* ಹೃದಯಾಘಾತದಿಂದ ನಿಧನರಾದ ಈರಣ್ಣ ಮಲ್ಲಿಗವಾಡ
* ವಾಲ್ಮೀಕಿ ನಾಯಕ ಸಮಾಜದ ಮುಖಂಡರಾಗಿದ್ದ ಈರಣ್ಣ
* ಇಂದು ಮಧ್ಯಾಹ್ನ ಅಂತ್ಯಕ್ರಯೆ
ಧಾರವಾಡ(ಏ.27): ಇಲ್ಲಿನ ಗಾಂಧಿನಗರ ನಿವಾಸಿ, ವಾಲ್ಮೀಕಿ ನಾಯಕ ಸಮಾಜದ ಮುಖಂಡ ಈರಣ್ಣ ನಾಗಪ್ಪ ಮಲ್ಲಿಗವಾಡ(59) ನಿನ್ನೆ(ಮಂಗಳವಾರ) ರಾತ್ರಿ ಹೃದಯಾಘಾತದಿಂದ(Heart Attack) ನಿಧನರಾದರು.
ಮೃತರು ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಪಾರ್ಥಿವ ಶರೀರದ ಅಂತ್ಯಕ್ರಿಯೆ ಧಾರವಾಡ(Dharwad) ನಗರದ ಹೊಸಯಲ್ಲಾಪುರ ರುದ್ರಭೂಮಿಯಲ್ಲಿ ಇಂದು(ಬುಧವಾರ) ಮಧ್ಯಾಹ್ನ ಅಂತ್ಯಸಂಸ್ಕಾರ(funeral) ಜರುಗಲಿದೆ ಅಂತ ಕುಟುಂಬಸ್ಥರಿಂದ ಮಾಹಿತಿ ಲಭ್ಯವಾಗಿದೆ.
ಕಾಂಗ್ರೆಸ್ ಹಿರಿಯ ಶಾಸಕ ಹೆಚ್ ಕೆ ಪಾಟೀಲರಿಗೆ ಮಾತೃವಿಯೋಗ
ಈರಣ್ಣ ನಾಗಪ್ಪ ಮಲ್ಲಿಗವಾಡ(Iranna Nagappa Malligawad) ಅಗಲಿಕೆಗೆ ವಾಲ್ಮೀಕಿ ನಾಯಕ ಸಮಾಜದ ಮುಖಂಡರು ಸಂತಾಪ ಸೂಚಿಸಿದ್ದಾರೆ.