ನೆಲಮಂಗಲ (ಜ.03): ಮುಂಬರುವ ವಿಧಾನಸಭೆಯ (Assembly Election) ಸಾರ್ವತ್ರಿಕ ಚುನಾವಣೆಗೆ ಈಗಾಗಲೇ ಕಾಂಗ್ರೆಸ್ (Congress) ಪಕ್ಷದಲ್ಲಿ ಟಿಕೆಟ್ ಲಾಬಿ ಶುರುವಾದಂತೆ ಅಭ್ಯರ್ಥಿಗಳು ಚಿಂತೆಗೀಡಾಗಿದ್ದಾರೆ. ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಅಂಜನಮೂರ್ತಿ (Anjanamurthy) ಮಾತನಾಡಿ, ತಮ್ಮ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಅವರು ಮಾತನಾಡಿ ನೋಡು ಗುರು ಟಿಕೆಟ್ ಕೊಡ್ತೀನಿ, ಗೆದ್ದು ಬಂದು ಮಿನಿಸ್ಟರ್ ಆಗು ಅಂತ ಆರು ತಿಂಗಳ ಹಿಂದೆ ಅಭಿಮಾನದ ಮಾತುಗಳನ್ನ ಹೇಳಿದ್ದಾರೆ. ಈ ಮಾತನ್ನ ಸಿದ್ದರಾಮಯ್ಯನವರು (siddaramaiah) ಜೊತೆಗೆ ಹೇಳಬೇಕು. ಸಿದ್ದರಾಮಯ್ಯ ನಮ್ಮ ನಾಯಕರು, ಇಬ್ಬರು ಜೋಡೆತ್ತು ಹೋದಂಗೆ ಹೋಗಬೇಕಿದೆ. ಪಕ್ಷ ಮುನ್ನಡೆಯೋಕೆ ನಾನು ಮುಂದಿನ ಚುನಾವಣೆಗೆ ಆಕಾಂಕ್ಷಿಯಾಗಿರುವುದಾಗಿ ತಿಳಿಸಿದ್ದಾರೆ.
ನಮ್ಮ ಕಾಂಗ್ರೆಸ್ ಪಕ್ಷ (Congress) ಸಮುದ್ರ ಇದ್ದಂಗೆ. ಬಿಎಂಎಲ್ (BML) ಕಾಂತರಾಜು ಬರೋದ್ರಿಂದ ಪಕ್ಷಕ್ಕೆ ಬಲ ಬರುತ್ತೆ ನಮ್ಮ ಪಕ್ಷಕ್ಕೆ ಯಾರು ಬಂದ್ರು ನಾವು ಸ್ವಾಗತ ಕೋರುತ್ತೇನೆ. ಆಂಜನಮೂರ್ತಿ ಇತಿಹಾಸದಲ್ಲಿ ಬಂಡಾಯ ಇಲ್ಲ ನನಗೆ ಪಕ್ಷ ಎಲ್ಲವನ್ನೂ ಕೊಟ್ಟಿದ್ದು, ನನಗೆ ಬಂಡಾಯದ ಅವಶ್ಯಕತೆ ಇಲ್ಲ ನನ್ನ ಕಾರ್ಯಕರ್ತ ಒತ್ತಾಯದ ಮೇರೆಗೆ ನಾಮಪತ್ರ ಸಲ್ಲಿಸಿದ್ದೆ. ನಂತರ ಪಕ್ಷ ಮುಖ್ಯ ಅಂತ ನಾಮಪತ್ರ ವಾಪಸ್ ತೆಗೆದುಕೊಂಡೆ ಎಂದರು.
undefined
ಪಕ್ಷದ ತೀರ್ಮಾನವೇ ಅಂತಿಮ, ನಾನು ಪಕ್ಷ ಬಿಡೋ ಮಾತೇ ಇಲ್ಲ. ತಾಲೂಕಿನ ಜನ ನನ್ನ ಕೈಬಿಡೋದಿಲ್ಲ. ನನ್ನ ಜನರ ಮೇಲೆ ನನಗೆ ನಂಬಿಕೆ ಇದೆ. ಇಲ್ಲಿಯೇ ಹುಟ್ಟಿದ ಜನರಿಗೆ ಅವಕಾಶ ಕೊಡಿ, ನೆರೆಯವರಿಗೆ ಅವಕಾಶ ಕೊಡಬೇಡಿ. ಕಳೆದ ಬಾರಿ ನಂಬಿಕೆಗೆ ದ್ರೋಹ ಆಗಿತ್ತು, ಈಗ ನನಗೆ ಹೈ ಕಮಾಂಡ್ ಮೇಲೆ ವಿಶ್ವಾಸವಿದೆ ಎಂದಿದ್ದಾರೆ. ಅಲ್ಲದೆ ಮುಂದಿನ ವಾರ ಮೇಕೆದಾಟು ಯೋಜನೆ ವಿಚಾರದ ಪಾದಯಾತ್ರೆಯಲ್ಲಿ ನೆಲಮಂಗಲ (Nelamangala) ತಾಲೂಕಿನ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ನಮ್ಮ ನೀರು ಹೊಸೂರಿನ ಮೂಲಕ ಸಮುದ್ರಕ್ಕೆ ಸೇರುತ್ತೆ ವ್ಯರ್ಥವಾಗಿ ಸಮುದ್ರ ಸೇರೋ ನೀರನ್ನ ಸದ್ಬಳಕೆ ಮಾಡಿಕೊಳ್ಳಬೇಕು ಮುಂದಿನ ದಿನಗಳಲ್ಲಿ ನೀರಿನ (Water) ಅಭಾವ ತೀವ್ರವಾಗಿ ಕಾಡಲಿದೆ. ಈಗಾಗಿ ನಮ್ಮ ಡಿ.ಕೆ. ಶಿವಕುಮಾರ್ (DK Shivakumar) ಅವರು ಮೇಕೆದಾಟು ಡ್ಯಾಂ ನಿರ್ಮಾಣಕ್ಕೆ ಕರೆ ಕೊಟ್ಟಿದ್ದಾರೆ. ಪಕ್ಷಾತೀತವಾಗಿ ನೀರಿನ ಅಭಾವನನ್ನು ನೀಗಿಸಲು ಶ್ರಮಿಸಬೇಕು. ದೂರದೃಷ್ಟಿಯಿಂದ ಡಿಕೆಶಿ ಕಾಳಜಿಯಿಂದ ಈ ಯೋಜನೆ ಕೈಗೊಂಡಿದ್ದಾರೆ.
