ಗಣಪತಿ ಬಪ್ಪ ತಂದ ಆಪತ್ತು: ಮಣ್ಣಿನ ಮೂರ್ತಿ ಬಾವಿಗೆ ಹಾಕಲು ಹೋಗಿ ಕಾಲುಜಾರಿ ಬಿದ್ದು ಮಗು ಸಾವು

By Sathish Kumar KH  |  First Published Aug 26, 2023, 3:35 PM IST

ಕಾರವಾರದಲ್ಲಿ ಮನೆಯ ಮುಂದೆ ಆಟವಾಡುತ್ತಿರುವಾಗ ಪಕ್ಕದಲ್ಲಿಯೇ ಇದ್ದ ಬಾವಿಗೆ ಬಿದ್ದು 3 ವರ್ಷದ ಮಗು ಮೃತಪಟ್ಟಿದೆ.


ಉತ್ತರ ಕನ್ನಡ (ಆ.23): ಕರಾವಳಿ ತೀರ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಕೇಂದ್ರ ಕಾರವಾರದಲ್ಲಿ ಮನೆಯ ಮುಂದೆ ಆಟವಾಡುತ್ತಿರುವಾಗ ಪಕ್ಕದಲ್ಲಿಯೇ ಇದ್ದ ಬಾವಿಗೆ ಬಿದ್ದು 3 ವರ್ಷದ ಮಗು ಮೃತಪಟ್ಟಿದೆ. ಮಗು ಬಿದ್ದು ಸಾವನ್ನಪ್ಪಿದರೂ ಮನೆಯವರಿಗೆ ತಿಳಿದಿಲ್ಲ. ಗ್ರಾಮಸ್ಥರು ನೋಡಿ ಮಾಹಿತಿ ನೀಡಿದ್ದಾರೆ.

ಹೌದು, ಚಿಕ್ಕ ಮಕ್ಕಳಿಗೆ ಅಪಾಯಗಳ ಬಗ್ಗೆ ಬುದ್ಧಿ ಬರುವವರೆಗೂ ಅವರನ್ನು ಅತ್ಯಂತ ಹುಷಾರಾಗಿ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ಸ್ವಲ್ಪ ಯಾಮಾರಿದರೂ ಪ್ರಾಣಕ್ಕೆ ಕುತ್ತು ಬರುವ ಹಲವಾರು ಘಟನೆಗಳು ನಡೆದಿವೆ. ಈಗ ಕಾರವಾರದಲ್ಲಿಯೂ ಕೂಡ ಮಗು ಮನೆಯಿಮದ ಹೊರಗೆ ಆಟವಾಡಲಿ ಎಂದು ಬಿಟ್ಟರೆ, ಬಾವಿಯ ಬಳಿ ಹೋಗಿ ಕಾಲುಜಾರಿ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ. ಮೃತ ಮಗುವನ್ನು ಸ್ಥುತಿ (3) ಎಂದು ಗುರುತಿಸಲಾಗಿದೆ. ಇನ್ನು ಕಾರವಾರ ನಗರದ ಹರಿದೇವ ಬಡಾವಣೆಯಲ್ಲಿ ದುರ್ಘಟನೆ ನಡೆದಿದೆ.

Tap to resize

Latest Videos

undefined

ಅಮೇರಿಕಾದಲ್ಲಿ ಮೃತಪಟ್ಟ ದಾವಣಗೆರೆ ಕುಟುಂಬದ ಮೃತದೇಹಗಳನ್ನೂ ಕನ್ನಡ ನಾಡಿಗೆ ತರಲಾಗಲಿಲ್ಲ: ಅಂತಿಮ ದರ್ಶನವೂ ಸಿಗಲಿಲ್ಲ

ಪೋಷಕರಿಗೆ ಕರಾಳ ಶನಿವಾರ: ಪ್ರತಿನಿತ್ಯ ಆಟವಾಡುವಂತೆ ಮಗಳು ಸ್ಥುತಿ ಮನೆಯ ಮುಂದೆ ಆಟವಾಡುತ್ತಾಳೆಂದು ಪೋಷಕರು ಇಂದು (ಶನಿವಾರ) ಕೂಡ ಹೆಚ್ಚಿನ ನಿಗಾವಹಿಸದೇ ತಮ್ಮ ಕೆಲಸ ಕಾರ್ಯಗಳಲ್ಲಿ ಮಗ್ನರಾಗಿದ್ದಾರೆ. ಆದರೆ, ಅವರಿಗೆ ಇಂದು ಕರಾಳ ಶನಿವಾರವಾಗಿ ಮಾರ್ಪಟ್ಟಿದೆ. ಇನ್ನು ಗಣಪತಿ ಹಬ್ಬ ಸಮೀಪವಿರುವ ಹಿನ್ನೆಲೆಯಲ್ಲಿ ಮಕ್ಕಳು ಮಣ್ಣು ಹಾಗೂ ಕಲ್ಲುಗಳನ್ನು ಗಣಪತಿ ಎಂದು ಪೂಜಿಸಿ ಬಾವಿಗೆ ಹಾಕುವುದು ಸಾಮಾನ್ಯವಾಗಿ ಕಂಡುಬರುವ ದೃಶ್ಯಗಳು. ಆದರೆ, ಇಂದು ಸ್ಥುತಿ ಜೊತೆಯಲ್ಲಿ ಆಟವಾಡಲು ಯಾರೂ ಇರಲಿಲ್ಲ. ಹಾಗಾಗಿ, ಇಂದು ಸ್ಥುತಿ ಒಬ್ಬಳೇ ಆಟವಾಡಲು ಹೋಗಿದ್ದಾಳೆ.

