ಮಂಡ್ಯದಲ್ಲಿಂದು ಕೇಂದ್ರ ಸಚಿವ ಕುಮಾರಸ್ವಾಮಿ ಜನತಾದರ್ಶನ

By Kannadaprabha News  |  First Published Jul 5, 2024, 4:25 AM IST

ಭಾರೀ ಬಹುಮತದೊಂದಿಗೆ ಸಂಸದ ಸ್ಥಾನಕ್ಕೆ ಆಯ್ಕೆ ಮಾಡಿರುವ ಜಿಲ್ಲೆಯ ಜನರ ನಿರೀಕ್ಷೆಯನ್ನು ಅವರು ಎಂದಿಗೂ ಹುಸಿಗೊಳಿಸುವುದಿಲ್ಲ ಎಂದು ವಿಶ್ವಾಸವಿತ್ತ ಜೆಡಿಎಸ್‌ ನಾಯಕ ಪುಟ್ಟರಾಜು 
 


ಮಂಡ್ಯ(ಜು.05): ಮಂಡ್ಯ ನಗರದ ಅಂಬೇಡ್ಕರ್‌ ಭವನದಲ್ಲಿ ಶುಕ್ರವಾರ (ಜು.5) ಸಂಸದ ಹಾಗೂ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಜನತಾದರ್ಶನ ಕಾರ್ಯಕ್ರಮ ನಡೆಸಲಿದ್ದಾರೆ. ಜನತಾದರ್ಶನ ಕಾರ್ಯಕ್ರಮ ಬೆಳಗ್ಗೆಯಿಂದ ಸಂಜೆಯವರೆಗೆ ನಡೆಯಲಿದೆ. ಕುಮಾರಸ್ವಾಮಿ ಅವರು ಸಂಜೆಯವರೆಗೂ ಜನಸಾಮಾನ್ಯರ ಜೊತೆಯಲ್ಲೇ ಇದ್ದು ಸಮಸ್ಯೆಗಳನ್ನು ಆಲಿಸಲಿದ್ದಾರೆ ಎಂದು ಜೆಡಿಎಸ್‌ ನಾಯಕ ಪುಟ್ಟರಾಜು ತಿಳಿಸಿದ್ದಾರೆ.

ಪೂರ್ವ ಸಿದ್ಧತೆ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪುಟ್ಟರಾಜು, ಭಾರೀ ಬಹುಮತದೊಂದಿಗೆ ಸಂಸದ ಸ್ಥಾನಕ್ಕೆ ಆಯ್ಕೆ ಮಾಡಿರುವ ಜಿಲ್ಲೆಯ ಜನರ ನಿರೀಕ್ಷೆಯನ್ನು ಅವರು ಎಂದಿಗೂ ಹುಸಿಗೊಳಿಸುವುದಿಲ್ಲ ಎಂದು ವಿಶ್ವಾಸವಿತ್ತರು.

Tap to resize

Latest Videos

undefined

ಜಿ.ಟಿ.ದೇವೇಗೌಡಗೆ ಜೆಡಿಎಲ್‌ಪಿ ನಾಯಕ ಹುದ್ದೆ ಸಂಭವ?

ಜನತಾದರ್ಶನ ಕಾರ್ಯಕ್ರಮ ಬೆಳಗ್ಗೆಯಿಂದ ಸಂಜೆಯವರೆಗೆ ನಡೆಯಲಿದೆ. ಕುಮಾರಸ್ವಾಮಿ ಅವರು ಸಂಜೆಯವರೆಗೂ ಜನಸಾಮಾನ್ಯರ ಜೊತೆಯಲ್ಲೇ ಇದ್ದು ಸಮಸ್ಯೆಗಳನ್ನು ಆಲಿಸಲಿದ್ದಾರೆ. ಅವರಿಗೆ ಜಿಲ್ಲೆಯ ಜನ ಆಶೀರ್ವಾದ ಮಾಡಿದ್ದಾರೆ. ಸಚಿವರಾಗಿ ದೇಶದ ಕೆಲಸದ ಜೊತೆಗೆ ಮಂಡ್ಯದ ಜನರ ಋಣ ತೀರಿಸುವ ಕೆಲಸ ಮಾಡುವ ವಿಶ್ವಾಸ ವ್ಯಕ್ತಪಡಿಸಿದರು.

ಟ್ರಯಲ್‌ ಬ್ಲಾಸ್ಟ್‌; ಜಿಲ್ಲಾಡಳಿತದ ಪರ:

ಕೆಆರ್‌ಎಸ್‌ ಬಳಿ ಟ್ರಯಲ್‌ ಬ್ಲಾಸ್ಟ್‌ ನಡೆಸುವ ವಿಚಾರವಾಗಿ ನಾವು ಜಿಲ್ಲಾಡಳಿತದ ಪರವಾಗಿದ್ದೇವೆ. ಕೆಆರ್‌ಎಸ್‌ ಅಣೆಕಟ್ಟು ನಮ್ಮೆಲ್ಲರ ಬೆನ್ನೆಲುಬು. ಅದರ ಸುರಕ್ಷತೆಗೆ ಜಿಲ್ಲಾಡಳಿತ ಯಾವ ಕ್ರಮ ಕೈಗೊಂಡರೂ ನಾವು ಅದರ ಜೊತೆ ಇರುವುದಾಗಿ ಹೇಳಿದ ಪುಟ್ಟರಾಜು, ಟ್ರಯಲ್‌ ಬ್ಲಾಸ್ಟ್‌ ವಿಷಯ ಕುರಿತಂತೆ ನಾನು ವಿಶ್ಲೇಷಣೆ ಮಾಡು ವುದಿಲ್ಲ. ಕೆಆರ್‌ಎಸ್‌ ಸುರಕ್ಷತೆಯಷ್ಟೇ ನಮಗೆ ಮುಖ್ಯ ಎಂದರು.

click me!