ಬೆಂಗಳೂರಿನ (Bengaluru) ಕೋಟಿ ಜನಸಂಖ್ಯೆಗೆ ಕುಡಿಯುವ ನೀರಿನ ಅವಶ್ಯಕತೆ ಹೆಚ್ಚಿದೆ. ಬೆಂಗಳೂರಿಗೆ ನೀರು ಪೂರೈಸಲು ಈ ಯೋಜನೆ ಕೈಗೊಳ್ಳಲಾಗಿದೆ. ನಮ್ಮ ನೀರು ನಮ್ಮ ಹಕ್ಕು ಎನ್ನುವ ಧ್ಯೇಯ ವಾಕ್ಯದಿಂದ ಈ ಯೋಜನೆ ಕೈಗೊಳ್ಳಲಾಗಿದೆ. ಮೇಕೆದಾಟುವಿನಿಂದ ಬೆಂಗಳೂರಿಗೆ ಪಾದಯಾತ್ರೆ ಕಾರ್ಯಕ್ರಮ 9ನೇ ತಾರೀಕಿನಂದು ಶುರುವಾಗಲಿದೆ. ರಾಜ್ಯಾದ್ಯಂತ 60 ಸಾವಿರಕ್ಕೂ ಹೆಚ್ಚು ಜನ ಸೇರೋ ಅವಶ್ಯಕತೆ ಇದೆ. ಸಿದ್ದರಾಮಯ್ಯ ಹಾಗೂ ಡಿಕೆಶಿ (DK Shivakumar) ಸಹ ಈ ಯೋಜನೆಗೆ ಕೈಜೋಡಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಪಕ್ಷಾತೀತವಾಗಿ ಭಾಗವಹಿಸಿ ಯಶಸ್ವಿಗೊಳಿಸುತ್ತೇವೆ. ಸಾರ್ವಜನಿಕರಲ್ಲಿ ಮನವಿ ನಮ್ಮ ತಾಲೂಕಿನಲ್ಲಿ ಕನಿಷ್ಟ5000 ಜನ ಪಾದಯಾತ್ರೆಯಲ್ಲಿ ಪಾಲ್ಗೊಳಬೇಕು. ಮುಂದಿನ ಪೀಳಿಗೆಯ ನೀರಿನ ಅವಶ್ಯಕತೆ ಪೂರೈಕೆಗಾಗಿ ಇಂದೇ ಶ್ರಮಿಸೋಣ ನಾಳೆ ನಾಲ್ಕು ಗಂಟೆಗೆ ಕೆಪಿಸಿಸಿ (KPCC) ಕಚೇರಿಯಲ್ಲಿ ಸಭೆ ಇದೆ ಕೆಪಿಸಿಸಿ ವತಿಯಿಂದ ಎಲ್ಲಾ ವ್ಯವಸ್ಥೆ ಮಾಡ್ತೇವೆ ನೆಲಮಂಗಲ ವಿಧಾನಸಭಾ ಕ್ಷೇತ್ರದಿಂದ ಕನಿಷ್ಟ5000 ಜನ ಪಾದಯಾತ್ರೆಗೆ ತೆರಳಲಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ನಾಗರಾಜು, ಉಪಾಧ್ಯಕ್ಷ ಸಿ.ಎಂ.ಗೌಡ್ರು, ಮಹಿಳಾ ಜಿಲ್ಲಾ ಕಾಂಗ್ರೆಸ್ (Congress) ಕಾರ್ಯಧ್ಯಕ್ಷೆ ರುಕ್ಮಿಣಿ, ಮುಖಂಡರಾದ ಕೃಷ್ಣಮೂತಿ, ಮೂರ್ತಿ ಮತ್ತಿತರರು ಇದ್ದರು.