Tumakuru: ವಿದ್ಯುತ್‌ ಉತ್ಪಾದನೆಯಲ್ಲಿ ಸುಧಾರಣೆಯಾಗಬೇಕು: ಡಾ.ಜಿ.ಪರಮೇಶ್ವರ್‌

By Govindaraj S  |  First Published Sep 23, 2022, 9:35 PM IST

ಜಲ, ಸೌರ ಮತ್ತು ಉಷ್ಣ ವಿದ್ಯುತ್‌ ಸ್ಥಾವರಗಳಿಂದ ಉತ್ಪಾದಿಸುತ್ತಿರುವ ವಿದ್ಯುತ್‌ ಸದ್ಯದ ಪರಿಸ್ಥಿಯಲ್ಲಿ ಸಾಲುತ್ತಿಲ್ಲ. ಹೆಚ್ಚುತ್ತಿರುವ ಬೇಡಿಕೆಯನ್ನು ಸರಿದೂಗಿಸಲು ಇಂದು ಆಧುನಿಕ ತಂತ್ರಜ್ಞಾನದಿಂದ ಹೆಚ್ಚು ಉತ್ಪಾದನೆ ಮತ್ತು ಸುಧಾರಣೆ ತಂದುಕೊಳ್ಳುವ ಅಗತ್ಯವಿದೆ ಎಂದು ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿಗಳು ಹಾಗೂ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅಭಿಪ್ರಾಯಪಟ್ಟರು.


ತುಮಕೂರು (ಸೆ.23): ಜಲ, ಸೌರ ಮತ್ತು ಉಷ್ಣ ವಿದ್ಯುತ್‌ ಸ್ಥಾವರಗಳಿಂದ ಉತ್ಪಾದಿಸುತ್ತಿರುವ ವಿದ್ಯುತ್‌ ಸದ್ಯದ ಪರಿಸ್ಥಿಯಲ್ಲಿ ಸಾಲುತ್ತಿಲ್ಲ. ಹೆಚ್ಚುತ್ತಿರುವ ಬೇಡಿಕೆಯನ್ನು ಸರಿದೂಗಿಸಲು ಇಂದು ಆಧುನಿಕ ತಂತ್ರಜ್ಞಾನದಿಂದ ಹೆಚ್ಚು ಉತ್ಪಾದನೆ ಮತ್ತು ಸುಧಾರಣೆ ತಂದುಕೊಳ್ಳುವ ಅಗತ್ಯವಿದೆ ಎಂದು ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿಗಳು ಹಾಗೂ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅಭಿಪ್ರಾಯಪಟ್ಟರು. ತುಮಕೂರಿನ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪಿ.ಜಿ. ಸೆಮಿನಾರ್‌ ಸಭಾಂಗಣದಲ್ಲಿ ಗುರುವಾರ ಎಲೆಕ್ಟ್ರಿಕಲ್‌ ಮತ್ತುಎಲೆಕ್ಟ್ರಾನಿಕ್ಸ್‌ ಇಂಜಿನಿಯರಿಂಗ್‌ ವಿಭಾಗದ ಎನರ್ಜಿ ಕ್ಲಬ್‌ ಏರ್ಪಡಿಸಲಾಗಿದ್ದ ವಿದ್ಯುತ್‌ ಚಾಲಿತ ವಾಹನಗಳ ಬಳಕೆ ಮತ್ತುಅದರ ಅನ್ವಯಿಕಗಳು ಕುರಿತು ನವದೆಹಲಿಯ ಎಐಸಿಟಿಇ ಪ್ರಾಯೋಜಿತ ಎರಡು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಇಂದು ತಂತ್ರಜ್ಞಾನ ಬಳಕೆ ಜಗತ್ತನ್ನೇ ಬದಲಾಯಿಸಿ ಬಿಟ್ಟಿದೆ. ಸೌರಶಕ್ತಿ ಉತ್ಪಾದನೆ ವಿದ್ಯುತ್‌ ಚಾಲಿತ ವಾಹನಗಳ ಉತ್ಪಾದನೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ ಕರ್ನಾಟಕದಲ್ಲಿ ವಿದ್ಯುತ್‌ ಬೇಡಿಕೆ ಉತ್ಪಾದನೆಗೆ ತಕ್ಕದಾಗಿಲ್ಲ. ಜಲ ವಿದ್ಯುತ್‌ ಹನ್ನೆರಡು ಸಾವಿರದಿಂದ ಹದಿನೈದು ಸಾವಿರ ಮೆಗಾ ವ್ಯಾಟ್‌ ಕರ್ನಾಟಕದಲ್ಲಿ ಉತ್ಪಾದಿಸಲಾಗುತ್ತದೆ. ಅದರಲ್ಲಿ ಪಾವಗಡದಲ್ಲಿ 2900 ಕರ್ನಾಟಕದಲ್ಲಿ ಅದರಲ್ಲಿ 50% ನವೀಕರಿಸಬಹುದಾದ ಮೂಲಗಳಿಂದ ಶೇ.13 ರಿಂದ 15 ಪಸೆಂರ್‍ಟ್‌ ಹೈಡ್ರೋ 30%  ಕಲ್ಲಿದ್ದಲು ನಿಂದ ಉತ್ಪಾದಿಸಲಾಗುತ್ತಿದೆ ಎಂದು ಹೇಳಿದರು.

