‘ನಮ್ಮಿಂದಲೇ ನೀವು ಸಿಎಂ ಆಗಿರೋದು : ಸಚಿವ ಸ್ಥಾನ ನೀಡಲೇಬೇಕು ಎಂದ್ರು’

By Kannadaprabha News  |  First Published Jan 13, 2020, 12:01 PM IST

ನಮ್ಮಿಂದಲೇ ನೀವು ಮುಖ್ಯಮಂತ್ರಿ ಆಗಿದ್ದು, ಆದ್ದರಿಂದ ನಮಗೆ ಸಚಿವ ಸ್ಥಾನ ನೀಡಬೇಕು ಎಂದು ಇದೀಗ ಮುಖ್ಯಮಂತ್ರಿ ಮುಂದೆ ಬೇಡಿಕೆ ಇಡಲಾಗುತ್ತಿದೆ. ಆದ್ರೆ ಸರ್ಕಾರದಲ್ಲಿ ಮಾತ್ರ ಸಂಪುಟ ವಿಸ್ತರಣೆಗೆ ಇನ್ನೂ ಮೀನಾಮೇಷ ನಡೆಯುತ್ತಿದೆ.


ದಾವಣಗೆರೆ [ಜ.13]: ರಾಜ್ಯದಲ್ಲಿ ಉಪ ಚುನಾವಣೆ ಮುಕ್ತಾಯವಾಗಿ ತಿಂಗಳು ಕಳೆದರೂ ಸಚಿವ ಸಂಪುಟ ವಿಸ್ತರಣೆಯಾಗಿಲ್ಲ. ಇನ್ನೇನು ಕೆಲ ದಿನಗಳಲ್ಲಿ ರಾಜ್ಯದಲ್ಲಿ  ಉಪ ಚುನಾವಣೆ ನಡೆಯುವ ಸಾಧ್ಯತೆ ಇದ್ದು, ಇದೇ ವೇಳೆ ಮೂವರು ಪಂಚಮಸಾಲಿಗಳಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಲಾಗಿದೆ. 

ದಾವಣಗೆರೆಯಲ್ಲಿ  ಮಾತನಾಡಿದ ಪಂಚಮಸಾಲಿ ಜಗದ್ಗುರು ವಚನಾನಂದ ಸ್ವಾಮೀಜಿ, ಮುರುಗೇಶ್ ನಿರಾಣಿ ಸೇರಿದಂತೆ ಮೂವರು ಶಾಸಕರಿಗೆ ಸಚಿವ ಸ್ಥಾನ ನೀಡಲೇಬೇಕು ಎಂದು ಹೇಳಿದ್ದಾರೆ. 

Tap to resize

Latest Videos

ದಾವಣಗೆರೆ ಜಿಲ್ಲೆಯ ಹರಿಹರದ ಪಂಚಮಸಾಲಿ ಮಠದ ಆವರಣದಲ್ಲಿ ಜನವರಿ 14 , 15 ರಂದು  ಹರ ಜಾತ್ರೆ ನಡೆಯಲಿದ್ದು, ಇದೇ ವೇಳೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಜಾತ್ರೆಯಲ್ಲಿ ಪಾಲ್ಗೊಳ್ಳಲಿದ್ದು, ಈ ವೇಳೆ ಮುಖ್ಯಮಂತ್ರಿಗಳ ಮುಂದೆ ಸಚಿವ ಸ್ಥಾನಕ್ಕಾಗಿ ಅಹವಾಲು ಸಲ್ಲಿಸಲಾಗುವುದು ಎಂದು ಸ್ವಾಮೀಜಿ ಹೇಳಿದರು. 

ಸಂಪುಟ ವಿಸ್ತರಣೆಗೆ ಹೊಸ ಸಮಸ್ಯೆ : ಸಿಎಂಗೆ ವರಿಷ್ಠರ ತಾಕೀತು?...

ಸ್ವಾಮೀಜಿ ಮುರುಗೇಶ ನಿರಾಣಿ ಪರವಾಗಿ ಬ್ಯಾಟ್ ಬೀಸಿದ್ದು, ಸಚಿವ ಸ್ಥಾನ ನೀಡಲೇಬೇಕು.  ನಿಮ್ಮನ್ನು ಮುಖ್ಯಮಂತ್ರಿ ಮಾಡಲು ಪಂಚಮಸಾಲಿ ಸಮುದಾಯ ಶ್ರಮಿಸಿದೆ. ಒಟ್ಟು 14 ಜನ ಪಂಚಮಸಾಲಿ ಸಮುದಾಯದ ಶಾಸಕರಿದ್ದಾರೆ.  

ಸವದಿ, ಶಂಕರ್‌ಗೆ ಎಂಎಲ್‌ಸಿ ಆತಂಕ! ಒಂದೇ ಸ್ಥಾನಕ್ಕೆ ಇಬ್ಬರ ಕಣ್ಣು...

ಸಂಖ್ಯೆ ನೋಡಿ ಸಾಮಾಜಿಕ‌ ನ್ಯಾಯ ನೀಡಿ. ನಮ್ಮ ನಂಬರ್ ಚೆನ್ನಾಗಿರುವುದರಿಂದಲೇ ನೀವು ಮುಖ್ಯ ಮಂತ್ರಿಯಾಗಿರುವುದು, ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಬೇಡವೆಂದು ಸ್ವಾಮೀಜಿ ಹೇಳಿದರು.

click me!