ಹರಜಾತ್ರೆ: ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್‌ಗೆ ಆಹ್ವಾನ

Kannadaprabha News   | Asianet News
Published : Dec 18, 2020, 10:14 AM IST
ಹರಜಾತ್ರೆ: ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್‌ಗೆ ಆಹ್ವಾನ

ಸಾರಾಂಶ

ಶ್ರೀವಚನಾನಂದ ಸ್ವಾಮಿಗಳ 2021ರ ‘ಯೋಗ’ ಕ್ಯಾಲೆಂಡರ್‌ ಬಿಡುಗಡೆ| ದಾವಣಗೆರೆ ಜಿಲ್ಲೆಯ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ನಡೆಯುವ ಹರ ಜಾತ್ರಾ ಮಹೋತ್ಸವ| ಹರ ಜಾತ್ರಾ ಮಹೋತ್ಸವಕ್ಕೆ ಆಗಮಿಸುವುದಾಗಿ ಒಪ್ಪಿಗೆ ಸೂಚಿಸಿದ ದೇವೇಂದ್ರ ಫಡ್ನವೀಸ್‌| 

ದಾವಣಗೆರೆ(ಡಿ.18): ಮಹಾರಾಷ್ಟ್ರ ವಿಪಕ್ಷ ನಾಯಕ, ಮಾಜಿ ಸಿಎಂ ದೇವೇಂದ್ರ ಫಡ್ನವೀಸ್‌ ಅವರನ್ನು ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ನಡೆಯುವ ಹರ ಜಾತ್ರಾ ಮಹೋತ್ಸವ-2021ಕ್ಕೆ ಶ್ರೀವಚನಾನಂದ ಸ್ವಾಮೀಜಿ ಸಮ್ಮುಖದಲ್ಲಿ ಸಮಾಜದಿಂದ ಆಹ್ವಾನಿಸಲಾಯಿತು.

ಹರ ಜಾತ್ರಾ ಮಹೋತ್ಸವಕ್ಕೆ ಆಗಮಿಸುವುದಾಗಿ ದೇವೇಂದ್ರ ಫಡ್ನವೀಸ್‌ ಅವರು ಶ್ರೀವಚನಾನಂದ ಸ್ವಾಮಿಗಳ ಸಮ್ಮುಖದಲ್ಲಿ ಒಪ್ಪಿದರು. ಇದೇ ವೇಳೆ 2021ರ ಯೋಗ ಕ್ಯಾಲೆಂಡರ್‌ ಅನ್ನು ದೇವೇಂದ್ರ ಫಡ್ನವೀಸ್‌ ಬಿಡುಗಡೆ ಮಾಡಿದ್ದಾರೆ. 

ಪಾಳು ಬಿದ್ದಿದೆ ಹೊಸ ಹಾಸ್ಟೆಲ್, ಕ್ಯಾರೇ ಅಂತಿಲ್ಲ ಅಧಿಕಾರಿಗಳು, ಕೇಳೋರಿಲ್ಲ ವಿದ್ಯಾರ್ಥಿಗಳ ಗೋಳು

ಶಾಸಕ, ಮಾಜಿ ಸಚಿವ ಮುರುಗೇಶ್‌ ನಿರಾಣಿ, ನಗರ ಮೂಲಭೂತ ಹಣಕಾಸು ಅಭಿವೃದ್ಧಿ ನಿಗಮದ ಅಧ್ಯಕ್ಷ, ನವಲಗುಂದ ಶಾಸಕ ಶಂಕರ ಪಾಟೀಲ್‌ ಮುನೇನಕೊಪ್ಪ, ಶ್ರೀಪೀಠದ ಧರ್ಮದರ್ಶಿ ಚಂದ್ರಶೇಖರ್‌ ಪೂಜಾರ, ರಾಮಿ ಹೋಟೆಲ್‌ ಮತ್ತು ರೆಸಾರ್ಟ್‌ನ ನಿಶ್ಚಿತ್‌ ಶೆಟ್ಟಿ, ಜತೀನ್‌ ದೇಸಾಯಿ ಇತರರು ಇದ್ದರು.
 

PREV
click me!

Recommended Stories

ಬೆಂಗಳೂರು : ಹೊಸ ವರ್ಷಾಚರಣೆಗೆ ಹೊಸ ಮಾರ್ಗಸೂಚಿಗೆ ಸಿದ್ಧತೆ
ನಗರ ವಿವಿ ಎಡವಟ್ಟು: 400 ಎಂಕಾಂ ಸ್ಟೂಡೆಂಟ್ಸ್ ಫೇಲ್‌!