ಮೊಳಕಾಲ್ಮುರು (ಜ.03): ಕೇಂದ್ರದಲ್ಲಿ (Govt Of India) ಬಿಜೆಪಿ (BJP) ಅಧಿಕಾರಕ್ಕೆ ಬಂದ ನಂತರ ಇಡೀ ದೇಶ ವೇಗವಾಗಿ ಅಭಿವೃದ್ಧಿಯತ್ತ ಸಾಗುತ್ತಿದೆ. ಕೇಂದ್ರ ಸರ್ಕಾರದ ಜನಪ್ರಿಯತೆಯನ್ನು ಸಹಿಸದ ಕಾಂಗ್ರೆಸಿಗರು (Congress) ಇಲ್ಲದ ಅಪ ಪ್ರಚಾರಕ್ಕೆ ಮುಂದಾಗುತ್ತಿದ್ದಾರೆಂದು ಕೇಂದ್ರ ಸಚಿವ ಎ. ನಾರಾಯಣ ಸ್ವಾಮಿ (A Narayana Swamy) ಆರೋಪಿಸಿದರು. ಇಲ್ಲಿನ ಬಸ್ (Bus) ನಿಲ್ದಾಣದ ಆವರಣದಲ್ಲಿ ನಡೆದ ಹೆದ್ದಾರಿ (Highway) ನಿರ್ಮಾಣ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿ, ಜಮ್ಮುವಿನಿಂದ ಕನ್ಯಾ ಕುಮಾರಿಯವರೆಗೆ ಚತುಷ್ಪಥ ರಸ್ತೆ ನಿರ್ಮಿಸಿ ಇಡೀ ದೇಶಕ್ಕೆ ಗೌರವ ತಂದು ಕೊಟ್ಟ ಕೀರ್ತಿ ಆಗಿನ ಪ್ರಧಾನಿ ಅಟಲ್ ಜಿಯವರಿಗೆ (Atal Bihari Vajapeyi) ಸಲ್ಲುತ್ತದೆ. ಕೇಂದ್ರ ಸರ್ಕಾರ ಹಳ್ಳಿ (Villages) ಹಳ್ಳಿಗೂ ಸಂಪರ್ಕ ಕಲ್ಪಿಸುವಂತ ರಸ್ತೆ (Road) ನಿರ್ಮಾಣಕ್ಕಾಗಿ ಸಾವಿರಾರು ಕೋಟಿ ಹಣ ನೀಡುತ್ತಿರುವ ಪರಿಣಾಮ ಪ್ರಸ್ತುತ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿಯೂ ಉತ್ತಮ ರಸ್ತೆಗಳನ್ನು ಕಾಣುತ್ತಿದ್ದೇವೆ ಎಂದರು.
ಪ್ರಧಾನಿ ಮೋದಿಯವರು (Prime Minister Narendra modi) ಅಧಿಕಾರಕ್ಕೆ ಬಂದ ನಂತರ ದೇಶ ಹಿಂದೆಂದೂ ಕಂಡರಿಯದಷ್ಟು ವೇಗವಾಗಿ ಅಭಿವೃದ್ಧಿಯಾಗುತ್ತಿದೆ. ಎತಿಲಾನ್ ಉತ್ಪಾದನೆ, ಪಲವತ್ತತೆಯ ಗೊಬ್ಬರ ಉತ್ಪಾದನೆ ಸೇರಿದಂತೆ ಅಗತ್ಯ ವಸ್ತುಗಳ ಉತ್ಪಾದನೆಯ ಮೂಲಕ ದೇಶ ಸ್ವಾವಲಂಭಿಯತ್ತ ಸಾಗುತ್ತಿದೆ ಎಂದು ಹೇಳಿದರು.
