ಶಿವಮೊಗ್ಗ ಗಲಭೆಗೆ ಸಿದ್ದು, ಪರಂ ಕುಮ್ಮಕ್ಕು: ಸಚಿವೆ ಕರಂದ್ಲಾಜೆ

By Kannadaprabha News  |  First Published Oct 4, 2023, 4:00 AM IST

ಈದ್ ಮಿಲಾದ್ ಮೆರವಣಿಗೆ ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿದೆ, ಔರಂಗಜೇಬನ ಖಡ್ಗ ಮೆರವಣಿಗೆ ಮಾಡಿದ್ದಾರೆ, ಆ ಖಡ್ಗದ ತುದಿಗೆ ರಕ್ತದ ಬಣ್ಣ ಹಾಕಿದ್ದಾರೆ, ಹಿಂದೂಗಳ ರಕ್ತ ಬೀಳುತ್ತದೆ ಎಂದು ಉರ್ದುವಿನಲ್ಲಿ ಬರೆದಿದ್ದು ಮುಸಲ್ಮಾನ ಸಮಾಜದ ಮಾನಸಿಕತೆ ಏನು, ಅವರು ಏನು ಮಾಡಲು ಹೊರಟಿದ್ದಾರೆ. ಯಾಕೆ ಈ ರೀತಿ ಮಾಡುತ್ತಿದ್ದಾರೆ ಎಂದು  ಪ್ರಶ್ನಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ 


ಚಾಮರಾಜನಗರ(ಅ.04):  ಶಿವಮೊಗ್ಗದಲ್ಲಿ ಎರಡು ಧರ್ಮಗಳ ನಡುವೆ ನಡೆದಿರುವ ಕೋಮು ಗಲಭೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಜಿ. ಪರಮೇಶ್ವರ್ ಕುಮ್ಮಕ್ಕಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದರು.

ಚಾಮರಾಜನಗರದಲ್ಲಿ ಮಾಧ್ಯಮದವರೊದಿಗೆ ಮಾತನಾಡಿ, ಈದ್ ಮಿಲಾದ್ ಮೆರವಣಿಗೆ ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿದೆ, ಔರಂಗಜೇಬನ ಖಡ್ಗ ಮೆರವಣಿಗೆ ಮಾಡಿದ್ದಾರೆ, ಆ ಖಡ್ಗದ ತುದಿಗೆ ರಕ್ತದ ಬಣ್ಣ ಹಾಕಿದ್ದಾರೆ, ಹಿಂದೂಗಳ ರಕ್ತ ಬೀಳುತ್ತದೆ ಎಂದು ಉರ್ದುವಿನಲ್ಲಿ ಬರೆದಿದ್ದು ಮುಸಲ್ಮಾನ ಸಮಾಜದ ಮಾನಸಿಕತೆ ಏನು, ಅವರು ಏನು ಮಾಡಲು ಹೊರಟಿದ್ದಾರೆ. ಯಾಕೆ ಈ ರೀತಿ ಮಾಡುತ್ತಿದ್ದಾರೆ ಎಂದು ಸಚಿವರು ಪ್ರಶ್ನಿಸಿದರು‌.

