ಭಟ್ಕಳ ಪಟ್ಟಣದ ಚಿನ್ನದಪಳ್ಳಿ ಬಳಿ ವಾಸವಿರುವ ನವಾಯತ್ ಕುಟುಂಬದವರು ಪ್ರಾಚೀನ ವಸ್ತು ಸಂಗ್ರಹಿಸಿ ಇದೀಗ ತಮ್ಮ ಮನೆಯನ್ನೇ ಈ ವಸ್ತುಗಳ ಸಂಗ್ರಹಾಲಯವನ್ನಾಗಿ ಮಾಡಿಕೊಂಡಿದ್ದಾರೆ.
ವರದಿ- ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್
ಉತ್ತರ ಕನ್ನಡ (ಜ.09): ಆಧುನಿಕತೆ ಬೆಳೆದಂತೆ ನಮ್ಮ ಜೀವನ ಶೈಲಿ ಕೂಡ ಬದಲಾಗುತ್ತಿದೆ. ಮಾನವ ತನ್ನ ಜೀವನಕ್ರಮಕ್ಕೆ ಅನೂಕೂಲವಾಗುವಂತಹ ವ್ಯವಸ್ಥೆಗೆ ಮಾರುಹೋಗುತ್ತಿದ್ದಾನೆ. ಅದರಂತೆ ನಮ್ಮ ಪೂರ್ವಜರು ಮನೆ, ಜಮೀನು ಕೆಲಸಗಳಿಗೆ ಹಾಗೂ ಗೃಹೋಪಯೋಗಿ ವಸ್ತುಗಳಾಗಿ ಬಳಸುತ್ತಿದ್ದ ಪುರಾತನ ಹಾಗೂ ಪ್ರಾಚೀನ ವಸ್ತುಗಳು ಇದೀಗ ಸಂಪೂರ್ಣ ಮರೆಯಾಗಿದೆ.
undefined
ಈ ವಸ್ತುಗಳ ಬದಲಾಗಿ ಇದೀಗ ತರಹೇವಾರು ಪ್ಲಾಸ್ಟಿಕ್, ಫೈಬರ್, ಗಾಜಿನ ವಸ್ತುಗಳು ಮನೆಗಳಲ್ಲಿ ರಾರಾಜಿಸುತ್ತಿವೆ. ಅತೀ ಕಡಿಮೆ ಬೆಲೆಗೆ ಈ ವಸ್ತುಗಳು ಸಿಗುವುದು ಮಾತ್ರವಲ್ಲದೇ ಹೆಚ್ಚು ಆಕರ್ಷಿತವಾಗುವ ಕಾರಣ ಜನ ಕೂಡ ಮಾರು ಹೋಗುತ್ತಿದ್ದಾರೆ. ಹೀಗಾಗಿ ಈ ಹಿಂದೆ ಬಳಸುತ್ತಿದ್ದ ಪುರಾತನ ವಸ್ತುಗಳು ಇದೀಗ ನೋಡುವುದಕ್ಕೂ ಸಿಗುವುದು ಕಷ್ಟ ಎಂಬಂತಾಗಿದೆ. ಆದರೆ, ಭಟ್ಕಳ ಪಟ್ಟಣದ ಚಿನ್ನದಪಳ್ಳಿ ಬಳಿ ವಾಸವಿರುವ ನವಾಯತ್ ಕುಟುಂಬದವರು ಪ್ರಾಚೀನ ವಸ್ತು ಸಂಗ್ರಹಿಸಿ ಇದೀಗ ತಮ್ಮ ಮನೆಯನ್ನೇ ಈ ವಸ್ತುಗಳ ಸಂಗ್ರಹಾಲಯವನ್ನಾಗಿ ಮಾಡಿಕೊಂಡಿದ್ದಾರೆ.
Uttarakannada: ದೇವಸ್ಥಾನಕ್ಕೆ ಕೃಷಿ ಜಾಗ ದಾನ ಮಾಡಲು ಒತ್ತಾಯ, ನಿರಾಕರಿಸಿದ ರೈತ ಕುಟುಂಬಕ್ಕೆ ಬಹಿಷ್ಕಾರ!