undefined
ಭದ್ರಾ ಮೇಲ್ದಂಡೆ ಯೋಜನೆ ವ್ಯಾಪ್ತಿಗೆ ಬಿಟ್ಟು ಹೋಗಿರುವ ಕೆರೆಗಳನ್ನು ಸೇರ್ಪಡೆಗೊಳಿಸಲು ಡಾ .ರಂಗನಾಥ ನೇತೃತ್ವದಲ್ಲಿ ಸರ್ವೇ ಕಾರ್ಯ ನಡೆಯುತ್ತಿದೆ. ವರದಿ ಸರ್ಕಾರದ ಕೈ ಸೇರಿದ ನಂತರ ಭದ್ರಾ ಮೇಲ್ದಂಡೆ ಯೋಜನೆ ವ್ಯಾಪ್ತಿಯಿಂದ ಬಿಟ್ಟಿರುವ ಜಿಲ್ಲೆಯ ಎಲ್ಲಾ ಕೆರೆಗಳಿಗೆ ನೀರುಣಿಸುವ ಕೆಲಸ ಮಾಡುತ್ತೇನೆ. ಇನ್ನು ಕೋವಿಡ್ (Covid) ಎದುರಿಸಲು ಪ್ರತಿಯೊಬ್ಬರೂ ಕಡ್ಡಾಯವಾಗಿ ಲಸಿಕೆ (Vaccine) ಪಡೆದುಕೊಳ್ಳಬೇಕು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ (Karnataka Govt) ಡಬಲ್ ಇಂಜಿನ್ ಇದ್ದಂತೆ. ಎರಡೂ ಸರ್ಕಾರದ ಸಮನ್ವಯತೆಯಿಂದಾಗಿ ಅಭಿವೃದ್ಧಿ ಕಾರ್ಯದಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗುತ್ತಿವೆ. ಸರ್ಕಾರಗಳು ಎರಡು ದಿಕ್ಕುಗಳಾಗಿ ಕೆಲಸ ಮಾಡುತ್ತಾ ಶಿಕ್ಷಣ (education) ಮತ್ತು ಉದ್ಯೋಗಕ್ಕೆ ಆದ್ಯತೆ ನೀಡಿವೆ. ಅದರಂತೆ ನಾನು ಮತ್ತು ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ಜಿಲ್ಲೆಯ ಅಭಿವೃದ್ಧಿಯಲ್ಲಿ ಡಬಲ್ ಇಂಜಿನ್‌ಗಳಾಗಿ ಕೆಲಸ ಮಾಡುತ್ತಿದ್ದೇವೆ ಎಂದರು.
60 ವರ್ಷಗಳ ನಂತರ ಕ್ಷೇತ್ರ ಸರ್ವತೋಮುಖವಾಗಿ ಅಭಿವೃದ್ಧಿಯತ್ತ ಸಾಗುತ್ತಿದೆ. ಹಲವು ದಶಕದಿಂದ ನೆನೆಗುದಿಗೆ ಬಿದ್ದಿದ್ದ ರಸ್ತೆಯನ್ನು ಅಗಲೀಕರಣ ಗೊಳಿಸಿ 30 ಕೋಟಿ ವೆಚ್ಚದಲ್ಲಿ ಹೆದ್ದಾರಿ ನಿರ್ಮಾಣ ಮಾಡಲಾಗುತ್ತಿದೆ. ತುಂಗ ಭದ್ರಾ ಹಿನ್ನೀರಿನ ಯೋಜನೆ, ಭದ್ರಾ ಮೇಲ್ದಂಡೆ ಯೋಜನೆ, 100 ದೇವಸ್ಥಾನಗಳ ಜೀರ್ಣೋದ್ಧಾರ,100 ಅಂಗವಿಕಲರಿಗೆ ದ್ವಿಚಕ್ರವಾಹನ ನೀಡುವುದು ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ತಂದಿದ್ದೇನೆ, ರಾಜಕಾರಣ ಶಾಶ್ವತ ಅಲ್ಲ. ಕ್ಷೇತ್ರವನ್ನು ಅಭಿವೃದ್ಧಿಗೊಳಿಸಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ. ನಿಮ್ಮಗಳ ಸಹಕಾರ ಅಗತ್ಯ ಎಂದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಟಿ.ಲಕ್ಷ್ಮಣ,ತಹಸೀಲ್ದಾರ್ ಟಿ.ಸುರೇಶ ಕುಮಾರ್, ಮಂಡಲ ಅಧ್ಯಕ್ಷ ಡಾ.ಪಿ.ಎಂ.ಮಂಜುನಾಥ, ನಾಯಕನಹಟ್ಟಿಮಂಡಲ ಅಧ್ಯಕ್ಷ ರಾಮರೆಡ್ಡಿ, ಪರಿಶಿಷ್ಟಜಾತಿ, ಪರಿಶಿಷ್ಟಪಂಗಡ ಆಯೋಗದ ಸದಸ್ಯ ಜಯಪಾಲಯ್ಯ, ಪಪಂ ಉಪಾಧ್ಯಕ್ಷೆ ಶುಭಾ ಪೃತ್ವಿರಾಜ್, ಸದಸ್ಯರಾದ ತಿಪ್ಪೇಸ್ವಾಮಿ, ಸವಿತ,ರೂಪ ವಿನಯ ಕುಮಾರ್, ಆರ್.ಜಿ.ಗಂಗಾಧರಪ್ಪ, ಚಂದ್ರಶೇಖರ ಗೌಡ, ಸರ್ವ ಮಂಗಳ ಇದ್ದರು.