Kalaburagi: ಚಹಾಗಾಗಿ ಒಂದು ಗಂಟೆ ಕಾದ ಕೇಂದ್ರ ಸಚಿವ ಗಡ್ಕರಿ..!

By Girish Goudar  |  First Published Apr 26, 2022, 9:08 AM IST

*  ಕೇಂದ್ರ ಸಚಿವ ನಿತಿನ್ ಗಡ್ಕರಿ ದಂಪತಿಯಿಂದ ಗಾಣಗಾಪೂರ ದತ್ತಾತ್ರೆಯನಿಗೆ ಮಹಾ ಪೂಜೆ
*  ಅಧಿಕಾರಿಗಳ ನಿರ್ಲಕ್ಷತನಕ್ಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಉಮೇಶ ಜಾಧವ್
*  ಬಿಜೆಪಿಯಿಂದಲೂ ಮನವಿ


ಕಲಬುರಗಿ(ಏ.26): ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ(Nitin Gadkari) ಅವರು ಒಂದು ಕಪ್ ಚಹಾಗಾಗಿ ಒಂದು ಗಂಟೆ ಕಾದ ಘಟನೆ ನಿನ್ನೆ(ಸೋಮವಾರ) ಕಲಬುರಗಿಯಲ್ಲಿ ನಡೆದಿದೆ.  ಗಾಣಗಾಪೂರ ದತ್ತಾತ್ರೆಯ ದೇವಸ್ಥಾನಕ್ಕೆ(Ganagapur Dattatreya Temple) ತೆರಳಿ ದರ್ಶನ ಮುಗಿಸಿ ಮರಳಿ ಕಲಬುರಗಿ ಏರ್‌ಪೋರ್ಟ್‌ಗೆ ಬಂದಿಳಿದ ತಕ್ಷಣ, ಚಹಾ ಸಿಗಬಹುದಾ? ಅಂತ ಗಡ್ಕರಿ ಅವರು ಕೇಳಿದ್ದರು. ಆಹಾರ ಸುರಕ್ಷತಾ ಅಧಿಕಾರಿಗೇ ಏರ್‌ಪೋರ್ಟ್‌ನೊಳಗೆ ಬಿಡದ ಕಾರಣ ಅಲ್ಲಿ ಚಹಾ ವ್ಯವಸ್ಥೆ ಇರಲಿಲ್ಲ. ಇದನ್ನ ಅವರಿಗೆ ಹೇಳದೇ ಹೊರಗಿನಿಂದ ಚಹಾ ಮಾಡಿಸಿ ತಂದು ಕೊಡಲು ಅರ್ಧ ಗಂಟೆಗೂ ಹೆಚ್ಚು ಸಮಯ ಹಿಡಿದಿದೆ.  

ಆರಂಭದಲ್ಲಿ ಚಹಾ(Tea) ಹೊರಗಡೆಯಿಂದ ತರಬೇಕಾ ಬೇಡ್ವಾ ಎನ್ನುವ ಚರ್ಚೆಯಲ್ಲೇ ಅಧಿಕಾರಿಗಳು 10-15 ನಿಮಿಷ ಕಳೆದಿದ್ದರು. ಒಟ್ನಲ್ಲಿ ಗಡ್ಕರಿ ಚಹಾ ಬೇಡಿ ಒಂದು ಗಂಟೆಯ ನಂತರ ಕಲಬುರಗಿಯಲ್ಲಿ(Kalaburagi) ಚಹಾ ಭಾಗ್ಯ ಸಿಕ್ಕಿದೆ. ಗಡ್ಕರಿ ಅವರು ಹೋದ ನಂತರ ಸಂಸದ ಉಮೇಶ ಜಾಧವ್(Umesh Jadhav) ಅವರು ನಿರ್ಲಕ್ಷತನಕ್ಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. 

Latest Videos

undefined

ಪಿಎಸ್ಐ ಪರೀಕ್ಷೆ ಅಕ್ರಮಕ್ಕಾಗಿ ಸತ್ತವರ ಹೆಸರಿನ ಸಿಮ್ ಬಳಕೆ: ಖತರನಾಕ್ ಗ್ಯಾಂಗ್‌ ಇದು..!

ದತ್ತಾತ್ರೆಯ ದರ್ಶನ ಪಡೆದ ನಿತಿನ್ ಗಡ್ಕರಿ 

ಕೇಂದ್ರದ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಗಾಣಗಾಪೂರ ದತ್ತಾತ್ರೆಯ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಸೊಲ್ಲಾಪೂರದಿಂದ ವಿಶೇಷ ಹೆಲಿಕ್ಯಾಪ್ಟರ್ ಮೂಲಕ ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ನಿತಿನ್ ಗಡ್ಕರಿ, ಕಲಬುರಗಿ ವಿಮಾನ ನಿಲ್ದಾಣದಿಂದ ಬಿಗಿ ಭದ್ರೆತೆಯೊಂದಿಗೆ ಗಾಣಗಾಪೂರಕ್ಕೆ ರಸ್ತೆ ಮಾರ್ಗವಾಗಿ ತೆರಳಿದರು. 

