
ವಿಜಯನಗರ (ಏ.9) : ಶಿವಮೊಗ್ಗ-ಹೊಸಪೇಟೆ ರಾಜ್ಯ ಹೆದ್ದಾರಿ 25ರಲ್ಲಿ ರಂಭಾಪುರಿ ಶ್ರೀಗಳಿದ್ದ ಕಾರು ಬೈಕು ನಡುವೆ ಡಿಕ್ಕಿಯಾಗಿ ಅಪಘಾತಕ್ಕೀಡಾದ ಘಟನೆ ನಡೆದಿದೆ.
ಹರಪನಹಳ್ಳಿ(Harapanahalli) ತಾಲ್ಲೂಕಿನ ಚಿರಸ್ತಹಳ್ಳಿಯ ತಿರುವಿನಲ್ಲಿ ನಡೆದಿರುವ ಘಟನೆ. ಅದೃಷ್ಟವಶಾತ್ ರಸ್ತೆ ಅಪಘಾತದಲ್ಲಿ ಶ್ರೀಗಳು ಅಪಾಯದಿಂದ ಪಾರಾಗಿದ್ದಾರೆ.
ಆಲಮಟ್ಟಿ ಕಾರ್ಯಕ್ರಮಕ್ಕೆ ಹೊರಟಿದ್ದ ಶ್ರೀಗಳು:
ರಂಭಾಪುರಿ ಶ್ರೀ(Rambhapuri shree)ಗಳು ರಂಭಾಪುರಿ ಪೀಠದಿಂದ ಆಲಮಟ್ಟಿ ಕಾರ್ಯ ಕ್ರಮಕ್ಕೆ ಶಿವಮೊಗ್ಗ-ಹೊಸಪೇಟೆ ರಸ್ತೆ(Shivamogga-hospet road) ಮಾರ್ಗವಾಗಿ ಕಾರಿನಲ್ಲಿ ತೆರಳುತ್ತಿದ್ದರು.
ಶಿವಮೊಗ್ಗ - ಹೊಸಪೇಟೆ ರಾಜ್ಯ ಹೆದ್ದಾರಿ 25ರಲ್ಲಿ ಹರಿಹರದಿಂದ ಹರಪನಹಳ್ಳಿ ಮಾರ್ಗವಾಗಿ ಚಲಿಸುತ್ತಿದ್ದ ಶ್ರಿಗಳ ಕಾರು. ಈ ವೇಳೆ ಚಿರಸ್ತಳ್ಳಿ(Chirastalli) ತಿರುವಿನಲ್ಲಿ ಎದುರಿಗೆ ಬಂದ ಬೈಕ್ ಕಾರಿಗೆ ಡಿಕ್ಕಿ ಹೊಡೆದಿದೆ. ಬೈಕ್ ಗುದ್ದಿದ ರಭಸಕ್ಕೆ ಕಾರಿನ ಎಂಜಿನ್ ಮೇಲೆ ಹಾರಿ ಬಿದ್ದಿರೋ ಬೈಕ್ ಸವಾರ. ಶ್ರೀಗಳ ಕಾರಿನ ಮುಂಬಾಗ ಹಾಗೂ ಬೈಕಿಗೆ ಹಾನಿಯಾಗಿದೆ. ಬೈಕ್ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹರಪನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಪ್ರಕರಣ.