ಬೇಸಿಗೆ ಬಿಸಿಲು ಎಲ್ಲೆಡೆ ಪ್ರಖರತೆ ಮೆರೆಯುತ್ತಿದ್ದು, ಜಲಮೂಲಗಳಲ್ಲಿ ನೀರು ಕಡಿಮೆಯಾಗುತ್ತಿದೆ. ಇದರಿಂದ ಹೊಸನಗರ ತಾಲೂಕು ಸಹ ಹೊರತಾಗಿಲ್ಲ. ತಾಲೂಕಿನಲ್ಲಿ ಬಾವಿಯ ನೀರು ತಳಮಟ್ಟಕ್ಕೆ ತಲುಪಿದೆ. ನೀರಿನ ದೊಡ್ಡ ಮೂಲವಾದ ಶರಾವತಿ ಜಲಾಶಯದಲ್ಲಿಯೂ ನೀರು ಬತ್ತುತ್ತಿದ್ದು, ಹಿನ್ನೀರಿನಲ್ಲಿ ಕೆಸರು ಗುಂಡಿಗಳ ದರ್ಶನವಾಗುತ್ತಿದೆ.
ವಿಶೇಷ ವರದಿ
ಹೊಸನಗರ (ಏ.9) : ಬೇಸಿಗೆ ಬಿಸಿಲು ಎಲ್ಲೆಡೆ ಪ್ರಖರತೆ ಮೆರೆಯುತ್ತಿದ್ದು, ಜಲಮೂಲಗಳಲ್ಲಿ ನೀರು ಕಡಿಮೆಯಾಗುತ್ತಿದೆ. ಇದರಿಂದ ಹೊಸನಗರ ತಾಲೂಕು ಸಹ ಹೊರತಾಗಿಲ್ಲ. ತಾಲೂಕಿನಲ್ಲಿ ಬಾವಿಯ ನೀರು ತಳಮಟ್ಟಕ್ಕೆ ತಲುಪಿದೆ. ನೀರಿನ ದೊಡ್ಡ ಮೂಲವಾದ ಶರಾವತಿ ಜಲಾಶಯದಲ್ಲಿಯೂ ನೀರು ಬತ್ತುತ್ತಿದ್ದು, ಹಿನ್ನೀರಿನಲ್ಲಿ ಕೆಸರು ಗುಂಡಿಗಳ ದರ್ಶನವಾಗುತ್ತಿದೆ.
undefined
ಹೊಸನಗರ(Hosanagar) ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನಲ್ಲಿ ನೀರು ಪೂರೈಕೆಗೆ ತತ್ವಾರ ಎದುರಾಗುವ ಸಾಧ್ಯತೆಯಿದೆ. ಇನ್ನೊಂದು ವಾರದಲ್ಲಿ ತಾಲೂಕಿನಲ್ಲಿ ಮಳೆ ಬಾರದಿದ್ದರೆ ಕುಡಿಯುವ ನೀರಿಗೆ ತೀವ್ರ ಬರ ಎದುರಾಗಲಿದೆ. ಅದರಲ್ಲಿಯೂ ಪಟ್ಟಣದ ನಾಗರಿಕರು ಮಾತ್ರ ಕುಡಿಯುವ ನೀರಿನ ಗಂಭೀರ ಸಮಸ್ಯೆ ಎದುರಿಸಬೇಕಾಗಲಿದೆ ಕುಡಿಯುವ ನೀರಿಗಾಗಿ ಶರಾವತಿ ಹಿನ್ನೀರು ಪ್ರದೇಶದಲ್ಲಿ ಬರಿದಾದ ಕಡೆ ಜೆಸಿಬಿ ಯಂತ್ರ ಬಳಸಿ, ಗುಂಡಿ ತೆಗೆದು ನೀರು ಪೂರೈಸುವ ಪ್ರಯತ್ನ ನಡೆಯುತ್ತಿದೆ. ಇಲ್ಲಿಯ ಕುಡಿಯುವ ನೀರಿನ ಗಂಭೀರ ಪರಿಸ್ಥಿತಿಯನ್ನು ಅರಿಯಲು ಇದೊಂದೇ ಸಾಕ್ಷಿ ಸಾಕು.
