ಕೋಟೆನಾಡು ಚಿತ್ರದುರ್ಗದಲ್ಲಿ ಅವೈಜ್ಞಾನಿಕ ಟ್ರಾಫಿಕ್ ಸಿಗ್ನಲ್ಸ್ ಕಿರಿಕ್!

Published : Aug 26, 2023, 05:16 PM IST
ಕೋಟೆನಾಡು ಚಿತ್ರದುರ್ಗದಲ್ಲಿ ಅವೈಜ್ಞಾನಿಕ ಟ್ರಾಫಿಕ್ ಸಿಗ್ನಲ್ಸ್ ಕಿರಿಕ್!

ಸಾರಾಂಶ

 ನಗರ ಪ್ರದೇಶಗಳಲ್ಲಿ ಟ್ರಾಫಿಕ್ ಜಾಮ್ ನಿಯಂತ್ರಿಸಲು ಸಿಗ್ನಲ್ ಲೈಟ್ ಅಳವಡಿಸೋದು ಸಹಜ. ಆದ್ರೆ ಐತಿಹಾಸಿಕ ನಗರವೊಂದರಲ್ಲಿ ಅಳವಡಿಸಿರುವ ಸಿಗ್ನಲ್ ಲೈಟ್ ವಾಹನ ಸವಾರರಿಗೆ ತಲೆನೋವು ತಂದೊಡ್ಡಿವೆ. ಹೀಗಾಗಿ ವಾಹನ ಸವಾರರು ಪರದಾಡುವಂತೆ ಆಗಿದೆ. ಅಷ್ಟಕ್ಕೂ ಅಲ್ಲಾಗಿರುವ ಸಮಸ್ಯೆ ಆದರೂ ಏನು?

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಆ.26) :  ನಗರ ಪ್ರದೇಶಗಳಲ್ಲಿ ಟ್ರಾಫಿಕ್ ಜಾಮ್ ನಿಯಂತ್ರಿಸಲು ಸಿಗ್ನಲ್ ಲೈಟ್ ಅಳವಡಿಸೋದು ಸಹಜ. ಆದ್ರೆ ಐತಿಹಾಸಿಕ ನಗರವೊಂದರಲ್ಲಿ ಅಳವಡಿಸಿರುವ ಸಿಗ್ನಲ್ ಲೈಟ್ ವಾಹನ ಸವಾರರಿಗೆ ತಲೆನೋವು ತಂದೊಡ್ಡಿವೆ. ಹೀಗಾಗಿ ವಾಹನ ಸವಾರರು ಪರದಾಡುವಂತೆ ಆಗಿದೆ. ಅಷ್ಟಕ್ಕೂ ಅಲ್ಲಾಗಿರುವ ಸಮಸ್ಯೆ ಆದರೂ ಏನು?

ಪ್ರಮುಖ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗುವ ಪರಿಣಾಮ ಸಂಚಾರಿ ನಿಯಮ ಉಲ್ಲಂಘನೆ ಆಗದಿರಲಿ‌ ಹಾಗು ಸಂಚಾರ ಸುಗಮವಾಗಿರಲಿ ಅಂತ   ಐತಿಹಾಸಿಕ ನಗರಿ ಚಿತ್ರದುರ್ಗ ನಗರದಲ್ಲಿ  ಮೂರು ಕಡೆ  ಪೊಲೀಸರು ಸಿಗ್ನಲ್‌ಲೈಟ್ ಅಳವಡಿಸಿದ್ದಾರೆ. ಆದರೆ ಆ ಸಿಗ್ನಲ್ ಲೈಟ್ ಗಳು ಸುಗಮ ಸಂಚಾರಕ್ಕೆ ದಾರಿಯಾಗದೆ ವಾಹನ ಸವಾರರಿಗೆ ಬಾರಿ ತಲೆನೋವು ತಂದೊಡ್ಡಿವೆ. ನಗರದ ಬೃಹತ್ ವೃತ್ತವಾದ ಗಾಂಧಿ ಸರ್ಕಲ್(Gandhi ce),ಎಸ್ ಬಿಎಂ ಸರ್ಕಲ್ ಮತ್ತು ಹಳೇ ವೈಶಾಲಿ‌ ಸರ್ಕಲ್ ಗೆ ‌ಬರುವಷ್ಟರಲ್ಲಿ ಮೂರು ಸಿಗ್ನಲ್ ಗಳನ್ನು ವಾಹನ ಸವಾರರು ದಾಟಬೇಕಿದೆ. ಆ ಸಿಗ್ನಲ್ ದಾಟುವಷ್ಟರಲ್ಲಿ ಕನಿಷ್ಟ 15 ನಿಮಿಷ ಕಾಲ ಹರಣವಾಗಲಿದೆ. ಅಲ್ಲದೇ ಒಂದೊಂದು ಸಿಗ್ನಲ್ ನಲ್ಲಿಯೂ ಒಂದೊಂದು ಸಮಯ ಫಿಕ್ಸ್ ಮಾಡಿರೊ ಪರಿಣಾಮ, ಸವಾರರು ಬಾರಿ ಗೊಂದಲಕ್ಕೆ‌ ಸಿಲುಕುವಂತಾಗಿದೆ. ಹೀಗಾಗಿ ರಸ್ತೆಯಲ್ಲಿ ಕಡಿಮೆ ವಾಹನಗಳ ಓಡಾಟವಿದ್ರು ಕೂಡ ವಾಹನ ದಟ್ಟಣೆ ಒಮ್ಮೆಲೆ ಹೆಚ್ಚಾಗಲಿದೆ. ನಗರದಾದ್ಯಂತ ಟ್ರಾಫಿಕ್ ಜಾಮ್ ಸಮಸ್ಯೆ ತಲೆದೂರಿದೆ.ಆದರೆ ಈ ಬಗ್ಹೆ ಗಮನ ಹರಿಸಬೇಕಾದ ಪೊಲೀಸರು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ. ಹೀಗಾಗಿ ಪೊಲೀಸರ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ಕಿಡಿಕಾರಿದ್ದಾರೆ.

