Ballari: ಮಳೆ ನಷ್ಟದ ಸರ್ವೇಗೆ ಬಾರದ ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ

By Suvarna News  |  First Published Sep 23, 2022, 9:39 PM IST

ಅತಿಯಾದ ಮಳೆಯಿಂದಾಗಿ ಕಂಗಾಲಾಗಿರೋ ಅನ್ನದಾತ. ನಷ್ಟದ ಸರ್ವೇಗೆ ಬಾರದ ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ. ಪಂಪ್ ಸೆಟ್ ಗಳಿಗೆ ವಿದ್ಯುತ್ ಮೀಟರ್ ಕೂಡಿಸುವಂತೆ ಬಳ್ಳಾರಿ ರೈತರ ಒತ್ತಾಯ
 


ವರದಿ : ನರಸಿಂಹ ಮೂರ್ತಿ ಕುಲಕರ್ಣಿ,  ಏಷ್ಯಾನೆಟ್ ಸುವರ್ಣನ್ಯೂಸ್ 

ಬಳ್ಳಾರಿ (ಸೆ.23) : ಮಳೆ ನಿಂತರೂ ಅದರ ಹನಿ ನಿಲ್ಲೋದಿಲ್ಲ ಎನ್ನುವ ಮಾತಿನಂತೆ.ಕಳೆದ ತಿಂಗಳು ಮತ್ತು ಪ್ರಸಕ್ತ ತಿಂಗಳ ಆರಂಭದಲ್ಲಿ  ಸುರಿದ ಮಳೆ ಬಳ್ಳಾರಿ ರೈತರ ಕಣ್ಣಲ್ಲಿ ನೀರು ತರಿಸುತ್ತಿದೆ. ಬಿಂಬಿಡದೇ ನಿರಂತರ ವಾಗಿ ಸುರಿದ ಮಳೆಯ ಪರಿಣಾಮ ರೈತರ ಪಾಲಿಗೆ ವರವಾಗಬೇಕಿದ್ದ ಮಳೆಯೇ ಈ ಬಾರಿ ವಿಲನ್ ಆಗೋ ಮೂಲಕ ರೈತರನ್ನ ಕಂಗೆಡಿಸಿದೆ. ಬೆಳೆದ ಬೆಳೆಯಲ್ಲ ನೀರು ಪಾಲಾಗೋ ಮೂಲಕ ಅನ್ನದಾತ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾನೆ. ಇಷ್ಟೇಲ್ಲ ಆದ್ರೂ ಕನಿಷ್ಠ ನಷ್ಟದ ಸರ್ವೇಗೂ ಅಧಿಕಾರಿಗಳು ಬಂದಿಲ್ಲ. ಜೊತೆಗೆ ಇದೀಗ ಪಂಪ್ಸೆಟ್ಗೆ ವಿದ್ಯುತ್ ಮೀಟರ್ ಹಾಕುವಂತೆ ಒತ್ತಾಯಿಸುತ್ತಿರುದು ರೈತರಿಗೆ ನುಂಗಲಾರದ ತುತ್ತಾಗಿದೆ. ಮಳೆಯ ಅಬ್ಬರ ಕಡಿಮೆಯಾದ್ರೂ ಅದರ ಸಾಧಕಭಾದಕ ಮಾತ್ರ ಇನ್ನೂ ಕಡಿಮೆಯಾಗಿಲ್ಲ ಅನ್ನೋದಕ್ಕೆ ಬಳ್ಳಾರಿ ಮತ್ತು ವಿಜಯನಗರ ಹೊಲಗಳನ್ನು ನೋಡಿದ್ರು ಗೊತ್ತಾಗುತ್ತದೆ. ಮುಂಗಾರು ಮಳೆ ಒಂದಷ್ಟು ಉತ್ತಮ ವಾಗಿ ಸುರಿದ ಹಿನ್ನೆಲೆ ಬಳ್ಳಾರಿ ಮತ್ತು ವಿಜಯನಗರದ ಸಾಂಪ್ರಾದಾಯಿಕ ಬೆಳೆಗಳಾದ ಭತ್ತ, ಹತ್ತಿ , ಮೆಣಸಿನಕಾಯಿ ಸೇರಿದಂತೆ ಹಲವು ಬೆಳೆಗಳನ್ನು ಬೆಳೆಯಲಾಗಿತ್ತು. ಆರಂಭದಲ್ಲಿ ಖುಷಿಯನ್ನು ಕೊಟ್ಟಿದ್ದ ಮಳೆ ಹಂತ ಹಂತವಾಗಿ ರೈತರನ್ನು ನಿರಂತರವಾಗಿ ಕಾಡ ತೊಡಗಿದೆ. ಒಂದು ಕಡೆ ತುಂಗಭದ್ರ ಮತ್ತೊಂದು ಕಡೆ ವೇದವತಿ ನದಿ  ಅಬ್ಬರಕ್ಕೆ ನದಿ ತೀರದ ಪ್ರದೇಶದಲ್ಲಿರೋ ಬೆಳೆಗಳೆಲ್ಲ ಸಂಪೂರ್ಣ ಹಾಳಾಗಿದೆ. ಮಳೆಯ ಅಬ್ಬರಕ್ಕೆ  ಕೊಳೆತಿದ್ದ ಮತ್ತು ಬಾಗಿದ್ದ ತೆನೆಗಳಲ್ಲ ನಂತರದ ದಿನಗಳಲ್ಲಿ  ನದಿಯ ನೀರಿನ ರಭಸಕ್ಕೆ ಕಾಳುಗಳೆಲ್ಲ ಉದುರಿ ಹೋಗಿವೆ. ಇಷ್ಟೇಲ್ಲ ನಡೆದು ತಿಂಗಳು ಕಳೆಯುತ್ತಾ ಬಂದಿದ್ರು. ಕನಿಷ್ಟ ಇಲ್ಲಿಯ ಅಧಿಕಾರಿಗಳು ಸರ್ವೇಗೂ ಕೂಡ ಬಂದಿಲ್ಲ ಎನ್ನುವುದು ರೈತರ ಅಳಲಾಗಿದೆ.  ಹೆಚ್ಚು ಕಡಿಮೆ ಹತ್ತು ಹೆಕ್ಟರ್ ಪ್ರದೇಶದಲ್ಲಿನ ಬೆಳೆ ಹಾಳಾಗಿದ್ದು, ಪ್ರತಿ ಎಕೆರೆಗೆ ಮೂವತ್ತು ಸಾವಿರ ದಂತೆ ಖರ್ಚು ಮಾಡಲಾಗಿದೆ. ಹೀಗಾಗಿ ಕನಿಷ್ಟ 25 ಸಾವಿರ ರೂಪಾಯಿ ನಷ್ಟಪರಿಹಾರ ಕೊಡಬೇಕೆಂದು ರೈತರಾದ ಕೃಷ್ಣಮೂರ್ತಿ ಒತ್ತಾಯಿಸಿದ್ದಾರೆ.

