ಆಸ್ತಿ ವಿವಾದ: ವ್ಯಕ್ತಿಯ ಬರ್ಬರ ಕೊಲೆ, ಸಿಸಿಟಿವಿಯಲ್ಲಿ ದೃಶ್ಯ ಸೆರೆ

Kannadaprabha News   | Asianet News
Published : May 18, 2020, 07:24 AM IST
ಆಸ್ತಿ ವಿವಾದ: ವ್ಯಕ್ತಿಯ ಬರ್ಬರ ಕೊಲೆ, ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಸಾರಾಂಶ

ಕಬ್ಬಿಣದ ರಾಡ್‌ ಹಾಗೂ ಕಲ್ಲನ್ನು ಬಳಸಿ ವ್ಯಕ್ತಿಯ ಹತ್ಯೆ|  ಕೊಲೆಯಾದ ಉಮೇಶನ ದೊಡ್ಡಪ್ಪನ ಮಗ ಚನ್ನಬಸಪ್ಪ ಹಾಗೂ ಇತರರು ಕೂಡಿ ಶನಿವಾರ ಬೆಳಗ್ಗೆ ಉಮೇಶ ಅವರ ಮನೆ ಬಳಿಯೇ ಬರ್ಬರವಾಗಿ ಹೊಡೆದು ಕೊಲೆ ಮಾಡಿರುವ ದೃಶ್ಯ ನೋಡಿಗರ ಮೈ ಜುಮ್‌ ಎನಿಸುತ್ತದೆ| 

ಧಾರವಾಡ(ಮೇ.18): ಆಸ್ತಿ ವಿವಾದದ ಪ್ರಕರಣದಲ್ಲಿ ಸಹೋದರ ಉಮೇಶ ಬಾಳಗಿ ಎಂಬುವರನ್ನು ಕಬ್ಬಿಣದ ರಾಡ್‌ ಹಾಗೂ ಕಲ್ಲನ್ನು ಬಳಸಿ ಕೊಲೆ ಮಾಡಿರುವ ಘಟನೆ ಎಳೆಎಳೆಯಾಗಿ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. 

ಕೊಲೆಯಾದ ಉಮೇಶನ ದೊಡ್ಡಪ್ಪನ ಮಗ ಚನ್ನಬಸಪ್ಪ ಹಾಗೂ ಇತರರು ಕೂಡಿ ಶನಿವಾರ ಬೆಳಗ್ಗೆ ಉಮೇಶ ಅವರ ಮನೆ ಬಳಿಯೇ ಬರ್ಬರವಾಗಿ ಹೊಡೆದು ಕೊಲೆ ಮಾಡಿರುವ ದೃಶ್ಯ ನೋಡಿಗರ ಮೈ ಜುಮ್‌ ಎನಿಸುತ್ತದೆ. ಈ ಘಟನೆಯನ್ನು ನೋಡುವ ಉಮೇಶನ ಪತ್ನಿ ಉಮಾ ಅವರ ಮೇಲೂ ಹಲ್ಲೆ ಮಾಡಲು ಆರೋಪಿಗಳು ಓಡಿ ಬಂದಾಗ ಕೂಡಲೇ ಮನೆಗೆ ಹೋಗಿ ಬಾಗಿಲು ಹಾಕಿಕೊಂಡು ತನ್ನ ಜೀವ ಉಳಿಸಿಕೊಳ್ಳುವ ದೃಶ್ಯವೂ ದಾಖಲಾಗಿದೆ.

ಶಿವಮೊಗ್ಗ: ದೇವಾಲಯದ ಹಿಂದೆ ಚೆಲ್ಲಿದ ರಕ್ತ, ಕೊಲೆಯಾಗಿಹೋದ ಸುರೇಶ

ಪ್ರಸ್ತುತ ಆರೋಪಿಗಳ ಬೆನ್ನು ಬಿದ್ದಿರುವ ಉಪ ನಗರ ಠಾಣೆ ಪೊಲೀಸರು ಆರೋಪಿಗಳ ಇರುವಿಕೆ ಪತ್ತೆ ಹಚ್ಚಿದ್ದಾರೆ. ಭಾನುವಾರ ತಡರಾತ್ರಿ ಅವರನ್ನು ಬಂಧಿಸಿದರೂ ಅಚ್ಚರಿ ಏನಿಲ್ಲ.
 

PREV
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!