬಾಳೆ ಸೇತುವೆ ಕಾಮಗಾರಿ ವಿಳಂಬಕ್ಕೆ ಸ್ಥಳೀಯರ ಅಸಮಾಧಾನ: ವಾಹನ ಸವಾರರ ಪರದಾಟ

Published : Apr 17, 2025, 08:20 PM ISTUpdated : Apr 17, 2025, 08:26 PM IST
ಹೆಬ್ಬಾಳೆ ಸೇತುವೆ ಕಾಮಗಾರಿ ವಿಳಂಬಕ್ಕೆ ಸ್ಥಳೀಯರ ಅಸಮಾಧಾನ: ವಾಹನ ಸವಾರರ ಪರದಾಟ

ಸಾರಾಂಶ

ಮಳೆಗಾಲ ಆರಂಭವಾದ ತಕ್ಷಣ ಭದ್ರೆಯ ಅಬ್ಬರಕ್ಕೆ ಪ್ರತಿ ವರ್ಷವೂ ಮೊದಲು ಮುಳುಗೋ ಸೇತುವೆಯೇ ಹೆಬ್ಬಾಳೆ ಸೇತುವೆ. ಸ್ಥಳೀಯರು ,ಭಕ್ತರು  ಸೇತುವೆ ಮುಳುಗಡೆಯಿಂದ ಬೇಸತ್ತು ಹೊಸ ಸೇತುವೆಗೆ ಬೇಡಿಕೆಯಿಟ್ಟಿದ್ರು. 

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಏ.17): ಮಳೆಗಾಲ ಆರಂಭವಾದ ತಕ್ಷಣ ಭದ್ರೆಯ ಅಬ್ಬರಕ್ಕೆ ಪ್ರತಿ ವರ್ಷವೂ ಮೊದಲು ಮುಳುಗೋ ಸೇತುವೆಯೇ ಹೆಬ್ಬಾಳೆ ಸೇತುವೆ. ಸ್ಥಳೀಯರು ,ಭಕ್ತರು  ಸೇತುವೆ ಮುಳುಗಡೆಯಿಂದ ಬೇಸತ್ತು ಹೊಸ ಸೇತುವೆಗೆ ಬೇಡಿಕೆಯಿಟ್ಟಿದ್ರು. ಹೊಸಸೇತುವೆ ಕಾಮಗಾರಿ ಶುರುವಾಯ್ತು ಈಗ ರಸ್ತೆಯೇ ಬಂದ್ ಮಾಡಿದ್ದಾರೆ.ಕಾಮಗಾರಿ ವಿಳಂಬಕ್ಕೆ ಅಸಮಾಧಾನ ಹೊರ ಹಾಕಿದ್ದಾರೆ.ಮಳೆಗಾಲದಲ್ಲಿ ಮುಳುಗೋ ಸೇತುವೆ ಬೇಸಿಗೆಯಲ್ಲಿ ಕಾಮಗಾರಿ ವಿಳಂಬದಿಂದ ಮೂರು ತಿಂಗಳಿನಿಂದ ಬಂದ್ ಆಗಿದೆ. ಹೊರನಾಡಿನ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ತೆರಲು ಭಕ್ತರು ಹರಸಾಹಸಪಟ್ಟು ದೇವಿ ದರ್ಶನ ಪಡೆಯುತ್ತಿದ್ದಾರೆ.  