ಗಣಪತಿ ಕೆರೆ ಮೇಲೆ ಧ್ವಜ ಹಾರಿಸಿದ್ದೇ ಸಾಧನೆ: ಹರತಾಳು ಹಾಲಪ್ಪ ವಿರುದ್ಧ ಕಾಗೋಡು ತಿಮ್ಮಪ್ಪ ಕಿಡಿ
ಸೇತುವೆ ಕಾಮಗಾರಿಗೆ ಶರಾವತಿ ನೀರು:
ಈ ವರ್ಷ ಶರಾವತಿ ಹಿನ್ನೀರು ಬಹಳ ಬೇಗ ಬತ್ತುತ್ತಿದೆ. ಇಷ್ಟುವರ್ಷ ಮೇ ತಿಂಗಳಲ್ಲಿ ಶರಾವತಿಯಲ್ಲಿ ನೀರು ಬರಿದಾಗುತ್ತಿತ್ತು. ಅಷ್ಟರಲ್ಲಿ ಮಳೆ ಬರುತ್ತಿತ್ತು. ಆದರೆ ಈಗ ಏಪ್ರಿಲ್ ತಿಂಗಳಲ್ಲಿಯೇ ನೀರಿಗೆ ಬರ ಎದುರಾಗಿದೆ. ಶರಾವತಿ ಹಿನ್ನೀರನ್ನು ಸಿಗಂದೂರು ಸೇತುವೆ ಕಟ್ಟಲು ಉಪಯೋಗಿಸುತ್ತಿದ್ದಾರೆ. ಪರಿಣಾಮ ತಾಲೂಕಿಗೆ ನೀರಿನ ಬರ ಎದುರಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಸೇತುವೆ ನಿರ್ಮಾಣ ಮಾಡಲು ಶರಾವತಿ ಹಿನ್ನೀರಿನ ಗೇಟ್ ತೆರೆದು ನೀರು ಖಾಲಿ ಮಾಡಿರುವುದರಿಂದ ಜಲಾಶಯದಲ್ಲಿ ನೀರು ತಳಕಂಡಿದೆ ಎನ್ನಲಾಗುತ್ತಿದೆ.
Karnataka assembly Election: ಪುತ್ರಿ ರಾಜನಂದಿನಿಗೆ ಟಿಕೆಟ್, ಖರ್ಗೆ ಭೇಟಿಯಾದ ಕಾಗೋಡು ತಿಮ್ಮಪ್ಪ!
ಅಧಿಕಾರಿಗಳ ಹರ ಸಾಹಸ:
ಸುಮಾರು 15 ದಿನಗಳಿಂದ ಶರಾವತಿ ಹಿನ್ನೀರು ಪ್ರದೇಶದಲ್ಲಿ ನೀರು ಸಂಗ್ರಹ ಕುಸಿತ ಕಂಡಿರುವುದರಿಂದ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಜನರಿಗೆ ಕುಡಿಯಲು ನೀರು ನೀಡಲು ಅಧಿಕಾರಿಗಳು ಹರಸಾಹಸ ಮಾಡುತ್ತಿದ್ದಾರೆ. ಜೆಸಿಬಿ ಯಂತ್ರಗಳ ಮೂಲಕ ಶರಾವತಿಯ ನದಿ ಮಧ್ಯ ಭಾಗದಲ್ಲಿ ಹಾಗೂ ಸುತ್ತಮುತ್ತಲ ಭಾಗದಲ್ಲಿ ನೀರು ಬರುವ ಸ್ಥಳದಲ್ಲಿ ಅಗೆದು ನೀರು ಸಂಗ್ರಹಿಸುವ ಕೆಲಸ ನಡೆಯುತ್ತಿದೆ. ಆದರೆ ಇದು ಹೆಚ್ಚು ದಿನ ಫಲ ಕೊಡುವ ಸಾಧ್ಯತೆ ಕಡಿಮೆ. ಈ ಹಿನ್ನೆಲೆ ಹೊಸನಗರ ಪಟ್ಟಣ ಜನರಿಗೆ ಕುಡಿಯುವ ನೀರಿನ ಬರದ ಬಿಸಿ ಗಂಭೀರವಾಗಲಿದೆ.