ಚಿಕ್ಕಬಳ್ಳಾಪುರ (ಜ.03): ಒಮಿಕ್ರೋನ್ (Omicron) ಆತಂಕ ದಿನೇ ದಿನೇ ಹೆಚ್ಚಾಗುತ್ತಿರುವ ಬೆನ್ನಲೇ ಮಕ್ಕಳಿಗೆ ಕೋವಿಡ್ (Covid) ಲಸಿಕೆ ನೀಡಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿರುವ ಹಿನ್ನೆಲೆಯಲ್ಲಿ ಇಂದಿನಿಂದ ರಾಜ್ಯಾದ್ಯಂತ 15-18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದೆ. ಜಿಲ್ಲಾದ್ಯಂತ ಒಟ್ಟು 65 ಪ್ರಾಥಮಿಕ ಆರೋಗ್ಯ ಕೇಂದ್ರಗಳ (PHC) ವ್ಯಾಪ್ತಿಯ ಶಾಲಾ, ಕಾಲೇಜುಗಳಲ್ಲಿ (College) ಲಸಿಕಾಕರಣಕ್ಕೆ ಚಾಲನೆ ಸಿಗಲಿದೆ.
ಜ. 3ರಿಂದ ಜಿಲ್ಲೆಯಲ್ಲಿ ಮಕ್ಕಳಿಗೆ ಕೋವಿಡ್ (Covid) ಲಸಿಕೆ ನೀಡಲು ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪೂರ್ವ ತಯಾರಿ ನಡೆಸಿಕೊಂಡಿದ್ದು ಲಸಿಕಾಕರಣದ (Vaccination) ಮೊದಲ ದಿನವೇ ಒಟ್ಟು ಜಿಲ್ಲೆಯ ಆರು ತಾಲೂಕುಗಳಲ್ಲಿ 7,100 ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದೆ.
65,648 ಫಲಾನುಭವಿಗಳು:
ಕೇಂದ್ರ ಹಾಗೂ ರಾಜ್ಯ ಸರ್ಕಾರದ (Karnataka Govt) ಮಾರ್ಗಸೂಚಿಯಂತೆ 15-18 ವರ್ಷದೊಳಗಿನ ಮಕ್ಕಳಿಗೆ ಮಾತ್ರ ಕೋವಿಡ್ (Covid) ಲಸಿಕೆ ನೀಡಲು ನಿರ್ಧರಿಸಿದ್ದು ಅದರಂತೆ ಜಿಲ್ಲಾದ್ಯಂತ ಒಟ್ಟು 65,648 ಅರ್ಹ ಫಲಾನುಭವಿಗಳನ್ನು ಈಗಾಗಲೇ ಪಟ್ಟಿ ಮಾಡಲಾಗಿದೆ. ಆ ಪೈಕಿ ಮೊದಲ ದಿನ ಅಂದರೆ ಇಂದು 65 ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಒಟ್ಟು 7,100 ಮಕ್ಕಳಿಗೆ ಲಸಿಕೆ ಹಾಕಲು ನಿರ್ಧರಿಸಲಾಗಿದೆ.
ಈ ಪೈಕಿ ಬಾಗೇಪಲ್ಲಿ ತಾಲೂಕಿನಲ್ಲಿ 11 ಕೇಂದ್ರಗಳಲ್ಲಿ 1,200, ಚಿಕ್ಕಬಳ್ಳಾಪುರದಲ್ಲಿ (Chikkaballapura) 7 ಕೇಂದ್ರಗಳಲ್ಲಿ 800, ಚಿಂತಾಮಣಿಯಲ್ಲಿ 12 ಕೇಂದ್ರಗಳಲ್ಲಿ 1,300, ಶಿಡ್ಲಘಟ್ಟತಾಲೂಕಿನಲ್ಲಿ 12 ಕೇಂದ್ರಗಳಲ್ಲಿ 1,300, ಗುಡಿಬಂಡೆಯಲ್ಲಿ 4 ಕೇಂದ್ರಗಳಲ್ಲಿ 500 ಹಾಗೂ ಗೌರಿಬಿದನೂರು ತಾಲೂ ಇಇನಲ್ಲಿ 19 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಬರೋಬವ್ಬರಿ 2000 ಮಕ್ಕಳಿಗೆ ಇಂದು ಕೋವ್ಯಾಕ್ಸಿನ್ (Covaxin) ಲಸಿಕೆ ಹಾಕಲು ನಿರ್ಧರಿಸಲಾಗಿದೆ. ಈಗಾಗಲೇ ಜಿಲ್ಲೆಗೆ ಅಗತ್ಯ ಇರುವಷ್ಟು ಕೋವಿಡ್ (Covid) ಲಸಿಕೆಯನ್ನು ಕೂಡ ದಾಸ್ತಾನು ಮಾಡಿಕೊಳ್ಳಲಾಗಿದೆಯೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಇಂದಿರಾ ಆರ್.ಕಬಾಡೆ ತಿಳಿಸಿದ್ದಾರೆ.
