'ದಿಂಗಾಲೇಶ್ವರ ಶ್ರೀ ನೀಡಿದ ಕಮಿಷನ್‌ ಬಹಿರಂಗಪಡಿಸಲಿ'

By Girish Goudar  |  First Published Apr 27, 2022, 8:46 AM IST

*   ಬಿಜೆಪಿ ಹಿರಿಯ ಮುಖಂಡ ನಾಗರಾಜ ಚಿಂಚಲಿ ಆಗ್ರಹ
*  ಬಾಲೆಹೊಸೂರಿನ ಮಠದ ಮುಂದೆ ಸತ್ಯಾಗ್ರಹ
*  ಮಠಾಧೀಶರು ಭಕ್ತರಿಗೆ ಧರ್ಮ ಬೋಧನೆ ಮಾಡಬೇಕೇ ಹೊರತು ರಾಜಕೀಯ ಮಾಡಬಾರದು


ಲಕ್ಷ್ಮೇಶ್ವರ(ಏ.27):  ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಸದಾನಂದಗೌಡ ಹಾಗೂ ಜಗದೀಶ ಶೆಟ್ಟರ ಅವರು ಅಧಿಕಾರದಲ್ಲಿದ್ದಾಗ ಮಠ-ಮಾನ್ಯಗಳಿಗೆ ಸಾಕಷ್ಟು ಅನುದಾನ(Grant) ನೀಡಿದ್ದಾರೆ. ಅದರಲ್ಲಿ ಬಾಲೆಹೊಸೂರಿನ ಮಠವೂ ಸೇರಿದೆ. ಈ ಅನುದಾನ ಬಿಡುಗಡೆಗಾಗಿ ನೀಡಿರುವ ಕಮಿಷನ್‌ ವಿವರವನ್ನು ದಿಂಗಾಲೇಶ್ವರ ಶ್ರೀಗಳು(Dingaleshwara Swamiji) ಬಹಿರಂಗಪಡಿಸಬೇಕು ಎಂದು ಪಟ್ಟಣದ ಬಿಜೆಪಿ(BJP) ಹಿರಿಯ ಮುಖಂಡ ನಾಗರಾಜ ಚಿಂಚಲಿ ಆಗ್ರಹಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ಯಡಿಯೂರಪ್ಪ(BS Yediyurappa) ಅವರು ಮುಖ್ಯಮಂತ್ರಿಯಾಗಿದ್ದಾಗ ಶಿರಹಟ್ಟಿ ಫಕ್ಕೀರೇಶ್ವರ ಮಠಕ್ಕೆ ನೀಡಿದ್ದ .2 ಕೋಟಿ ಅನುದಾನ ನೀಡಿದ್ದಾರೆ. ಆ ಹಣ ಬಿಡುಗಡೆ ವೇಳೆಗೆ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬಂದಿತ್ತು. ಆ ಹಣಕ್ಕೆ ಎಷ್ಟು ಕಮಿಷನ್‌ ನೀಡಿದರು ಎನ್ನುವುದನ್ನು ಬಹಿರಂಗ ಪಡಿಸಬೇಕು ಎಂದಿದ್ದಾರೆ.

Latest Videos

undefined

ಸರ್ಕಾರದ ವಿರುದ್ಧ ದಿಂಗಾಲೇಶ್ವರ ಶ್ರೀ ಮತ್ತೊಂದು ಬಾಂಬ್, ಸಚಿವಗೆ ಖಡಕ್ ಎಚ್ಚರಿಕೆ

ಸಚಿವ ಸಿ.ಸಿ. ಪಾಟೀಲ(CC Patil) ಅವರ ಮನೆಯ ಮುಂದೆ 27ರಿಂದ ತಾವು ಪ್ರತಿಭಟನೆ ಮಾಡಿದಲ್ಲಿ ಬಿಜೆಪಿ ಕಾರ್ಯಕರ್ತರು ಶಿರಹಟ್ಟಿಯ ಫಕ್ಕೀರೇಶ್ವರ ಮಠ ಹಾಗೂ ಬಾಲೆಹೊಸೂರಿನ ದಿಂಗಾಲೇಶ್ವರ ಮಠದ ಮುಂದೆ ಪ್ರತಿಭಟನೆ ಮಾಡಬೇಕಾಗುತ್ತದೆ. ಒಂದು ರಾಜಕೀಯ ಪಕ್ಷದ ವಕ್ತಾರರಂತೆ ಮಾತನಾಡುವುದನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ಮುಂದೆ ಅದರ ಫಲವನ್ನು ನೀವು ಎದುರಿಸಬೇಕಾಗುತ್ತದೆ ಎಂದು ರಮೇಶ ಹಾಳತೋಟದ, ರುದ್ರಪ್ಪ ಉಮಚಗಿ, ಮಂಜುನಾಥ ಉಮಚಗಿ, ಸಿದ್ದಣ್ಣ ಸವಣೂರ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.

ಬಾಲೆಹೊಸೂರಿನ ಮಠದ ಮುಂದೆ ಸತ್ಯಾಗ್ರಹ

ಯಾರದೋ ಮಾತಿಗೆ ಕಟ್ಟುಬಿದ್ದ ದಿಂಗಾಲೇಶ್ವರ ಶ್ರೀಗಳು ಸರ್ಕಾರ ಮತ್ತು ಸಚಿವ ಸಿ.ಸಿ. ಪಾಟೀಲರ ವಿರುದ್ಧ ಹೇಳಿಕೆಗಳನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಅವರ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಸಮೀಪದ ಅಡರಕಟ್ಟಿಗ್ರಾಪಂ ಅಧ್ಯಕ್ಷ ನಿಂಗಪ್ಪ ಪ್ಯಾಟಿ, ನಾಗನಗೌಡ ಪಾಟೀಲ, ಕುಮಾರ ಚಕ್ರಸಾಲಿ, ಹರೀಶ ಲಮಾಣಿ, ಸೋಮಣ್ಣ ಹವಳದ ಎಚ್ಚರಿಸಿದ್ದಾರೆ. ಈ ಕುರಿತು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಶ್ರೀಗಳು ಪೂರ್ವಾಗ್ರಹ ಪೀಡಿತರಾಗಿ ಸಚಿವರ ವಿರುದ್ಧ ಹೋರಾಟಕ್ಕೆ ಮುಂದಾಗುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಮಠಾಧೀಶರು ಭಕ್ತರಿಗೆ ಧರ್ಮ ಬೋಧನೆ ಮಾಡಬೇಕೇ ಹೊರತು ರಾಜಕೀಯ ಮಾಡಬಾರದು. ಶ್ರೀಗಳು ಸಚಿವರ ಮನೆ ಎದುರು ಸತ್ಯಾಗ್ರಹ ಮಾಡಿದರೆ, ನಾವೂ ಅವರ ಮಠದ ಎದುರು ಸತ್ಯಾಗ್ರಹ ಮಾಡಬೇಕಾಗುತ್ತದೆ ಎಂದು ಹೇಳಿದರು.
 

click me!