ಗರ್ಭಿಣಿಯರಿಗೆ, 5 ವರ್ಷದೊಳಗಿನ ಮಕ್ಕಳಿಗೆ ಇಂದಿನಿಂದ ಚುಚ್ಚುಮದ್ದು

By Kannadaprabha News  |  First Published Apr 23, 2020, 7:54 AM IST

5 ವರ್ಷದೊಳಗಿನ ಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ನೀಡಬೇಕಾಗಿದ್ದ ವಿವಿಧ ಹಂತದ ಚುಚ್ಚುಮದ್ದುಗಳನ್ನುನೀಡಲು ಆರಂಭಿಸಲಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ.ಸುಧೀರ್‌ಚಂದ್ರ ಸೂಡಾ ತಿಳಿಸಿದ್ದಾರೆ.


ಉಡುಪಿ(ಏ.23): ಲಾಕ್‌ಡೌನ್‌ನಿಂದಾಗಿ ಕಳೆದೊಂದು ತಿಂಗಳಿಂದ 5 ವರ್ಷದೊಳಗಿನ ಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ನೀಡಬೇಕಾಗಿದ್ದ ವಿವಿಧ ಹಂತದ ಚುಚ್ಚುಮದ್ದುಗಳನ್ನು ಅನಿವಾರ್ಯವಾಗಿ ನಿಲ್ಲಿಸಲಾಗಿತ್ತು.

ಈ ಚುಚ್ಚುಮದ್ದುಗಳನ್ನು ಏ.23ರಿಂದ ಮತ್ತೆ ನೀಡಲು ಆರಂಭಿಸಲಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ.ಸುಧೀರ್‌ಚಂದ್ರ ಸೂಡಾ ತಿಳಿಸಿದ್ದಾರೆ.

Latest Videos

undefined

ಸಮುದ್ರ ಮಧ್ಯೆ ಅತಂತ್ರ ಸ್ಥಿತಿಯಲ್ಲಿ ಬಾಕಿಯಾಗಿದ್ದ ನೌಕೆ ಮುಂಬೈನಲ್ಲಿ ಲಂಗರು

ಜಿಲ್ಲೆಯ ಮಹಿಳಾ, ಮಕ್ಕಳ ಆಸ್ಪತ್ರೆ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಸೋಮವಾರದಿಂದ ಶನಿವಾರ, ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಪ್ರತಿ ಗುರುವಾರ ಮಕ್ಕಳಿಗೆ ನೀಡುವ ವಿವಿಧ ಲಸಿಕೆಗಳು, ಚುಚ್ಚುಮದ್ದುಗಳನ್ನು ನೀಡಲಾಗುವುದು ಎಂದು ಹೇಳಿದ್ದಾರೆ.

ಲಾಕ್‌ಡೌನ್‌ ಸಂಕಷ್ಟ: 3000 ಕೋಳಿ ದಫನ ಮಾಡಿದ ಕುಕ್ಕುಟೋದ್ಯಮಿ ಆತ್ಮಹತ್ಯೆ

ಲಸಿಕೆ ತೆಗೆದುಕೊಳ್ಳಲು ವಾಹನಗಳಲ್ಲಿ ಬರುವಾಗ ತಾಯಿ ಕಾರ್ಡ್‌ ಅಥವಾ ಲಸಿಕೆ ಕಾರ್ಡ್‌ಗಳನ್ನು ಪೊಲೀಸರಿಗೆ ತೋರಿಸಬೇಕು. ಆರೋಗ್ಯ ಕೇಂದ್ರಕ್ಕೆ ಬರಲು ಲಾಕ್‌ಡೌನ್‌ನ ನಿರ್ಬಂಧವಿರುವುದಿಲ್ಲ ಎಂದು ಜಿಲ್ಲಾ ಆರ್‌.ಸಿ.ಎಚ್‌. ಅಧಿಕಾರಿ ಡಾ.ಎಂ.ಜಿ.ರಾಮ ತಿಳಿಸಿದ್ದಾರೆ.

click me!