ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಗಮಿಸಿದ್ದ ಸಂಸದೆ ಶೋಭಾ ಕರಂದ್ಲಾಜೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಕ್ಕಳ ಜೊತೆ ಸರದಿ ಸಾಲಲ್ಲಿ ಕೂತು ಹಾಸ್ಟೆಲ್ ಊಟವನ್ನ ಸವಿದಿದ್ದಾರೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಸೆ.23): ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಹಾಗೂ ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಸಂಸದೆ ಶೋಭಾ ಕರಂದ್ಲಾಜೆ ಮಕ್ಕಳ ಜೊತೆ ಸರದಿ ಸಾಲಲ್ಲಿ ಕೂತು ಹಾಸ್ಟೆಲ್ ಊಟವನ್ನ ಸವಿದಿದ್ದಾರೆ. ಅವರು ಇಂದು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಗಮಿಸಿದ್ದರು. ಈ ವೇಳೆ, ಮೂಡಿಗೆರೆ ತಾಲೂಕಿನ ಬಿದರಹಳ್ಳಿ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿದ್ದರು. ಭೇಟಿಯ ಬಳಿಕ ಹಾಸ್ಟೆಲ್ ಮಕ್ಕಳ ಜೊತೆ ಟೇಬಲ್ ಮೇಲೆ ಸರದಿ ಸಾಲಲ್ಲಿ ಕೂತು ಮಕ್ಕಳ ಜೊತೆಯೇ ಊಟ ಮಾಡಿದ್ದಾರೆ. ಬಳಿಕ ಊಟ ಮುಗಿಸಿ ಹೊರಬಂದಾಗಲೂ ಊಟಕ್ಕೆಂದು ಸರದಿ ಸಾಲಿನಲ್ಲಿ ನಿಂತಿದ್ದ ಮಕ್ಕಳ ಸಾಲಿನ ಜೊತೆಯೇ ಹೋಗಿ ಮಕ್ಕಳನ್ನ ಆತ್ಮೀಯಂತೆಯಿಂದ ಮಾತನಾಡಿಸಿ ಮಕ್ಕಳ ಕಷ್ಟ-ಸುಖ ವಿಚಾರಿಸಿ ಕುಂದು-ಕೊರತೆಯನ್ನು ಆಲಿಸಿದರು. ಮಕ್ಕಳಿರುವ ಜಾಗಕ್ಕೆ ಹೋಗಿ ಮಾತನಾಡಿಸಿದ ಸಂಸದರನ್ನ ಕಂಡು ಮಕ್ಕಳು ಸಂತಸ ವ್ಯಕ್ತಪಡಿಸಿದ್ದರು. ಶೋಭಾ ಕಂದ್ಲಾಜೆ ಮಕ್ಕಳಿಗೆ ಚೆನ್ನಾಗಿದ್ದೀರಾ ಎಂದು ಕೇಳಿದಾಗ, ಮಕ್ಕಳು ಹೌದು ಮೇಡಂ ಎಂದು ನೀವು ಚೆನ್ನಾಗಿದ್ದೀರಾ ಎಂದು ಆತ್ಮೀಯತೆಯಿಂದಲೇ ಮಾತನಾಡಿಸಿದರು.
ಸಿಮಿಯ ಇನ್ನೊಂದು ರೂಪವಾಗಿರುವ ಸಂಘಟನೆಗಳನ್ನು ನಿಷೇಧಕ್ಕೆ ಒತ್ತಾಯ:
ಎಸ್ಡಿಪಿಐ ಮತ್ತು ಪಿಎಫ್ಐ ಸಂಘಟನೆಗಳ ನಿಷೇಧಕ್ಕೆ ಕಾಲ ಸನ್ನಿಹಿತವಾಗಿದೆ ಎಂದು ಕೇಂದ್ರ ಕೃಷಿ ಹಾಗೂ ರಾಜ್ಯ ರೈತ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ಮೂಡಿಗೆರೆ ತಾಲ್ಲೂಕಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಎಸ್ಡಿಪಿಐ, ಪಿಎಫ್ಐ ನಿಷೇಧಿಸುವ ನಿಟ್ಟಿನಲ್ಲಿ ಎನ್ಐಎ ಸಾಕ್ಷಗಳನ್ನು ಕಲೆ ಹಾಕಲು ಮುಂದಾಗಿದೆ. ಈ ಸಂಘಟನೆ ಗಳು ದೇಶದ್ರೋಹದ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ ನಡೆದ ಹಲವು ಹತ್ಯೆಗಳ ಹಿಂದೆ ಸಂಘಟನೆಯ ಕೈವಾಡವಿದೆ ಎಂದು ತಿಳಿಸಿದರು. ದೇಶಾದ್ಯಂತ ಭಯೋತ್ಪಾದನೆ ಚಟುವಟಿಕೆಯಲ್ಲಿ ಸಂಘಟನೆಯವರು ತೊಡಗಿಕೊಂಡಿದ್ದಾರೆ. ಧರ್ಮಗಳ ಮಧ್ಯೆ ಸಂರ್ಷ ತರುವ ಕೆಲಸ ಮಾಡುತ್ತಿದ್ದಾರೆ. ತನಿಖೆ ವೇಳೆ ದೇಶದ್ರೋಹ ಕೆಲಸದ ಸಾಕ್ಷಿಗಳು ಲಭ್ಯ ವಾಗಿವೆ. ಹಣ, ಬಾಂಬ್ ತಯಾರಿಕೆ, ಸ್ಫೋಟ ಮಾಡಿರುವ ಬಗ್ಗೆ ತನಿಖೆಯಿಂದ ಹೊರಬಂದಿದೆ ಎಂದರು.