Tap to resize

Latest Videos

undefined

ಕುಟುಂಬ ಸಮೇತ ಮಲೆ ಮಹದೇಶ್ವರ ಸ್ವಾಮಿ ದರ್ಶನಕ್ಕೆ ಬಂದ  ನಟ ರಾಘವೇಂದ್ರ ರಾಜ್ ಕುಮಾರ್ 

ಇಡೀ ಶಿವಮೊಗ್ಗವನ್ನು ಹಸಿರುಕರಣ ಮಾಡಿದ್ದಾರೆ. ಅಖಂಡ ಸಾಮ್ರಾಜ್ಯ ಭಾರತವನ್ನು ಆಳಿದ ದೊರೆ ಔರಂಗಜೇಬ್ ಎಂದು ಬರೆದಿದ್ದಾರೆ, ಟಿಪ್ಪು ಮತ್ತು ಔರಂಗಜೇಬನ ಫೋಟೋ ಹಾಕಿದ್ದಾರೆ, ನಿಮ್ಮ ಆದರ್ಶ ಪುರುಷ ಯಾರು..? ಹಿಂದೂಗಳ ಮಾರಣಹೋಮ ಮಾಡಿದವರನ್ನು ಪ್ರದರ್ಶನ ಮಾಡುವ ಕೆಲಸ ಮುಸ್ಲಿಮರು ಮಾಡುತ್ತಿದ್ದಾರೆ, ನಿಮ್ಮ ಆದರ್ಶ ಪುರುಷ ಮೊಹಮದ್ ಪೈಗಂಬರ್ ಆಗಿದ್ದರೆ ನಮಗೆ ಖುಷಿ, ನಿಮ್ಮ ಆದರ್ಶ ಪುರುಷ ಅಬ್ದುಲ್ ಕಲಾಂ ಆಗಬೇಕಿತ್ತು, ಆದರೆ ಟಿಪ್ಪು ಸುಲ್ತಾನ್ ಔರಂಗಜೇಬ್ ಆಗಿದ್ದಾರೆ. ಖಡ್ಗ ಪ್ರದರ್ಶನ ಮಾಡುವ ಮೂಲಕ ಸರ್ಕಾರ ಮತ್ತು ಹಿಂದೂಗಳನ್ನು ಹೆದರಿಸಲು ಹೊರಟಿದ್ದೀರಿ ಎಂದು ಕಿಡಿಕಾರಿದರು.

ಕೈಯಲ್ಲಿ ಕಲ್ಲು, ತಲವಾರು:

ಹಿಂದೂಗಳ ಅಪಮಾನ ಮಾಡುವ ರೀತಿಯಲ್ಲಿ ರಾಜ್ಯದಲ್ಲಿ ಈದ್ ಮಿಲಾದ್ ನಡೆಯುತ್ತಿದೆ, ಶಿವಮೊಗ್ಗದ ಎಲ್ಲಾ ಮುಸಲ್ಮಾನರ ಕೈಯಲ್ಲಿ ಕಲ್ಲು , ತಲವಾರುಗಳಿದ್ದವು. ಅದನ್ನೆಲ್ಲ ಯಾಕೆ ಪೊಲೀಸರು ಗಮನಿಸಲಿಲ್ಲ. ಪೊಲೀಸರ ಕೈ ಕಟ್ಟಿಹಾಕಿದ್ದಾರೆ. ಕೇವಲ ಮುಸಲ್ಮಾನ ಸಮಾಜದಿಂದ ನಿಮ್ಮ ಸರ್ಕಾರ ಅಧಿಕಾರಕ್ಕೆ ಬಂದಿರುವುದಾ, 136 ಸೀಟ್ ಬಂದಿರುವುದು ಕೇವಲ ಒಂದು ಸಮುಯದಾಯದಿಂದಲಾ ಎಂದು ಸಿಎಂ ವಿರುದ್ಧ ಆಕ್ರೋಶ ಹೊರಹಾಕಿದರು.

ನಮಗೆ ರಕ್ಷಣೆ ನೀಡುವುದು ಯಾರು..? ಮನೆ ಮೇಲೆ ಕಲ್ಲು ತೂರಾಟ ಆಗಿದೆ, ಯಾಕೆ ಮುಸ್ಲಿಂ ಸಮಾಜ ಓಲೈಸುವ ಕೆಲಸ ಮಾಡುತ್ತಿದ್ದೀರಿ. ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದೀರಿ ಎಂದು ಸಿದ್ದರಾಮಯ್ಯ ವಿರುದ್ಧ ಶೋಭಾ ಕರಂದ್ಲಾಜೆ ಗುಡುಗಿದರು.

ಈ ಹಿಂದೆ ಕಾಂಗ್ರೆಸ್ ಆಡಳಿತ ಮಾಡಿದಾಗ ಹೀಗೆ ಆಗಿತ್ತು. ಇದು ಸಿದ್ದರಾಮಯ್ಯ ಕಾಲದ ದುರ್ದೆಸೆ, ಟಿಪ್ಪು ಜಯಂತಿ ಆರಂಭ ಮಾಡಿದ ದಿನದಿಂದ ದುರ್ದೆಸೆ, ಮಡಿಕೇರಿಯ ಕುಟ್ಟಪ್ಪನ ಹತ್ಯೆಯಿಂದ ಶುರುವಾದ ಹತ್ಯೆಗಳು ಇನ್ನೂ ನಿಂತಿಲ್ಲ, ಶಿವಮೊಗ್ಗ ಗಲಾಟೆ ಬಗ್ಗೆ ಯಾವ ಕ್ರಮ ಕೈಗೊಳ್ಳುತ್ತಿರೀ ಎಂದು ಪ್ರಶ್ನಿಸಿದರು.

