ಮಹಾರಾಷ್ಟ್ರದಿಂದ ರಾಜ್ಯಕ್ಕೆ ಕೋವಿಡ್‌-19 ಪ್ರವಾಹ..!

Kannadaprabha News   | Asianet News
Published : May 18, 2020, 07:35 AM IST
ಮಹಾರಾಷ್ಟ್ರದಿಂದ ರಾಜ್ಯಕ್ಕೆ ಕೋವಿಡ್‌-19 ಪ್ರವಾಹ..!

ಸಾರಾಂಶ

ಉತ್ತರ ಕನ್ನಡಕ್ಕೂ ಹರಿದುಬರುತ್ತಿರುವ ಜನರು| ಕೊರೋನಾದಿಂದ ಮಹಾರಾಷ್ಟ್ರ ತತ್ತರ| ದೇಶದಲ್ಲೇ ಅತಿಹೆಚ್ಚು ಸಂಖ್ಯೆಯ ಕೋವಿಡ್‌ -19 ಸೋಂಕಿತರು ಮಹಾರಾಷ್ಟ್ರದಲ್ಲಿದ್ದಾರೆ| ಮಹಾರಾಷ್ಟ್ರದ ಮುಂಬಯಿ, ಥಾಣೆ, ಪುಣೆ, ಮಾಲೇಂಗಾವ ಹಾಗೂ ಔರಂಗಾಬಾದ್‌ಗಳಲ್ಲಿ ಕೋವಿಡ್‌ -19 ವ್ಯಾಪಕ| ಕಾರವಾರದ ಉದ್ಯೋಗಿಗಳು, ಕಾರ್ಮಿಕರು ಮಹಾರಾಷ್ಟ್ರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮಹಾರಾಷ್ಟ್ರದಲ್ಲಿದ್ದಾರೆ| 

ಕಾರವಾರ(ಮೇ.18): ಮಹಾರಾಷ್ಟ್ರದಿಂದ ಈಗ ಕರ್ನಾಟಕಕ್ಕೆ ಕೋವಿಡ್‌ -19 ಪ್ರವಾಹ ಬರುತ್ತಿದೆ. ಉತ್ತರ ಕನ್ನಡಕ್ಕೂ ಅಲ್ಲಿಂದ ಜನತೆ ಬರುತ್ತಿದ್ದು, ಜಿಲ್ಲೆಯ ಕೋವಿಡ್‌ -19 ಸಂಖ್ಯೆಯಲ್ಲಿ ದಿಢೀರ್‌ ಹೆಚ್ಚಳವಾಗುವ ಸಾಧ್ಯತೆ ದಟ್ಟವಾಗಿದೆ.

ಮಹಾರಾಷ್ಟ್ರ ಕೊರೋನಾದಿಂದ ತತ್ತರಿಸಿದೆ. ದೇಶದಲ್ಲೇ ಅತಿಹೆಚ್ಚು ಸಂಖ್ಯೆಯ ಕೋವಿಡ್‌ -19 ಸೋಂಕಿತರು ಅಲ್ಲಿದ್ದಾರೆ. ಅದರಲ್ಲೂ ಮಹಾರಾಷ್ಟ್ರದ ಮುಂಬಯಿ, ಥಾಣೆ, ಪುಣೆ, ಮಾಲೇಂಗಾವ ಹಾಗೂ ಔರಂಗಾಬಾದ್‌ಗಳಲ್ಲಿ ಕೋವಿಡ್‌ -19 ವ್ಯಾಪಕವಾಗಿದೆ. ಉತ್ತರ ಕನ್ನಡದ ಅದರಲ್ಲೂ ಕಾರವಾರದ ಉದ್ಯೋಗಿಗಳು, ಕಾರ್ಮಿಕರು ಮಹಾರಾಷ್ಟ್ರದಲ್ಲಿ ಸಾವಿರಾರು ಸಂಖ್ಯೆಯಲ್ಲಿದ್ದಾರೆ. ಅವರೆಲ್ಲ ಈಗ ಊರಿನತ್ತ ಮುಖ ಮಾಡಿದ್ದಾರೆ.