ಕಾಮಗಾರಿ ವಿಳಂಬ ಸ್ಥಳೀಯರ ಅಸಮಾಧಾನ: ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಹೆಬ್ಬಾಳ ಸೇತುವೆ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ. ಮಳೆಗಾಲದಲ್ಲಿ ಭದ್ರೆಯ ವೀರಾವೇಷಯಿಂದ ಹೆಬ್ಬಾಳ ಸೇತುವೆ 10ಕ್ಕೂ ಹೆಚ್ಚು ಭಾರೀ ಮುಳುಗಡೆಯಾಗಿ ರಸ್ತೆ ಸಂಚಾರ ಬಂದ್ ಆಗುತ್ತೆ. ಅಲ್ಲದೆ ಶಿಥಿಲವಾಗಿದ್ದ ಸೇತುವೆಯಿಂದ ಪ್ರಾಣಭೀತಿಯಿಂದ ಜನರು  ಹೊಸ ಸೇತುವೆಗೆ ಬೇಡಿಕೆಯಿಟ್ರು.ಸತತ ಹೋರಾಟದ ಫಲಬವಾಗಿ  ಹೊಸಸೇತುವೆಗೂ ಅನುದಾನ ಬಿಡುಗೆಡೆಯಾಗಿ ಕಾಮಗಾರಿಯೂ ಶುರುವಾಗಿದೆ.ಸತತ ಮೂರು ವರ್ಷದಿಂದ ನಡೆಯುತ್ತಿರುವ ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿದೆ.

ವಕ್ಫ್ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ: ರಸ್ತೆ ಸಂಚಾರ ನಿರ್ಬಂಧಿಸದಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ!

ಈಗ ಮೂರು ತಿಂಗಳಿನಿಂದ ಕಳಸ ಹೊರನಾಡು ರಸ್ತೆ ಬಂದ್ ಮಾಡಿ ಕಾಮಗಾರಿ ಬೇಗ ಮುಗಿಸ್ತೇವೆ ಅಂದಿದ್ರು.ಅದ್ರೆ ತಿಂಗಳುಗಳು ಕಳೆಯುತ್ತಿದ್ರು ಯಾಕೋ ಕಾಮಗಾರಿ ಮುಗಿಸ್ತಾ ಇಲ್ಲ ಅನ್ನೋ ಅಸಮಾಧಾನವನ್ನು ಸ್ಥಳೀಯರು ಹೊರಹಾಕ್ತಿದ್ದಾರೆ. ಈಗಾಗಲೇ ಶೇಕಾಡ 90ರಷ್ಟು ಕೆಲಸ ಮುಕ್ತಾಯವಾಗಿದ್ದು ಶೇಕಾಡ 10ರಷ್ಟು ಕಾಮಗಾರಿಗೆ ಕಳೆದ ಮೂರು ತಿಂಗಳನಿಂದ ಸಮಯವನ್ನು ತೆಗೆದುಕೊಂಡಿರುವ ಗುತ್ತಿಗೆದಾರರ ವಿರುದ್ದ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಕಾಮಗಾರಿ ನಡೆಸುತ್ತಿರುವ ಕಾರಣ ರಸ್ತೆ ಬಂದ್ ಮಾಡಿ ಜನ್ರು ಪ್ರವಾಸಿಗರು ಪರದಾಡ್ತಾ ಇದ್ದಾರೆ. ಆದ್ರೆ  ಅಧಿಕಾರಿಗಳು ಜನಪ್ರತಿನಿಧಿಗಳು ಇತ್ತ  ಗಮನಹರಿಸ್ತೀಲ್ಲ ಎಂದು ಸ್ಥಳೀಯರು ಕಿಡಿಕಾರಿದ್ದಾರೆ. 