ಸಹಸ್ರ ಶತಮಾನೋತ್ಸವ ಆಚರಣೆ: ಮನೆಯಲ್ಲಿ ಹಳೆಯ ಕಾಲದ ಹಿತ್ತಾಳೆ, ಕಂಚಿನ ಪಾತ್ರೆ, ಪಿಂಗಾಣಿ ಭರಣಿ, ಕಂಚಿನ ದೀಪ, ಮಹಿಳೆಯರ ಅಲಂಕಾರಿಕಾ ವಸ್ತುಗಳ ಸಂಗ್ರಹದ ಮರದ ಪೆಟ್ಟಿಗೆ, ರೇಡಿಯೋ, ಸುಗಂಧದ್ರವ್ಯ ಸಿಂಪಡನೆಯ ವಸ್ತುಗಳು ಹೀಗೆ ಪ್ರತಿಯೊಂದನ್ನು ಇಲ್ಲಿ ಸಂಗ್ರಹ ಮಾಡಲಾಗಿದೆ. ಭಟ್ಕಳದ ಜಮಾತುಲ್ಲಾ ಮುಸ್ಲಿಮೀನ್ ಸಂಸ್ಥೆಯು ಒಂದು ಸಾವಿರ ವರ್ಷ ಪೂರೈಸಿದ ಹಿನ್ನೆಲೆ ಸಹಸ್ರ ಶತಮಾನೋತ್ಸವ ಆಚರಣೆ ಮಾಡುತ್ತಿದ್ದು, ಈ ಸಂದರ್ಭದಲ್ಲಿ ಪುರಾತನ ವಸ್ತುಗಳ ಪ್ರದರ್ಶನದ ಮೂಲಕ ಹಳೆಯ ವಸ್ತುಗಳ ಬಗ್ಗೆ ಜನರಿಗೆ ಮಾಹಿತಿ ನೀಡಲಾಗುತ್ತಿದೆ.
ಇತಿಹಾಸ ಅಧ್ಯಯನಕ್ಕೂ ಪೂರಕ: ವಿದ್ಯಾರ್ಥಿಗಳು, ಶಾಲಾ- ಕಾಲೇಜು ಶಿಕ್ಷಕರು, ಉಪನ್ಯಾಸಕರು, ಸಾರ್ವಜನಿಕರು ಈ ಅಪರೂಪದ ವಸ್ತುಗಳನ್ನು ಕಂಡು ಆಯೋಜಕರಿಂದ ಮಾಹಿತಿ ಪಡೆದು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುತ್ತಾರೆ. ಇನ್ನು ಭಟ್ಕಳಕ್ಕೆ ಬರುವ ಮೊದಲು ಇಲ್ಲಿನ ನವಾಯಿತಿ ಮುಸ್ಲಿಂ ಸಮುದಾಯದವರು ಶ್ರೀಲಂಕಾ, ಯೆಮೆನ್, ಮಲೇಷಿಯಾ ಭಾಗದಲ್ಲಿ ವಾಸವಿದ್ದರು. ಸಾವಿರ ವರ್ಷಗಳ ಹಿಂದೆ ವ್ಯಾಪಾರಕ್ಕಾಗಿ ಮೊದಲು ನವಾಯಿತಿಗಳು ಕಾಲಿಟ್ಟಿದ್ದು ಈ ಹಿಂದೆ ಹೊನೂರು ಎಂದು ಕರೆಸಿಕೊಳ್ಳುತ್ತಿದ್ದ ಈಗಿನ ಹೊನ್ನಾವರದ ಮಂಕಿಯಲ್ಲಿ. ಅಲ್ಲಿಂದ ಬಳಿಕ ಭಟ್ಕಳಕ್ಕೆ ಬಂದರು. ಇಲ್ಲಿ ಎರಡು ಮೂರು ತಿಂಗಳು ಉಳಿದುಕೊಂಡು ಇಲ್ಲಿಂದ ಕೇರಳದತ್ತ ಪ್ರಯಾಣಿಸಿದರು.
Uttara Kannada: ದೇವರೇ ಏನಿದು ಶಿಕ್ಷೆ?: ದೇವಸ್ಥಾನಕ್ಕೆ ಜಮೀನು ನೀಡದ ಕುಟುಂಬಕ್ಕೆ ಬಹಿಷ್ಕಾರ
ಒಟ್ಟಾರೆ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಮುಸ್ಲಿಂ ಸಮುದಾಯದವರು ಇದೀಗ ಪ್ರಾಚೀನ ವಸ್ತುಗಳನ್ನು ಸಂಗ್ರಹಿಸಿ ಯುವಜನತೆಗೆ ಹಿಂದಿನ ಕಾಲದ ಜನರು ಯಾವ ರೀತಿಯ ವಸ್ತುಗಳು ಉಪಯೋಗಿಸುತ್ತಿದ್ದರು ಎನ್ನುವುದನ್ನು ಪರಿಚಯಿಸಲು ಈ ವಸ್ತು ಪ್ರದರ್ಶನ ಆಯೋಜನೆ ಮಾಡಿದ್ದಾರೆ. ವಿದ್ಯಾರ್ಥಿಗಳು ಹಾಗೂ ಇತರೆ ಎಲ್ಲ ಸಾರ್ವಜನಿಕರಿಗೆ ಶತಮಾನಗಳಷ್ಟು ಹಳೆಯ ಗೃಹೋಪಯೋಗಿ ವಸ್ತುಗಳ ಪ್ರದರ್ಶನದ ವೇಳೆ ಮನೆಯ ಮಾಲೀಕರು ವಸ್ತುಗಳಿಗೆ ಸಂಬಂಧಿಸಿದ ಕೆಲವು ಮಾಹಿತಿಯನ್ನು ಕೂಡ ತಿಳಿಸುತ್ತಾರೆ.