ಕ್ವಾರೆಂಟೈನ್ ಸೀಲ್ ಇದ್ದ ವ್ಯಕ್ತಿ ಹೃದಯಾಘಾತದಿಂದ ಸಾವು

ಮೊದಲು ತಬ್ಲಿಘಿಗಳಿಂದ ಕೋವಿಡ್‌ -19 ಸೋಂಕು ದೇಶಾದ್ಯಂತ ವ್ಯಾಪಿಸಿತು. ಈಗ ಮಹಾರಾಷ್ಟ್ರದಲ್ಲಿ ಉದ್ಯೋಗ, ಕಾರ್ಮಿಕರಾಗಿ ದುಡಿಯುತ್ತಿದ್ದವರು ದೇಶದ ವಿವಿಧೆಡೆ ತೆರಳುತ್ತಿದ್ದಾರೆ. ಅವರಲ್ಲಿ ಬಹುತೇಕರು ಸೋಂಕು ಹೊತ್ತು ಹೋಗುತ್ತಿದ್ದಾರೆ. ಹಾಗೆಯೇ ಕರ್ನಾಟಕ, ಉತ್ತರ ಕನ್ನಡಕ್ಕೂ ಬರುತ್ತಿದ್ದಾರೆ. ಭಾನುವಾರ ಮಧ್ಯಾಹ್ನದ ಬುಲೆಟಿನ್‌ನಲ್ಲಿ ಒಟ್ಟೂಕೋವಿಡ್‌ -19 ಸೋಂಕು ದೃಢಪಟ್ಟವರು 54. ಇವರಲ್ಲಿ 40 ಜನರು ಮಹಾರಾಷ್ಟ್ರದಿಂದ ಬಂದವರು. ಪ್ರತಿ ದಿನವೂ ಮಹಾರಾಷ್ಟ್ರದಿಂದ ಬರುವವರು ರಾಜ್ಯದ ಕೋವಿಡ್‌ -19 ಸೋಂಕಿತರ ಪಟ್ಟಿಯನ್ನು ದೊಡ್ಡದು ಮಾಡುತ್ತಿದ್ದಾರೆ. ಕೇವಲ ರೈಲಿನಲ್ಲಿ ಮಾತ್ರವಲ್ಲ. ಕಾರು, ಟ್ಯಾಕ್ಸಿಗಳ ಮೂಲಕವೂ ಮಹಾರಾಷ್ಟ್ರದಿಂದ ಜನರು ಬರುತ್ತಿದ್ದಾರೆ.
ಸದ್ಯದಲ್ಲೆ ಮಹಾರಾಷ್ಟ್ರ ಮೂಲಕ ರೈಲು ಕಾರವಾರದಿಂದ ಹಾದುಹೋಗಲಿದೆ. ಈ ರೈಲಿಗೆ ಕಾರವಾರದಲ್ಲಿ ನಿಲುಗಡೆ ಇಲ್ಲ. ಅವರೆಲ್ಲ ಗೋವಾದ ಮಡಗಾಂವ ಹಾಗೂ ಉಡುಪಿಗೆ ಬಂದು ಅಲ್ಲಿಂದ ಜಿಲ್ಲೆಯನ್ನು ಪ್ರವೇಶಿಸಲಿದ್ದಾರೆ. 14 ದಿನಗಳ ಕಾಲ ಕಡ್ಡಾಯವಾಗಿ ಇವರನ್ನು ಕ್ವಾರೆಂಟೈನ್‌ಗೆ ಒಳಪಡಿಸಲಾಗುತ್ತದೆ. ಕೆಲವರಲ್ಲಿ 14 ದಿನಗಳ ನಂತರವೂ ಸೋಂಕು ಕಾಣಿಸಿಕೊಳ್ಳುವುದು ಇನ್ನಷ್ಟು ಆತಂಕವನ್ನು ಹುಟ್ಟಿಸಿದೆ.

ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ತೆರಳಲು ಸರ್ಕಾರವೇ ಪರವಾನಗಿ ನೀಡುತ್ತಿದೆ. ಹೀಗಾಗಿ ಜನತೆ ಅಧಿಕೃತ ಪರವಾನಗಿ ಪಡೆದೆ ಊರಿಗೆ ಮರಳುತ್ತಿದ್ದಾರೆ. ಆದರೆ, ಅವರಲ್ಲಿ ಕೆಲವರು ಕೊರೋನಾ ಸೋಂಕನ್ನೂ ಹೊತ್ತು ತರುತ್ತಿದ್ದಾರೆ. ಸರ್ಕಾರದ ಕ್ವಾರೆಂಟೈನ್‌ ಸೆಂಟರ್‌ನಲ್ಲಿ ಅವರಿಗೆ ವ್ಯವಸ್ಥೆ ಮಾಡಲಾಗುತ್ತಿದೆ.

ಸರ್ಕಾರದ ತೀರ್ಮಾನದ ಹಿನ್ನೆಲೆಯಲ್ಲಿ ಬೇರೆ ಬೇರೆ ರಾಜ್ಯಗಳ ಜನತೆ ಆಗಮಿಸುತ್ತಿದ್ದಾರೆ. ಮಹಾರಾಷ್ಟ್ರದಿಂದಲೂ ಜನತೆ ಬರುತ್ತಿದ್ದಾರೆ. ಅವರನ್ನೆಲ್ಲ ನಿಯಮಾವಳಿ ಪ್ರಕಾರ ಕ್ವಾರೆಂಟೈನ್‌ ಮಾಡಲಾಗುತ್ತದೆ.
 

PREV
click me!

Recommended Stories

ದ್ವೇಷ ಭಾಷಣ ಪ್ರಕರಣ; ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ಗೆ ನಿರೀಕ್ಷಣಾ ಜಾಮೀನು!
Uttara Kannada: ಆಸ್ಪತ್ರೆಗೆ ಹೋಗಿದ್ದ ಗರ್ಭಿಣಿ ಹುಟ್ಟುಹಬ್ಬದಂದೇ ಸಾವು; ಹೊಟ್ಟೆಯಲ್ಲೇ ಅಸುನೀಗದ ಮಗು!