ದೇವಿ ದರ್ಶನ ಪಡೆಯಲು ಭಕ್ತರ ಹರಸಾಹಸ: ಇನ್ನೂ ಕಳಸ ಹೊರನಾಡು ರಸ್ತೆ ಬಂದ್ ಅಗಿ ಮೂರು ತಿಂಗಳಾಗಿದೆ.ಪರ್ಯಾಯವಾಗಿ ಹಳುವಳ್ಳಿ ಮೂಲಕ ಸಂಚರಿಸಲು ಅವಕಾಶ ನೀಡಲಾಗಿದೆ. ಕಿರಿದಾದ ರಸ್ತೆಯಲ್ಲಿ ಭಾರಿ ವಾಹನಗಳು ಹೋಗೋ ಹಾಗಿಲ್ಲ.ಹೀಗಾಗಿ ಸಾರಿಗೆ ವ್ಯವಸ್ಥೆ ಎಲ್ಲಿಂದ ಬಂದ್ರು ಕಳಸಕ್ಕೆ ಕೊನೆಯಾಗ್ತಿದೆ.ಮುಂದಕ್ಕೆ ಬೇರೆ ವಾಹನಗಳನ್ನೇ ಅವಲಂಭಿಸುವಂತಾಗಿದೆ.ಇದಲ್ಲದೆ ಹೊರನಾಡಿನ ಅನ್ನಪೂರ್ಣೇಶ್ವರಿ ದೇವಿ ದರ್ಶನ ಪಡೆಯಲು  ಅತೀ ಹೆಚ್ಚು ಭಕ್ತರು ಬರ್ತಾ ಇದ್ದು ಹಳುವಳ್ಳಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ನಿಂದ ಪರದಾಡ್ತಿದ್ದಾರೆ.ಗಂಟೆ ಗಟ್ಟಲೆ ಸಮಸ್ಯೆ ಎದುರಿಸ್ತಾ ಇದ್ದಾರೆ.

ಜಾತಿ ಗಣತಿ ವರದಿ ಜಾರಿ ಮಾಡಿದಲ್ಲಿ ಹೋರಾಟ ಅನಿವಾರ್ಯ: ಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ

ಇನ್ನೂ ಹೊರನಾಡು ಸುತ್ತಮುತ್ತಲಿನ ಸ್ಥಳೀಯರು ದುಬಾರಿ ಹಣ ನೀಡಿ ಕಳಸ ಪಟ್ಟಣ ಹೋಗಬೇಕು ಅದು ಸುತ್ತಿ ಬಳಸಿ ಅಂತಾ ಅಕ್ರೋಶ ಹೊರಹಾಕ್ತಿದ್ದಾರೆ. ಒಟ್ಟಾರೆ ವರುಣ ಅಬ್ಬರಿಸಿ ಭದ್ರೆ ವೀರಾವೇಷ ತಾಳಿದಾಗ ಮೊದಲು ರಾಜ್ಯದಲ್ಲಿ ಮುಳುಗೋ ರಾಜ್ಯ ಹೆದ್ದಾರಿ ಹೆಬ್ಬಾಳೆ ಸೇತುವೆಗೆ ಹೊಸ ಸೇತುವೆ ಕಾಮಗಾರಿಯಿಂದ ಕೊಂಚ ರಿಲೀಫ್ ಸಿಕ್ತು ಅನ್ನೋ ಖುಷಿಯಂತೂ ಇದೆ.ಅದ್ರೆ ಕಾಮಗಾರಿ ವಿಳಂಬದ ಬಗ್ಗೆಯಂತೂ ಸ್ಥಳೀಯರು ಅಸಮಾಧಾನ ಹೊರಹಾಕ್ತಿದ್ದು ಮಳೆ ಪ್ರಾರಂಭವಾಗೋ ಮುನ್ನವೇ ಕಾಮಗಾರಿ ಮುಗಿಸಿ ಸಂಚಾರಕ್ಕೆ ಅನುವು ಮಾಡ್ಸಿ ಅಂತಿದ್ದಾರೆ.

PREV
Read more Articles on
click me!

Recommended Stories

Flipkar: 1 ಲಕ್ಷ ಸರ್ಕಾರಿ ಶಾಲಾ ಮಕ್ಕಳಿಗೆ ಫ್ಲಿಪ್‌ ಕಾರ್ಟ್, ಅಕ್ಷಯ ಪಾತ್ರೆ ಬೆಳಗಿನ ಉಪಾಹಾರ ವಿತರಣೆ
Ganesh Chaturthi 2026: ನಗರಗಳಷ್ಟೇ ಅಲ್ಲ, ಈ ಭಾರಿ ಹಳ್ಳಿಗಳಲ್ಲೂ ಗಣಪತಿ ಹಬ್ಬಕ್ಕೂ ಕಡಿವಾಣ! ಈ ನಿಯಮಗಳ ಪಾಲಿಸಲೇಬೇಕು!