ಬೆಂಗಳೂರಿಗೆ ಇಂದು ಕೇಂದ್ರ ಗೃಹ ಸಚಿವ ಶಾ: ಕೆಲ ಮಾರ್ಗಗಳಲ್ಲಿ ಸಂಚಾರ ನಿರ್ಬಂಧ

By Kannadaprabha NewsFirst Published Mar 24, 2023, 4:15 AM IST
Highlights

ಟೌನ್‌ಹಾಲ್‌ ಕಡೆಯಿಂದ ಎನ್‌.ಆರ್‌.ರಸ್ತೆಯ ಮಾರ್ಗವಾಗಿ ಮೈಸೂರು ರಸ್ತೆ ಕಡೆಗೆ, ನಾಯಂಡಹಳ್ಳಿ ಜಂಕ್ಷನ್‌ನಿಂದ ಬೆಂಗಳೂರು ನಗರದ ಒಳಭಾಗ ಮತ್ತು ಹೊರಭಾಗಕ್ಕೆ ಸಂಚರಿಸುವ ಸರಕು ಸಾಗಣೆ ವಾಹನಗಳು, ಕುಂಬಳಗೋಡು ಕಡೆಯಿಂದ ಕೆಂಗೇರಿ ಕಡೆಗೆ ಸಂಚರಿಸುವ ಸರಕು ಸಾಗಣೆ ವಾಹನಗಳ ಸಂಚಾರ ನಿರ್ಬಂಧ. 

ಬೆಂಗಳೂರು(ಮಾ.24): ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಮಾ.24ರಂದು ನಗರದ ಕೊಮ್ಮಘಟ್ಟಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಅವರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಇಂದು(ಶುಕ್ರವಾರ) ಬೆಳಗ್ಗೆ 6 ಗಂಟೆಯಿಂದ ಸಂಜೆ 4 ಗಂಟೆವರೆಗೆ ನಗರದ ಕೆಲ ಮಾರ್ಗಗಳಲ್ಲಿ ಎಲ್ಲ ಮಾದರಿ ಸರಕು ಸಾಗಣೆ ವಾಹಗಳ ಸಂಚಾರ ನಿರ್ಬಂಧಿಸಲಾಗಿದೆ.

ಎಲ್ಲಿ ನಿರ್ಬಂಧ: 

ಟೌನ್‌ಹಾಲ್‌ ಕಡೆಯಿಂದ ಎನ್‌.ಆರ್‌.ರಸ್ತೆಯ ಮಾರ್ಗವಾಗಿ ಮೈಸೂರು ರಸ್ತೆ ಕಡೆಗೆ, ನಾಯಂಡಹಳ್ಳಿ ಜಂಕ್ಷನ್‌ನಿಂದ ಬೆಂಗಳೂರು ನಗರದ ಒಳಭಾಗ ಮತ್ತು ಹೊರಭಾಗಕ್ಕೆ ಸಂಚರಿಸುವ ಸರಕು ಸಾಗಣೆ ವಾಹನಗಳು, ಕುಂಬಳಗೋಡು ಕಡೆಯಿಂದ ಕೆಂಗೇರಿ ಕಡೆಗೆ ಸಂಚರಿಸುವ ಸರಕು ಸಾಗಣೆ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಮಂಡ್ಯ ಕಾಂಗ್ರೆಸ್‌ಗೆ ಕೈಕೊಟ್ಟ ಸಚಿವ ನಾರಾಯಣಗೌಡ: ಬಿಜೆಪಿಯಲ್ಲಿ ಉಳಿಯುವುದು ಕನ್ಫರ್ಮ್‌

ಪರ್ಯಾಯ ಮಾರ್ಗ: 

ಟೌನ್‌ಹಾಲ್‌ ಜಂಕ್ಷನ್‌ನಿಂದ ಎನ್‌.ಆರ್‌.ರಸ್ತೆಯ ಮಾರ್ಗವಾಗಿ ಮೈಸೂರು ರಸ್ತೆಗೆ ಸಂಚರಿಸುವ ವಾಹನಗಳು ಲಾಲ್‌ಬಾಗ್‌ ರಸ್ತೆಯ ಮೂಲಕ ಸಂಚರಿಸಬಹುದು. ನಾಯಂಡಹಳ್ಳಿ ಜಂಕ್ಷನ್‌ನಿಂದ ಬೆಂಗಳೂರು ನಗರದ ಒಳ ಮತ್ತು ಹೊರಭಾಗಕ್ಕೆ ಸಂಚರಿಸುವವರು ನಾಗರಭಾವಿ-ಸುಮ್ಮನಹಳ್ಳಿ ರಿಂಗ್‌ ರಸ್ತೆಯ ಮಾರ್ಗವಾಗಿ ಸಂಚರಿಸಬಹುದು. ಕುಂಬಳಗೋಡು ಕಡೆಯಿಂದ ಕೆಂಗೇರಿ ಕಡೆಗೆ ಸಂಚರಿಸುವವರು ನೈಸ್‌ ರಸ್ತೆಯ ಮೂಲಕ ಸಂಚರಿಸಬಹುದು.

ಮಧ್ಯಾಹ್ನ 12 ಗಂಟೆಯಿಂದ ಸಂಜೆ 4 ಗಂಟೆವರೆಗೆ ಹಳೆ ವಿಮಾನ ನಿಲ್ದಾಣ ರಸ್ತೆ, ಮೈಸೂರು ರಸ್ತೆ, ಎನ್‌.ಆರ್‌.ರಸ್ತೆ, ನೃಪತುಂಗ ರಸ್ತೆ, ಶೇಷಾದ್ರಿ ರಸ್ತೆ, ಪ್ಯಾಲೇಸ್‌ ರಸ್ತೆ, ರೇಸ್‌ಕೋರ್ಸ್‌ ರಸ್ತೆ, ಕೆಂಗೇರಿಯಿಂದ ಕೊಮ್ಮಘಟ್ಟರಸ್ತೆಗಳನ್ನು ಬಳಸದೆ ಪರ್ಯಾಯ ರಸ್ತೆಗಳನ್ನು ಬಳಸುವಂತೆ ನಗರ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.

click me!