ಕುಟುಂಬ ಸಮೇತವಾಗಿ ಗಾಣಗಾಪೂರಕ್ಕೆ ಆಗಮಿಸಿದ ಅವರು, ಪತ್ನಿ ಜೊತೆಗೆ ದತ್ತಾತ್ರೆಯನಿಗೆ ವಿಶೇಷ ಪೂಜೆ ಸಲ್ಲಿಸಿದರು. ಗಾಣಗಾಪೂರ ದತ್ತಾತ್ರೆಯನಿಗೆ ನಡೆಯುವ ಮಹಾಪೂಜೆಯಲ್ಲಿ ಪಾಲ್ಗೊಂಡ ನಿತಿನ್ ಗಡ್ಕರಿ ದಂಪತಿಗಳು, ತಮ್ಮ ಕುಟುಂಬ ಮತ್ತು ದೇಶದ ಜನರ ಹಿತಕ್ಕಾಗಿ ಪ್ರಾರ್ಥನೆ ಸಲ್ಲಿಸಿದರು. ಇದೇ ವೇಳೆ ಗಾಣಗಾಪೂರ ದತ್ತಾತ್ರೆಯ ದೇವಸ್ಥಾನದ ಅರ್ಚಕ ಮಂಡಳಿ ವತಿಯಿಂದ ನಿತಿನ್ ಗಡ್ಕರಿ ದಂಪತಿಗಳಿಗೆ ಆತ್ಮೀಯವಾಗಿ ಸತ್ಕಾರಿಸಲಾಯಿತು. 
ಮುಂಜಾಗ್ರತಾ ಕ್ರಮವಾಗಿ ನಿತಿನ್ ಗಡ್ಕರಿ ದಂಪತಿಗಳು ಪೂಜೆ ಸಲ್ಲಿಸಿ ಹೋಗುವವರೆಗೆ ದತ್ತಾತ್ರೆಯ ದೇವಸ್ಥಾನದಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿತ್ತು. 

ಮನವಿಗಳ ಮಹಾಪೂರ

ಇನ್ನೊಂದೆಡೆ ಕಲಬುರಗಿ ಜಿಲ್ಲೆಗೆ ಆಗಮಿಸಿದ ಕೇಂದ್ರ ಭೂ ಸಾರಿಗೆ ಸಚಿವರಿಗೆ ಮನವಿಗಳ ಮಹಾಪುರವೇ ಹರಿದು ಬಂದವು. ಕಲಬುರಗಿ ನಗರಕ್ಕೆ ಔಟರ್ ರಿಂಗ್ ರಸ್ತೆ ನಿರ್ಮಾಣ ಯೋಜನೆ ಕೇಂದ್ರ ಸರಕಾರ ಕೈ ಬಿಟ್ಟಿದ್ದು, ಅದನ್ನು ಪುನರ್ ಕೈಗೆತ್ತಿಕೊಳ್ಳಬೇಕು ಎಂದು ಕಾಂಗ್ರೆಸ್ ಪಕ್ಷದ ನಿಯೋಗ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು.

PSI Recruitment Scam ಕಾಂಗ್ರೆಸ್ ಶಾಸಕ ಪ್ರಿಯಾಂಕ್‌ ಖರ್ಗೆಗೆ ಸಿಐಡಿ ನೋಟಿಸ್

ಕಾಂಗ್ರೆಸ್(Congress) ಪಕ್ಷದ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ಅಫಜಲಪುರ ಕಾಂಗ್ರೆಸ್ ಶಾಸಕ ಎಂ.ವೈ ಪಾಟೀಲ್, ಮುಖಂಡರಾದ ಶರಣು ಮೋದಿ ಇನ್ನಿತರರು ಮನವಿ ಪತ್ರ ಕೊಟ್ಟು ಕಲಬುರಗಿಗೆ ಔಟರ್ ರಿಂಗ್ ರಸ್ತೆ ಅಗತ್ಯವಿದ್ದು, ಕೂಡಲೇ ಯೋಜನೆ ಪುನರ್ ಪರಿಶೀಲನೆಗೆ ಒಳಪಡಿಸಿ ಕೈಗೆತ್ತಿಕೊಳ್ಳುವಂತೆ ಗಡ್ಕರಿ ಅವರಿಗೆ ಮನವಿ ಮಾಡಿಕೊಂಡರು. 

ಬಿಜೆಪಿಯಿಂದಲೂ ಮನವಿ

ಕಲಬುರಗಿ ನಗರಕ್ಕೆ ಔಟರ್ ರಿಂಗ್ ರಸ್ತೆಗಾಗಿ ಬಿಜೆಪಿ ಸಹ ಗಡ್ಕರಿ ಅವರಿಗೆ ಮನವಿ ಸಲ್ಲಿಸಿದೆ. ಕಲಬುರಗಿ ಸಂಸದ ಉಮೇಶ ಜಾಧವ್, ಶಾಸಕ ದತ್ತಾತ್ರೇಯ ಪಾಟೀಲ್ ಇನ್ನಿತರರು ಕೇಂದ್ರ ಭೂ ಸಾರಿಗೆ ಸಚಿವರಿಗೆ ಭೇಟಿ ಮಾಡಿ ಔಟರ್ ರಿಂಗ್ ರೋರ್ಡ್‌ಗೆ ಅನುಮತಿ ಮತ್ತು ಅನುದಾನ ನೀಡುವಂತೆ ಮನವಿ ಪತ್ರ ಸಲ್ಲಿಸಿದರು.
 

click me!