ಉತ್ತರ ಕನ್ನಡದ ಯೋಧ ಹೃದಯಾಘಾದಿಂದ ನಿಧನ

Suvarna News   | Asianet News
Published : Apr 02, 2021, 12:38 PM IST
ಉತ್ತರ ಕನ್ನಡದ ಯೋಧ ಹೃದಯಾಘಾದಿಂದ ನಿಧನ

ಸಾರಾಂಶ

ಉತ್ತರ ಕನ್ನಡ ಜಿಲ್ಲೆಯ ಯೋಧರೋರ್ವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಹಜಾರಿಬಾಗ್‌ನಲ್ಲಿ ಮೃತರಾಗಿದ್ದು ನಾಳೆ ಸ್ವಗ್ರಾಮದಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ. 

ಕಾರವಾರ (ಏ.02): ಹಜಾರಿಬಾಗ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ  ಉತ್ತರ ಕನ್ನಡ ಜಿಲ್ಲೆಯ ಯೋಧ ಹೃದಯಾಘಾತದಿಂದ ಯೋಧ ಸಾವಿಗೀಡಾಗಿದ್ದಾರೆ. 

ಸಿದ್ದಾಪುರ ತಾಲುಕಿನ ಹಂಗಾರಖಂಡದ ನಿವಾಸಿ ಸಂದೀಪ್ ನಾರಾಯಣ ನಾಯ್ಕ ಮೃತಪಟ್ಟಿದ್ದಾರೆ, ಕಳೆದ ನಾಲ್ಕು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ರಾಂಚಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ. 

ಯೋಧರಿಗೆ ಕಡಿಮೆ ತೂಕದ ಗುಂಡು ನಿರೋಧಕ ಜಾಕೆಟ್‌ ..
 
2011ರಲ್ಲಿ ಸೇನೆಗೆ ಸೇರಿದ್ದ ಯೋಧ ಸಂದೀಪ್ ಕಳೆದ 11 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. 203 ಕೋಬ್ರಾ ಬೆಟಾಲಿಯನ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು. 

ಏ.3 ರಂದು ಬೆಳಗ್ಗೆ ಸ್ವಗ್ರಾಮಕ್ಕೆ ಪಾರ್ಥಿವ ಶರೀರ ಆಗಮಿಸಲಿದ್ದು ಸ್ವಗ್ರಾಮದಲ್ಲಿಯೇ ಅಂತಿಮ ಸಂಸ್ಕಾರ ನಡೆಯಲಿದೆ. 

PREV
click me!

Recommended Stories

ಪಬ್ಬಲ್ಲಿ ಮೊಬೈಲ್‌ ತರಲುಹೋದ ಕನ್ನಡಿಗ ಬಲಿ, ಗೋವಾ ಪಬ್ ದುರಂತಕ್ಕೆ ಕಾರಣವೇನು?
ಬೆಂಗಳೂರಿನ ಗುಲಾಬಿ ಮೆಟ್ರೋ ಮಾರ್ಗಕ್ಕೆ ಶೀಘ್ರ ಪ್ರೊಟೊಟೈಪ್‌ ರೈಲು