ಸಿಎಂ ಸ್ಥಾನದಿಂದ ಬಿಎಸ್‌ವೈ ಬದಲಾವಣೆ : ಸ್ವಾಮೀಜಿಯಿಂದ ಭವಿಷ್ಯ

Kannadaprabha News   | Asianet News
Published : Nov 10, 2020, 08:50 AM ISTUpdated : Nov 10, 2020, 09:03 AM IST
ಸಿಎಂ ಸ್ಥಾನದಿಂದ ಬಿಎಸ್‌ವೈ ಬದಲಾವಣೆ : ಸ್ವಾಮೀಜಿಯಿಂದ ಭವಿಷ್ಯ

ಸಾರಾಂಶ

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ  ಸಾಕಷ್ಟು ಸದ್ದು ಮಾಡುತ್ತಿದ್ದು ಈ ಬಗ್ಗೆ ಸ್ವಾಮೀಜಿಯೋರ್ವರು ಭವಿಷ್ಯ ನುಡಿದಿದ್ದಾರೆ

ಕಲಬುರಗಿ (ನ.10): ಎಲ್ಲ ಸಮುದಾಯ, ವರ್ಗಗಳ ಜನರ ಪ್ರೀತಿ ಗಳಿಸಿರುವ ಯಡಿಯೂರಪ್ಪ ಲವಲವಿಕೆಯ ಸಿಎಂ ಆಗಿದ್ದಾರೆ, ಇವರನ್ನು ಸಿಎಂ ಸ್ಥಾನದಿಂದ ಪದಚ್ಯುತಗೊಳಿಸಿದ್ದೇ ಆದಲ್ಲಿ ರಾಜ್ಯದಲ್ಲಿ ಬಿಜೆಪಿಗೆ ಪೆಟ್ಟು ಬೀಳೋದು ನಿಶ್ಚಿತ ಎಂದು ರಂಭಾಪುರಿ ಶ್ರೀಗಳು ಹೇಳಿದ್ದಾರೆ.

ನಗರದಲ್ಲಿ  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರಿಗೆ ವಯಸ್ಸಾದರೂ ಅವರು ಉತ್ಸಾಹಿ ಸಿಎಂ ಆಗಿದ್ದಾರೆ. ವಿರೋಧ ಪಕ್ಷದವರಿಗೂ ಅವರ ಉತ್ಸಾಹದ ಬಗ್ಗೆ ಗೊತ್ತಿದೆ. ಉಳಿದ ಎರಡೂವರೆ ವರ್ಷ ಯಡಿಯೂರಪ್ಪ ಅವರನ್ನೇ ಹೈಕಮಾಂಡ್‌ ಸಿಎಂ ಆಗಿ ಮುಂದುವರಿಸಲಿದೆ. 

RR ನಗರ : ಫಲಿತಾಂಶಕ್ಕೂ ಮೊದಲೇ ಸೋಲೊಪ್ಪಿಕೊಂಡರಾ ಡಿಕೆಶಿ? .

ಇದರಲ್ಲಿ ಯಾವುದೇ ಅನುಮಾನ ಬೇಡ ಎಂದರು. ಯಡಿಯೂರಪ್ಪನವರಿಗೆ 78 ವರ್ಷ ಎಂದು ಪಕ್ಷದಲ್ಲೇ ಚರ್ಚೆ ಸಾಗಿವೆ. ಅವರಲ್ಲಿ ವಯಸ್ಸಿಗಿಂತ ಉತ್ಸಾಹ ತುಂಬಿದೆಯಲ್ಲ, ಅದನ್ನು ನಾವೆಲ್ಲರೂ ನೋಡಬೇಕು. ನೆರೆ, ಮಳೆ ಬಂದಾಗ ಸಂತ್ರಸ್ತರಿಗೆ ನೆರವು ನೀಡಲು ಯಡಿಯೂರಪ್ಪ ರಾಜ್ಯಾದ್ಯಂತ ಓಡಾಡಿದ್ದಾರೆ. ಇದೆಲ್ಲ ಅವರಲ್ಲಿನ ಉತ್ಸಾಹದಿಂದ ಮಾತ್ರ ಸಾಧ್ಯವೆಂದು ಶ್ರೀಗಳು ಹೇಳಿದರು.

PREV
click me!

Recommended Stories

Bengaluru: ಕ್ಯಾಬ್ ಚಾಲಕನ ಮೇಲೆ ಯುವತಿ ರೇಪ್ ಆರೋಪ, ತನಿಖೆ ವೇಳೆ ಬಿಗ್ ಟ್ವಿಸ್ಟ್!
ನಮ್ಮನ್ನು ಗುಲಾಮರನ್ನಾಗಿಸಿ ಹಿಂದೂ ಧರ್ಮ ಸೃಷ್ಟಿಸಿದ್ದು ಬ್ರಾಹ್ಮಣರು: ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