ಪಿಎಫ್‌ಐ ನಿಷೇಧಕ್ಕೆ ಮಾಹಿತಿ ಸಂಗ್ರಹ: ಸಚಿವೆ ಶೋಭಾ ಕರಂದ್ಲಾಜೆ
ಕೇರಳದಲ್ಲಿ ದೊಡ್ಡ ಪ್ರಮಾಣದಲ್ಲಿ ಭಯೋತ್ಪಾದನಾ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಎನ್ಐಎ ದಾಳಿಯನ್ನು ಖಂಡಿಸಿ ಪೊಲೀಸರು, ಮಾಧ್ಯಮದವರ ಮೇಲೆ ದಾಳಿ ಮಾಡಿದ್ದಾರೆ. ಈ ಸಂಘಟನೆಗಳ ನಿಷೇಧಕ್ಕೆ ಸಾಕ್ಷಿಬೇಕು. ಎನ್ಐಎ ಸಾಕ್ಷಿಗಳನ್ನು ಕಲೆ ಹಾಕುವ ಕೆಲಸವನ್ನು ಮಾಡುತ್ತಿದೆ ಎಂದು ತಿಳಿಸಿದರು.ಈ ಸಂಘಟನೆಗಳು ಸೆಮಿಯ ಇನ್ನೊಂದು ರೂಪವಾಗಿದ್ದು ಎಸ್ಡಿಪಿಐ ಮತ್ತು ಪಿಎಫ್ಐ ಸಂಘಟನೆ ಗಳನ್ನು ನಿಷೇಧ ಮಾಡಬೇಕು ಎಂದ ಅವರು, ಎನ್ಐಎ ತನಿಖೆ ವೇಳೆ ಎನ್ಐಎ ತಂಡಕ್ಕೆ ರಾಜ್ಯ ಪೊ ಲೀಸರು ರಕ್ಷಣೆ ನೀಡಬೇಕು ಎಂದು ಹೇಳಿದರು.
RSS ಮೈ ಮನಸ್ಸುಗಳಲ್ಲಿ ರಾಷ್ಟ್ರಪ್ರೇಮವಿದೆ - ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
ಭಾರತ್ ಥೋಡೋ ಯಾತ್ರೆ : ಲೇವಡಿ
ಕಾಂಗ್ರೆಸ್ ಪಕ್ಷ ಭಾರತ್ ಜೋಡೋ ಹೆಸರಿನಲ್ಲಿ ಭಾರತ್ ಥೋಡೋ ಯಾತ್ರೆ ಮಾಡುತ್ತಿದೆ. ಇದು ಭಾರತದ ಒಗ್ಗಟ್ಟನ್ನು ಮುರಿಯುವ ತುಕಡೆ ಗ್ಯಾಂಗಿನ ಯಾತ್ರೆಯಾಗಿದೆ. ಭಾರತವನ್ನು ವಿಭಜನೆ ಮಾಡಿದ ವರು ಯಾರು? ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಯಾರು ಹೊಣೆ? ಯಾರ ಕಾಲದಲ್ಲಿ ಆಗಿದ್ದು ಎಂಬುದಕ್ಕೆ ರಾಹುಲ್ ಗಾಂಧಿಯವರು ಉತ್ತರಿಸಬೇಕು ಎಂದರು.ಭಾರತ್ ಜೋಡೋ ಯಾತ್ರೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಮಾಡಬೇಕು. ಭಾರತ ಒಂದಾಗಿದೆ. ಕಾಂಗ್ರೆಸ್ ಒಗ್ಗಟ್ಟು ಮುರಿಯುವ ಕೆಲಸ ಮಾಡುತ್ತಿದೆ. ಒಂದು ಸಮುದಾಯದ ಜನರನ್ನು ಓಲೈಕೆ ಮಾಡಲಾಗುತ್ತಿದೆ ಎಂದರು.
ಮೂಡಿಗೆರೆಯ ಮೊರಾರ್ಜಿ ವಸತಿ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಮದ್ಯಾಹ್ನದ ಉಪಹಾರ ಸೇವಿಸಲಾಯಿತು.
ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಶಾಲೆಯ ಆವರಣದಲ್ಲಿ ತೆಂಗಿನ ಸಸಿಯನ್ನು ನೆಡಲಾಯಿತು. pic.twitter.com/rjsvgT5X3P