ಎಲ್ಲರ ಸ್ವಾತಂತ್ರ್ಯಕ್ಕೆ ಅಂಬೇಡ್ಕರ್‌ ಕಾರಣ: ಸಿಎಂ ಸಿದ್ದರಾಮಯ್ಯ

ಪರಂ ಹೇಳಿಕೆಗೆ ಟೀಕೆ:

ಗೃಹ ಸಚಿವ ಜಿ. ಪರಮೇಶ್ವರ್ ಅವರು ಇದೊಂದು ಸಣ್ಣ ಘಟನೆ ಎಂಬ ಹೇಳಿಕೆ ಸಂಬಂಧ ಮಾತನಾಡಿ, ನಿಮ್ಮ ಮನೆ ಮುಂದೆ ಈ ರೀತಿ ಮಾಡಿದ್ರೆ ನೀವು ಬಿಡುತ್ತಿದ್ದರಾ..? ಬೇಜವಾಬ್ದಾರಿಯ ಸರ್ಕಾರದಿಂದ ಹಿಂದೂಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಇದು ತುಘಲಕ್ ಸರ್ಕಾರ. ಸಿದ್ದರಾಮಯ್ಯ ಇದಕ್ಕೆ ಉತ್ತರ ಹೇಳಬೇಕು, ಗಲಾಟೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲವೆಂದರೆ ಸಿದ್ದರಾಮಯ್ಯ ಅವರನ್ನ ಸುಮ್ಮನೆ ಬಿಡಲ್ಲ ಎಂದು ಸಿಎಂ ಸಿದ್ದರಾಮಯ್ಯಗೆ ಎಚ್ಚರಿಕೆ ನೀಡಿದರು.

ಈದ್ ಮಿಲಾದ್ ಆಚರಣೆ ಒಂದೇ ದಿನ ನಡೆಯಬೇಕಿತ್ತು, ಆದರೆ, ಒಂದು ದಿನ ಬಿಟ್ಟು ಇನ್ನೊಂದು ದಿನ ಮಾಡುತ್ತಿದ್ದೀರಾ, ಬೇರೇ ಜಿಲ್ಲೆಯ ಜನರು ಅಲ್ಲಿಗೆ ಬರಬೇಕು, ಗಲಾಟೆ ಆಗಬೇಕು ಎನ್ನುವುದು ನಿಮ್ಮ ಉದ್ದೇಶವಾ? ಕುಟ್ಟಪ್ಪನ ಹತ್ಯೆ ಆದಾಗ ಅಲ್ಲಿ ಕೇವಲ ಮಡಿಕೇರಿ ಜನ ಅಲ್ಲಿ ಇರಲಿಲ್ಲ. ಕೇರಳ, ಶಿವಮೊಗ್ಗ, ಮಂಗಳೂರು, ಭಟ್ಕಳದಿಂದ ಬಂದಿದ್ದರು. ಈಗಲೂ ಅದೇ ರೀತಿ ಆಗಿದೆ. ವಾಹನದಲ್ಲಿ ಹೊರಗಡೆಯಿಂದ ಜನರು ಬರುತ್ತಿದ್ದಾರೆ ಪೊಲೀಸರು ಏನು ಮಾಡುತ್ತಿದ್ದಾರೆ. ಇದಕ್ಕೆ ಉತ್ತರ ಸರ್ಕಾರ ಹೇಳಬೇಕಿದೆ ಎಂದು ಶಿವಮೊಗ್ಗ ಗಲಭೆ ವಿರುದ್ಧ ಕಾಂಗ್ರೆಸ್ ಸರ್ಕಾರಕ್ಕೆ ಕೇಂದ್ರ ಸಚಿವರು ಚಾಟಿ ಬೀಸಿದರು.

click me!