ಮಣ್ಣಿನ ಗಣಪತಿ ಮೂರ್ತಿ ಬಾವಿಗೆ ಹಾಕಲು ಹೋದವರು ಕಾಲು ಜಾರಿ ಬಿದ್ದಳು: ತಾನು ಮಣ್ಣಿನಿಂದ ಗಣಪತಿ ಮೂರ್ತಿಯನ್ನು ತಯಾರಿಸಿ, ಪೂಜಿಸಿ ಬಾವಿಗೆ ಹಾಕುವ ಮಾದರಿಯಲ್ಲಿ ಮಣ್ಣಿನ ಉಂಡೆಯನ್ನು ಗಣಪತಿ ಮೂರ್ತಿ ಎಂದುಕೊಂಡು ಬಾವಿಗೆ ಹಾಕಲು ಹೋಗಿದ್ದಾಳೆ. ಆದರೆ, ಈ ವೇಳೆ ಕಾಲುಜಾರಿ ಬಾವಿಯಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ. ಮಧ್ಯಾಹ್ನವಾದರೂ ಮಗು ಮನೆಗೆ ಬಾರದ ಹಿನ್ನೆಲೆಯಲ್ಲಿ ಪೋಷಕರು ಮಗುವನ್ನು ಹುಡುಕಲು ಮುಂದಾಗಿದ್ದಾರೆ. ಇನ್ನು ತಮ್ಮ ಬಡಾವಣೆಯ ಅಕ್ಕಪಕ್ಕದಲ್ಲಿ ತಮ್ಮ ಮಗಳು ಆಟವಾಡುತ್ತಿದ್ದ ಎಲ್ಲ ಮನೆಗಳಿಗೂ ಹೋಗಿ ಕೇಳಿದ್ದಾರೆ. ಆಗ, ಎಲ್ಲಿಯೂ ಮಗು ಪತ್ತೆಯಾಗದ ಕಾರಣ ಸ್ಥಳೀಯರೆಲ್ಲರೂ ಸೇರಿಕೊಂಡು ಮಗುವಿಗಾಗಿ ಹುಡುಕಾಟ ಮಾಡಿದ್ದಾರೆ.

ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ದರೋಡೆಯಿಂದ ತಪ್ಪಿಸಿಕೊಳ್ಳಬೇಕೇ? ಈ ನಿಯಮ ಪಾಲಿಸಿ: ಸಂಸದ ಪ್ರತಾಪ್‌ಸಿಂಹ

ಬಾವಿಯಲ್ಲಿ ಪತ್ತೆಯಾದ ಮೃತದೇಹ: ಇನ್ನು ಬಡಾವಣೆಯ ಎಲ್ಲ ನಿವಾಸಿಗಳು ಎಲ್ಲೆಡೆ ಹುಡುಕಾಡಿದರೂ ಮಗು ಸಿಗದಿದ್ದಾಗ ಬಾವಿಯಲ್ಲಿ ಇಣುಕಿ ನೋಡಿದ್ದಾರೆ. ಆಗ ಬಾವಿಯಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದೆ. ಮನೆಯ ಮುಂದೆ ಆಟವಾಡಲು ಹೋದ ಮಗಳು ಶಾಶ್ವತವಾಗಿ ದೂರಾಗಿದ್ದಾಳೆ ಎಂಬ ನೋವಿನಿಂದಾಗಿ ಕುಟುಂಬ ಸದಸ್ಯರ ಹಾಗೂ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಇನ್ನು ಕಾರವಾರ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣ ನಡೆದಿದ್ದು, ಪೊಲೀಸರು ಬಂದು ಸ್ಥಳ ಪರಿಶೀಲನೆ ಮಾಡಲಿದ್ದಾರೆ.

click me!