ಈರುಳ್ಳಿ ಹಿಡಿದು ಕಾಂಗ್ರೆಸ್‌ ಹೋರಾಟ..!

By Kannadaprabha NewsFirst Published Dec 10, 2019, 8:44 AM IST
Highlights

ಮಂಡ್ಯ ಜಿಲ್ಲಾ ಕಾಂಗ್ರೆಸ್‌ ಕಚೇರಿ ಬಳಿ ಈರುಳ್ಳಿ ಹಿಡಿದು ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ದಿನ ಬಳಕೆಯ ಅಗತ್ಯ ವಸ್ತುಗಳ ಬೆಲೆ ಏರಿಕೆ ನೀತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಡ್ಯ(ಡಿ.10): ನಿತ್ಯ ಬಳಸುವ ಈರುಳ್ಳಿ ಬೆಲೆಯನ್ನು ಇಳಿಕೆ ಮಾಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಕಾಂಗ್ರೆಸ್‌ ಕಾರ್ಯಕರ್ತರು ನಗರದಲ್ಲಿ ಸೋಮವಾರ ಈರುಳ್ಳಿ ಹಿಡಿದು ಪ್ರತಿಭಟನೆ ನಡೆಸಿದ್ದಾರೆ.

ನಗರದ ಜಿಲ್ಲಾ ಕಾಂಗ್ರೆಸ್‌ ಕಚೇರಿ ಬಳಿ ಈರುಳ್ಳಿ ಹಿಡಿದು ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ದಿನ ಬಳಕೆಯ ಅಗತ್ಯ ವಸ್ತುಗಳ ಬೆಲೆ ಏರಿಕೆ ನೀತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುಮಲತಾ ಬೆಂಬಲ ಇಲ್ಲದೇ ಬಿಜೆಪಿ ಗೆಲುವು..!

ಜಿಲ್ಲಾ ಮಹಿಳಾ ಕಾಂಗ್ರೆಸ್‌ ಸಮಿತಿ ಮಹಿಳಾ ಘಟಕ ಅಧ್ಯಕ್ಷೆ ಅಂಜನಾ ಶ್ರೀಕಾಂತ್‌ ಮಾತನಾಡಿ, ಪ್ರತಿನಿತ್ಯ ಮನುಷ್ಯನಿಗೆ ಆಹಾರ ಅತ್ಯಂತ ಅವಶ್ಯಕ. ಅಗತ್ಯವಾಗಿ ಸೇವಿಸುವ ಆಹಾರ ಪದಾರ್ಥಗಳು ಮತ್ತು ಈರುಳ್ಳಿ ಬೆಲೆ ಜನಸಾಮಾನ್ಯರಿಗೆ ಕೈಗೆಟುಕದೆ ಗಗನಕ್ಕೇರಿದೆ ಎಂದು ಕಿಡಿಕಾರಿದ್ದಾರೆ.

ಈರುಳ್ಳಿ ಬೆಲೆ ತಕ್ಷಣ ಜನಸಾಮಾನ್ಯರಿಗೆ ದೀನದಲಿತರಿಗೆ, ಬಡವರಿಗೆ ಕೈಗೆಟುಕುವ ರೀತಿಯಲ್ಲಿಲ್ಲ. ಇದಕ್ಕೆ ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿಯೇ ಕಾರಣ. ನಿರಂತರವಾಗಿ ಜನಸಾಮಾನ್ಯರು ಬಳಸುವ ಎಲ್ಲಾ ವಸ್ತುಗಳ ಮೇಲೆ ಹೆಚ್ಚಿನ ತೆರಿಗೆ ಮತ್ತು ಆಹಾರ ಪದಾರ್ಥಗಳ ಬೆಲೆ ದ್ವಿಗುಣ ಮಾಡಿಸಿ ಬಡವರ ಮೇಲೆ ಬರೆ ಎಳೆಯುತ್ತಿದೆ ಎಂದು ದೂರಿದ್ದಾರೆ.

ಹೊಸ ವರ್ಷಕ್ಕೆ ಮಂಗಳೂರಿಗರಿಗೆ KSRTC ಬಂಪರ್..!

ಈರುಳ್ಳಿ ಸೇರಿದಂತೆ ದಿನ ಬಳಕೆ ವಸ್ತುಗಳಾದ ಗ್ಯಾಸ್‌ ಸಿಲಿಂಡರ್‌, ಪೆಟ್ರೋಲ್, ಡೀಸೆಲ್‌ ಬೆಲೆ ಏರಿಕೆ ತಕ್ಷಣ ಕಡಿಮೆಗೊಳಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.

ಈ ವೇಳೆ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸಿ.ಡಿ.ಗಂಗಾಧರ್‌, ಮುಖಂಡರಾದ ಮಂಜುನಾಥ್‌, ಸಿ.ಎಂ.ದ್ಯಾವಪ್ಪ, ಪ್ರವೀಣ್‌, ಪದ್ಮಾ, ಕಮಲಾ, ರಾಮಲಿಂಗಯ್ಯ, ಚನ್ನಪ್ಪ, ರಶ್ಮಿ, ಗುರುಪ್ರಸಾದ್‌, ವಿಜಯಲಕ್ಷ್ಮೇ ರಘುನಂದನ್‌, ರಾಮಲಿಂಗಯ್ಯ, ಶ್ರೀಧರ್‌ ಸೇರಿದಂತೆ ಹಲವರು ಭಾಗವಹಿಸಿದ್ದರು.

click me!