ಆಧಾರ್ ತೋರಿಸಿದರೆ ಸಾಕು:
ಜಿಲ್ಲಾದ್ಯಂತ 65 ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿರುವ ಶಾಲಾ, ಕಾಲೇಜುಗಳಲ್ಲಿಯೆ (College) ಲಸಿಕಾಕರಣ ನಡೆಯಲಿದ್ದು ಪ್ರತಿಯೊಂದು ಮಗುವು ಕೂಡ ಆಧಾರ್ ಕಾರ್ಡ್ (Aadhaar Card) ತೋರಿಸಿ ಲಸಿಕೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಆಧಾರ್ ಕಾರ್ಡ್ ಇಲ್ಲದೇ ಹೋದ ಪಕ್ಷದಲ್ಲಿ ಶಾಲಾ (School) ದಾಖಲಾತಿ ಬಗ್ಗೆ ಯಾವುದಾದದೂ ಒಂದನ್ನು ತೋರಿಸಿ ಲಸಿಕೆ ಪಡೆಯಬಹುದಾಗಿದೆ.
ಜಿಲ್ಲೆಯಲ್ಲಿ 15 ರಿಂದ 18 ವರ್ಷದೊಳಗಿನ 65,648 ಮಕ್ಕಳಿದ್ದಾರೆ. ಸರ್ಕಾರದ ನಿರ್ದೇಶನದಂತೆ ಕೋವಿಡ್ -19ರ ಲಸಿಕೆಯನ್ನು ನೀಡಲು ಜಿಲ್ಲಾಡಳಿತ ಸಕಲ ರೀತಿಯ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದ್ದು, ಜ.3ರಿಂದ ಮಕ್ಕಳು ಓದುತ್ತಿರುವ ಶಾಲಾ ಕಾಲೇಜುಗಳಲ್ಲಿಯೇ ಲಸಿಕಾಕರಣ ಆಯೋಜಿಸಲಾಗಿದೆ.
ಆರ್.ಲತಾ, ಜಿಲ್ಲಾಧಿಕಾರಿ.
ಲಸಿಕಾಕರಣದ ಫಲಾನುಭವಿಗಳು
ತಾಲೂಕು ಒಟ್ಟು ಫಲಾನುಭವಿಗಳು
ಬಾಗೇಪಲ್ಲಿ 9,921
ಚಿಕ್ಕಬಳ್ಳಾಪುರ 14,027
ಚಿಂತಾಮಣಿ 15,035
ಗೌರಿಬಿದನೂರು 16,346
ಗುಡಿಬಂಡೆ 1,494
ಶಿಡ್ಲಘಟ್ಟ 8.825
ಮಂಡ್ಯದಲ್ಲಿ ಜಿಲ್ಲೆಯಲ್ಲಿ ಲಸಿಕಾ ಕಾರ್ಯಕ್ರಮ : ಮಂಡ್ಯ : ಕೊರೋನಾ ಸೋಂಕಿನಿಂದ ಮಕ್ಕಳನ್ನು ರಕ್ಷಣೆ ಮಾಡಲು ಜ.3 ರಿಂದ ಜಿಲ್ಲೆಯಲ್ಲಿ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಲಸಿಕೆಯನ್ನು ನೀಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಟಿ.ಎನ್.ಧನಂಜಯ ಹೇಳಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಜಿಲ್ಲಾದ್ಯಂತ ಒಟ್ಟು 77458 ಅರ್ಹ ಫಲಾನುಭವಗಳನ್ನು ಗುರ್ತಿಸಲಾಗಿದ್ದು, ಅದರಲ್ಲಿ 15000 ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಕೆ.ಆರ್.ಪೇಟೆ-2400, ಮದ್ದೂರು-2000, ಮಳವಳ್ಳಿ-2000, ಮಂಡ್ಯ-2200, ನಾಗಮಂಗಲ-2400, ಪಾಂಡವಪುರ-1200, ಶ್ರೀರಂಗಪಟ್ಟಣ-2800 ಮಕ್ಕಳನ್ನು ಗುರುತಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಸ್ತುತ ಸರ್ಕಾರದ ಮಾರ್ಗಸೂಚಿಗಳಂತೆ ಕೋವ್ಯಾಕ್ಷಿನ್ ಲಸಿಕೆಯನ್ನು ಮಾತ್ರ ಮಕ್ಕಳಿಗೆ ನೀಡಲು ವ್ಯವಸ್ಥೆ ಮಾಡಿಕೊಂಡಿದ್ದು, ಈ ಲಸಿಕಾರಣಕ್ಕೆ ಜಿಲ್ಲೆಯಲ್ಲಿ ಪ್ರಸ್ತುತ 18700 ಕೊವ್ಯಾಕ್ಷಿನ್ ಲಭ್ಯ ಇದ್ದು, ಇನ್ನುಳಿದ ಎಲ್ಲ ಮಕ್ಕಳಿಗೆ ಲಸಿಕೆ ನೀಡುವ ಗುರಿ ಹಾಕಿಕೊಳ್ಳಲಾಗಿದೆ ಎಂದಿದ್ದಾರೆ.