Tap to resize

Latest Videos

ದೇವಸ್ಥಾನ ಆಸ್ತಿ ವಿವಾದ: ಜೆಡಿಎಸ್ ಮುಖಂಡನಿಂದ ಇಬ್ಬರ ಬರ್ಬರ ಕೊಲೆ

ವಿದ್ಯುತ್‌ ಬೇಡಿಕೆ ಹೆಚ್ಚಳ: ಜಲ, ಸೌರ ಮತ್ತು, ಉಷ್ಣ ವಿದ್ಯುತ್‌ ಸ್ಥಾವರಗಳಿಂದ ಪಡೆಯುತ್ತಿರುವ ವಿದ್ಯುತ್‌ ಸಾಲುತ್ತಿಲ್ಲ. ಉತ್ಪಾದನೆ ಮತ್ತು ಬೇಡಿಕೆ ನಡುವೆ ಅಂತರವಿದೆ. ಈ ಅಂತರ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ.ಇದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆಯನ್ನು ಮಾಡಿಕೊಳ್ಳುವ ಅಗತ್ಯವಿದೆ ಎಂದು ಪರಂ ಸಲಹೆ ನೀಡಿದರು. ಪ್ರಪಂಚದ ಇತರೆ ಮುಂದುವರೆದ ದೇಶಗಳ ಪ್ರಸ್ತುತ ವಿದ್ಯುತ್‌ ಬೇಡಿಕೆ, ಪೂರೈಕೆ ಮತ್ತು ಕೊರತೆ ಬಗ್ಗೆಯೂ ಸಮನ್ವಯತೆ ಸಾಧಿಸುತ್ತಿರುವುದನ್ನು ಅಂಕಿ ಅಂಶಗಳ ಸಮೇತ ಉಲ್ಲೇಖಿಸಿದ ಅವರು, ಭಾರತದಲ್ಲಿ ಬೇರೆ ಬೇರೆ ಕ್ಷೇತ್ರಗಳಿಗೆ ನೀಡುತ್ತಿರುವ ಸಬ್ಸಿಡಿ, ಮತ್ತು ಅದರಿಂದ ಭವಿಷ್ಯದಲ್ಲಾಗುವ ಪರಿಣಾಮಗಳ ಬಗ್ಗೆಯೂ ಡಾ.ಜಿ.ಪರಮೇಶ್ವರ್‌ ಬೆಳಕು ಚೆಲ್ಲಿದರು.

5 ವರ್ಷಗಳಲ್ಲಿ ವಿದ್ಯುತ್‌ ಚಾಲಿತ ವಾಹನಗಳ ಹೆಚ್ಚಳ: ಇದೇ ವೇಳೆ ಕೇಂದ್ರ ತಂತ್ರಜ್ಞಾನ ಉತ್ಪಾದನಾ ವಿದ್ಯಾಲಯದ ನಿರ್ದೇಶಕ ಡಾ.ನಾಗಹನುಮಯ್ಯ ಮಾತನಾಡಿ, ಮುಂದಿನ ಐದು ವರ್ಷಗಳಲ್ಲಿ ವಿದ್ಯುತ್‌ಚಾಲಿತ ವಾಹನಗಳು ಹೆಚ್ಚಾಗುತ್ತವೆ. ಇಲಿಕ್ಟ್ರಾನಿಕ್‌ ಇಂಜನಿಯರಗಳು ಅದನ್ನುಅಭಿವೃದ್ಧಿಪಡಿಸಿದರೆ ಮೆಕ್ಯಾನಿಕಲ್‌ ಎಂಜನಿಯರಗಳು ಅದರ ವಿನ್ಯಾಸ ಮಾಡುತ್ತಾರೆ. ಇಂತಹ ಯೋಜನೆಗಳ ಜಾರಿಗೆಕಾರ್ಯಗಾರ ಮತ್ತು ಸಂವಾದ ಅಗತ್ಯವಾಗಿದೆ ಎಂದು ವಿದ್ಯಾರ್ಥಿಗಳಿಗೆ ಪ್ರೊಜೆಕ್ಟರ್‌ ಮೂಲಕ ಸಂವಾದ ನಡೆಸಿದರು.

Tumakuru: ರಾಜ್ಯಸಭಾ ಸದಸ್ಯ ಡಾ.ಹನುಮಂತಯ್ಯಗೆ ಬೆದರಿಕೆ ಪತ್ರ

ಇಸ್ರೋ ಸಂಸ್ಥೆಯ ಸಿ.ಕೆ.ಗೌರಿಶಂಕರ್‌, ಸಾಹೇ ವಿಶ್ವವಿದ್ಯಾಲಯದ ಕುಲಪತಿ ಡಾ.ಬಾಲಚಂದ್ರ.ಪಿ.ಶೆಟ್ಟಿ, ರಿಜಿಸ್ಟ್ರಾರ್‌ ಡಾ.ಎಂ.ಝಡ್‌ಕುರಿಯನ್‌, ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಂ.ಎಸ್‌.ರವಿಪ್ರಕಾಶ್‌, ಎಲೆಕ್ಟ್ರಿಕಲ್‌ ವಿಭಾಗದ ಮುಖ್ಯಸ್ಥ ಡಾ.ಎಲ್‌.ಸಂಜೀವ್‌ಕುಮಾರ್‌, ಎನರ್ಜಿಕ್ಲಬ್‌ ಸಂಯೋಜಕ ಪೊ.ಎನ್‌. ಪ್ರದೀಪ್‌, ಶ್ರೀಹರ್ಷ ಜೆ, ವಿದ್ಯಾರ್ಥಿ ಸಂಯೋಜಕಿ ಪೂರ್ಣಿಮಾ ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

click me!