ಕೋಟೆನಾಡು ಚಿತ್ರದುರ್ಗದಲ್ಲಿ ಕೈಕೊಟ್ಟ ಮಳೆ, ಬರಪೀಡಿತ ಜಿಲ್ಲೆ ಘೋಷಣೆಗೆ ರೈತರ ಆಗ್ರಹ

ಇನ್ನು ಈ ಅವೈಜ್ಞಾನಿಕ ಸಿಗ್ನಲ್ ಗಳಲ್ಲಿ ಸರಿಯಾದ ಸಮಯ ಪಾಲನೆಯಾಗ್ತಿಲ್ಲ. ಹೀಗಾಗಿ ಶಾಲಾ,ಕಾಲೇಜು ವಿದ್ಯಾರ್ಥಿಗಳು, ಕೋರ್ಟ್ ಗೆ ತೆರಳುವ ವಕೀಲರು ಹಾಗು ತುರ್ತು‌ಚಿಕಿತ್ಸೆಗಾಗಿ‌ ಆಸ್ಪತ್ರೆಗೆ‌ ತೆರಳುವ  ರೋಗಿಗಳು ನಿರ್ಧಿಷ್ಟ‌ ಸಮಯಕ್ಕೆ ಅವರ ಸ್ಥಳಗಳಿಗೆ ತೆರಳಲಾಗದೇ ಸಮಸ್ಯೆ ಎದುರಿಸುವಂತಾಗಿದೆ. ಸಿಗ್ನಲ್‌ನಲ್ಲೇ ಸಾವುಗಳು ಸಹ ಸಂಭವಿಸುವ ಆತಂಕವಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಈ ಅವೈಜ್ಞಾನಿಕ ಸಿಗ್ನಲ್‌ಲೈಟ್ ಗಳಲ್ಲಿನ ದೋಷವನ್ನು ಸರಿಪಿಡಿಸಿ,ವಾಹನ ಸವಾರರಿಗೆ ಸಮಸ್ಯೆ ಆಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕೆಂದು ವಾಹನ ಸವಾರರು ಆಗ್ರಹಿಸಿದ್ದಾರೆ.

ಒಟ್ಟಾರೆ ಐತಿಹಾಸಿಕ ನಗರಿ ಚಿತ್ರದುರ್ಗದಲ್ಲಿ ಅಳವಡಿಸಿರುವ  ಸಿಗ್ನಲ್ ಲೈಟ್ ಗಳು ಅವೈಜ್ಞಾನಿಕವಾಗಿವೆ. ಹೀಗಾಗಿ  ಸುಗಮ ಸಂಚಾರ ಸಾದ್ಯವಾಗದೇ ವಾಹನ ಸವಾರರಿಗೆ ದೊಡ್ಡ ತಲೆನೋವೆನಿಸಿವೆ. ಇನ್ನಾದ್ರು ಸಂಬಂಧ ಪಟ್ಟವರು ಈ ಸಮಸ್ಯೆಗೆ ಬ್ರೇಕ್ ಹಾಕಿ ಸುಗಮ ಸಂಚಾರಕ್ಕೆ ದಾರಿ ಮಾಡಬೇಕಿದೆ.

ಮಹಾತ್ಮ ಗಾಂಧಿ ಪ್ರತಿಮೆ ಧ್ವಂಸ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

PREV
Read more Articles on
click me!

Recommended Stories

ಆತಂಕದ ವಿಷಯ: ಬೆಂಗಳೂರಿನಲ್ಲಿ 11 ವರ್ಷದ ಮಕ್ಕಳಿಗೂ ಡ್ರಗ್ಸ್‌ ಚಟ!
ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!