Latest Videos

undefined

ಬಳ್ಳಾರಿಯಲ್ಲಿ ಅಕಾಲಿಕ ಮಳೆ ಸೃಷ್ಟಿಸಿದ ಅವಾಂತರ ಒಂದೆರಡಲ್ಲ!

ಪಂಪ್ ಸೆಟ್ ಗಳಿ ಮೀಟರ್ ಕೂಡಿಸುವಂತೆ ಒತ್ತಾಯ: ಇನ್ನೂ ಮಳೆಯಿಂದ ಬೆಳೆ ಹಾನಿಯಾಗಿರೋದು ಒಂದು ಕಡೆಯಾದ್ರೇ, ಇದೀಗ ಸರ್ಕಾರ ಹೊಸದೊಂದು ನಿಯಮ ಮಾಡಿದ್ದು, ರೈತರು ಹೊಲಗಳಲ್ಲಿ ಪಂಪ್ ಸೆಟ್ಗಳಿಗೆ ಕರೆಂಟ್  ಮೀಟರ್ ಕೂಡಿಸುವಂತೆ ಒತ್ತಾಯ ಮಾಡ್ತಿದ್ದಾರೆ. ಈಗಾಗಲೇ ನಷ್ಟದಲ್ಲಿರೋ ರೈತರಿಗೆ  ಸರ್ಕಾರದ ಹೊಸ ನಿಯಮ ಗಾಯದ ಮೇಲೆ ಬರೆ ಎಲೆದಂತಾಗಿದೆ ಹೀಗಾಗಿ ನಮಗೆ ಆತ್ಮಹತ್ಯೆಯೇ ದಾರಿ ಎನ್ನುತ್ತಿದ್ದಾರೆ ಬಳ್ಳಾರಿಯ ರೈತ ಕೊಟ್ರಪ್ಪ.

ಬಳ್ಳಾರಿ: ಆಂಧ್ರ ಗಡಿಭಾಗದಲ್ಲಿ ಭಾರೀ ಮಳೆ, ನದಿಯಲ್ಲಿ ಕೊಚ್ಚಿಹೋದ ಎತ್ತು

ಸರ್ವೇ ಮಾಡಲು ಒಬ್ಬ ಅಧಿಕಾರಿಯೂ ಹೊಲದ ಬಳಿ ಬಂದಿಲ್ಲ: ಒಂದು ಕಡೆ ಬೆಳೆ ನಷ್ಟ ಮತ್ತೊಂದು ಕಡೆ ನಷ್ಟದ ಸರ್ವೇಗೆ ಬಾರದ ಅಧಿಕಾರಿಗಳು. ಈ ಮಧ್ಯೆ ಹೊಲಗಳಲ್ಲಿನ ಪಂಪ್ ಸೆಟ್ ಗಳಿಗೆ ವಿದ್ಯುತ್ ಮೀಟರ್ ಕೂಡಿಸುವಂತೆ  ಅಧಿಕಾರಿಗಳ ಒತ್ತಡದಿಂದಾಗಿ ಬಳ್ಳಾರಿಯ ಅನ್ನದಾತ ನಲುಗಿ ಹೋಗಿದ್ದಾನೆ. ರೈತರ ಬೆನ್ನಲುಬು ಅನ್ನೋ ಸರ್ಕಾರಗಳು ಮತ್ತು ಜನಪ್ರತಿನಿಧಿಗಳು ಈಗಲಾದ್ರೂ ರೈತರ ಬೆನ್ನಿಗೆ ನಿಲ್ಲುತ್ತವೇ ಅನ್ನೋದನ್ನ ಕಾದು ನೋಡಬೇಕಿದೆ.  

click me!