ಸರ್ವೆ ಆಫ್ ಇಂಡಿಯಾ ಅಧಿಕಾರಿಗಳು ಅತ್ಯಂತ ಅವೈಜ್ಞಾನಿಕವಾಗಿ ಗಡಿಗುರುತು ಮಾಡುತ್ತಿದ್ದು, ಅಕ್ರಮ ಗಣಿಗಾರಿಕೆ ನಡೆಸಿದವರ ರಕ್ಷಿಸಿ, ಮತ್ತೆ ಅಕ್ರಮ ಗಣಿಗಾರಿಕೆ ಮುಂದುವರಿಸಲು ಅವಕಾಶ ಮಾಡಿಕೊಡುತ್ತಿದ್ದಾರೆ ಎನ್ನಲಾಗಿದೆ.
ಬಳ್ಳಾರಿ (ನ.10): ಕರ್ನಾಟಕ ಹಾಗೂ ಆಂಧ್ರದ ಗಡಿಗುರುತು ಕಾರ್ಯದಲ್ಲಿ ಸರ್ವೆ ಆಫ್ ಇಂಡಿಯಾ ಅಧಿಕಾರಿಗಳು ಅತ್ಯಂತ ಅವೈಜ್ಞಾನಿಕವಾಗಿ ಗಡಿಗುರುತು ಮಾಡುತ್ತಿದ್ದು, ಅಕ್ರಮ ಗಣಿಗಾರಿಕೆ ನಡೆಸಿದವರ ರಕ್ಷಿಸಿ, ಮತ್ತೆ ಅಕ್ರಮ ಗಣಿಗಾರಿಕೆ ಮುಂದುವರಿಸಲು ಅವಕಾಶ ಮಾಡಿಕೊಡುತ್ತಿದ್ದಾರೆ. ಇದೀಗ ನಡೆದಿರುವ ಸಮೀಕ್ಷೆ ವರದಿಯಿಂದ ಕರ್ನಾಟಕದ ಗಣಿ ಪ್ರದೇಶ ಆಂಧ್ರದ ಪಾಲಾಗಲಿದೆ ಎಂದು ಗಣಿ ಉದ್ಯಮಿ ಟಪಾಲ್ ಗಣೇಶ್ ಆರೋಪಿಸಿದ್ದಾರೆ. ಗಣಿ ಸಮೀಕ್ಷಾ ವರದಿ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿ ಟಪಾಲ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ವೆ ಆಫ್ ಇಂಡಿಯಾದ ಸಮೀಕ್ಷಾ ತಂಡದ ಪ್ರಕಾರ ನಮ್ಮ ರಾಜ್ಯದಲ್ಲಿರುವ ತಿಮ್ಮಪ್ಪನ ಗುಡ್ಡ ಆಂಧ್ರಪ್ರದೇಶಕ್ಕೆ ಸೇರುತ್ತದೆ ಎಂದು ಹೇಳುತ್ತಿದ್ದಾರೆ. ಆದರೆ, ವಾಸ್ತವದಲ್ಲಿ ಈ ಗುಡ್ಡ ನಮ್ಮದಾಗಿದ್ದು, ನೆರೆಯ ಆಂಧ್ರಪ್ರದೇಶದಲ್ಲಿನ ಅಂತರ ಗಂಗಮ್ಮ ಗುಡ್ಡ ಅಲ್ಲಿಗೆ ಸೇರಿದ್ದಾಗಿದೆ ಎಂದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ. ವಾಸ್ತವ ಅಂಶವನ್ನು ಪರಿಗಣಿಸದೆ ರಾಜಕೀಯ ಒತ್ತಡಕ್ಕೆ ಮಣಿದು ಕೇಂದ್ರದ ತಂಡ ಕೆಲಸ ಮಾಡುತ್ತಿರುವುದು ಗೊತ್ತಾಗುತ್ತಿದೆ ಎಂದರು.
undefined
ಹೊಸಪೇಟೆ: ಝೂಲಾಜಿಕಲ್ ಪಾರ್ಕ್‌ನಲ್ಲಿ ಕೋಟಿ ವೆಚ್ಚದ ಪಶು ಆಸ್ಪತ್ರೆ ..
1897ರಲ್ಲಿ ಬ್ರಿಟಿಷ್ ಆಡಳಿತ ಇದ್ದಾಗ ಮಾಡಲಾದ ನಕ್ಷಾ ವರದಿ ಆಧರಿಸಿ, ಸಮೀಕ್ಷೆ ಮಾಡಲಾಗುತ್ತಿದೆ. ಇದನ್ನು 1897ರಲ್ಲೇ ತಿರಸ್ಕರಿಸಲಾಗಿದೆ. ಟ್ರೈಜೆಂಕ್ಷನ್ ಪಾಯಿಂಟ್ ಆಧಾರದಲ್ಲಿ ಮರು ಸಮೀಕ್ಷೆ ಮಾಡಿ, ಗಡಿ ಗುರುತಿಸಲಾಗಿದೆ. ಇದರ ಪ್ರಕಾರ ಗ್ರಾಮಗಳ ಗಡಿ ಗುರುತಿಸಿದರೆ ಸಾಕು, ಎರಡೂ ರಾಜ್ಯಗಳ ಗಡಿ ಗುರುತಿಸುವ ಕಾರ್ಯ ಮುಗಿದೇ ಹೋಗುತ್ತದೆ. ಇದನ್ನು ಮಾಡದ ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿದು ಯಾರದ್ದೋ ಹಿತ ಕಾಯಲು ಮುಂದಾಗಿವೆ ಎಂದು ದೂರಿದರು.
ಅಸ್ಸಾಂ-ಮಿಜೋರಾಂ ಗಡಿ ಮತ್ತೆ ಉದ್ವಿಗ್ನ: ಅರೆಸೇನೆ ನಿಯೋಜನೆ! ...
ಪ್ರೋ.ಇಂಡಿಯಾ ಹೆಸರಲ್ಲಿ ಅಕ್ರಮ ಗಣಿಗಾರಿಕೆ ಮಾಡಿದ್ದ, ಲೋಕಾಯುಕ್ತರಿಂದ ಟೀಕೆಗೆ ಒಳಗಾಗಿದ್ದು ಮಾತ್ರವಲ್ಲದೆ ಗಣಿಗಾರಿಕೆ ಪರವಾನಗಿ ರದ್ದು ಮಾಡಬೇಕೆಂಬ ಶಿಫಾರಸಿಗೆ ಒಳಗಾಗಿದ್ದ ಕಂಪನಿಯಲ್ಲಿ ಇದೀಗ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ಅಳಿಯ ಪಾಲುದಾರಿಕೆ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಕಂಪನಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಕೇಂದ್ರ ತಂಡ ಕೆಲಸ ಮಾಡುತ್ತಿರುವ ಹಾಗೆ ಕಂಡು ಬರುತ್ತಿದೆ ಎಂದು ಟಪಾಲ್ ದೂರಿದರು.