ಚಿಕ್ಕಮಗಳೂರು: ನೀತಿ ಸಂಹಿತೆ ಜಾರಿಗೂ ಮೊದಲೇ 3.5 ಕೋಟಿ ಮೌಲ್ಯದ ಅಕ್ರಮ ವಸ್ತು ವಶ

By Girish Goudar  |  First Published Mar 23, 2023, 9:03 PM IST

ಚಿಕ್ಕಮಗಳೂರು ಜಿಲ್ಲಾದ್ಯಂತ ಖಾಕಿ ಪಡೆಯ ಹದ್ದಿನ ಕಣ್ಣು, ಗಿಫ್ಟ್ ಪಾಲಿಟಿಕ್ಸ್‌ಗೆ ಬ್ರೇಕ್, 18 ಚೆಕ್ ಪೋಸ್ಟ್, 67 ಮೊಬೈಲ್ ಸ್ಕ್ವಾಡ್, 126 ನೋಡಲ್ ಅಧಿಕಾರಿಗಳ ನೇಮಕ: ಜಿಲ್ಲಾಧಿಕಾರಿ ಕೆ.ಎನ್.ರಮೇಶ್


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಮಾ.23):  ಚಿಕ್ಕಮಗಳೂರು ಜಿಲ್ಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಗೂ ಮೊದಲೇ ಭಾರೀ ಪ್ರಮಾಣದಲ್ಲಿ ಅಕ್ರಮ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಚುನಾವಣಾ ಪೂರ್ವದಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಅಡಿಯಲ್ಲಿ ಅಪಾರ ಪ್ರಮಾಣದ ವಸ್ತುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಚಿನ್ನ, ಸೀರೆ, ಕುಕ್ಕರ್, ಮದ್ಯ, ಗಾಂಜಾ ಸೇರಿದಂತೆ ಇತರೆ ವಸ್ತುಗಳನ್ನು ವಶಕ್ಕೆ ಪಡೆದ್ದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tap to resize

Latest Videos

undefined

3 ಕೋಟಿಗೂ ಅಧಿಕ ವಸ್ತುಗಳು ವಶಕ್ಕೆ 

ಜಿಲ್ಲೆಯಲ್ಲಿ ಈಗಾಗಲೇ ವಶಕ್ಕೆ ಪಡೆದಿರುವ ವಸ್ತುಗಳು ಒಟ್ಟು ಮೌಲ್ಯ ಮೂರುವರೆ ಕೋಟಿ ರೂಪಾಯಿಗಳಿದ್ದು ಪೊಲೀಸರು ವಿಚಾರಣೆ ನಡೆಸಿದ್ದಾರೆ ಎಂದು ಜಿಲ್ಲಾಧಿಕಾರಿಗಳು ಆದ ಜಿಲ್ಲಾ ಚುನಾವಣೆ ಅಧಿಕಾರಿ ಕೆ.ಎನ್. ರಮೇಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ತರೀಕೆರೆಯಲ್ಲಿ 2.58 ಕೋಟಿ ರೂ ಬೆಲೆಯ ಚಿನ್ನ ಸಿಕ್ಕಿದ್ದರೆ, ಚಿಕ್ಕಮಗಳೂರು 666 ಸೀರೆ ಶೃಂಗೇರಿಯಲ್ಲಿ235 ಸೀರೆ, 281 ಕುಕ್ಕರ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ‌ 18ಕ್ಕೂ ಹೆಚ್ಚು ಚೆಕ್ ಪೋಸ್ಟ್, 37 ಮೊಬೈಲ್ ಸ್ಕ್ವಾಡ್ ಟೀಂ, 126 ನೋಡಲ್ ಅಧಿಕಾರಿಗಳನ್ನಾಗಿ ಐದು ವಿಧಾನಸಭಾ ಕ್ಷೇತ್ರದಲ್ಲಿ ನೇಮಿಸಲಾಗಿದೆ ಎಂದು ಮಾಹಿತಿ ನೀಡಿದರು.

ಚಿಕ್ಕಮಗಳೂರು: ಕೋಟ್ಯಂತರ ರೂ. ಮೌಲ್ಯದ ಚಿನ್ನ ವಶ; ಮತ್ತೊಂದಡೆ ಚುನಾವಣೆಗೆ ಹಂಚಲು ತಂದಿದ್ದ ಲಕ್ಷಾಂತರ ಮೌಲ್ಯದ ಸೀರೆ ವಶ!

ಮದ್ಯ, ಮಾದಕ ವಸ್ತು ವಶ 

ಮಾರ್ಚ್ 20 ರಿಂದ 23 ರ ವರೆಗೆ ಶೃಂಗೇರಿ ತಾಲ್ಲೂಕಿನಲ್ಲಿ 21984 ರೂ. ಬೆಲೆಯ 56,49 ಲೀಟರ್ ಮದ್ಯ ಹಾಗೆಯೇ ಮೂಡಿಗೆರೆ ತಾಲ್ಲೂಕಿನಲ್ಲಿ 21395 ರೂ. ಬೆಲೆಯ 49 ಲೀಟರ್, ಚಿಕ್ಕಮಗಳೂರು ತಾಲ್ಲೂಕಿನಲ್ಲಿ 34204 ರೂ. ಮೌಲ್ಯದ 87 ಲೀಟರ್ ಮದ್ಯ, ತರೀಕೆರೆ ತಾಲ್ಲೂಕಿನಲ್ಲಿ 25181 ರೂ. ಮೌಲ್ಯದ 67 ಲೀಟರ್ ಮದ್ಯ ಹಾಗೂ ಕಡೂರು ತಾಲ್ಲೂಕಿನಲ್ಲಿ 28632 ರೂ.ನ 63 ಲೀ. ಮದ್ಯ ವಶಪಡಿಸಿಕೊಳ್ಳಲಾಗಿದೆ. ಇದೇ ಅವಧಿಯಲ್ಲಿ ಶೃಂಗೇರಿ ತಾಲ್ಲೂಕಿನಲ್ಲಿ 5 ಸಾವರ ರೂ., ಮೂಡಿಗೆರೆ ತಾಲ್ಲೂಕಿನಲ್ಲಿ 40 ಸಾವಿರ ರೂ., ಚಿಕ್ಕಮಗಳೂರು ತಾಲ್ಲೂಕಿನಲ್ಲಿ 4.33 ಲಕ್ಷ ರೂ. ಮೌಲ್ಯದ ಗಾಂಜ ಮತ್ತು ಎಂಡಿಎಂಎ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಳಾಗಿದೆ ಎಂದು ತಿಳಿಸಿದರು.

ಮಲೆನಾಡಿನ ಬಹಿಷ್ಕಾರ ಗ್ರಾಮಗಳಿಗೆ ಅಧಿಕಾರಿಗಳು ಭೇಟಿ : 

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಚುನಾವಣೆ ಬಹಿಷ್ಕಾರಕ್ಕೆ ಮುಂದಾದ ಒಟ್ಟು 13 ಪ್ರಕರಣಗಳಲ್ಲಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಹವಾಲುಗಳನ್ನು ಆಲಿಸಿ ಗ್ರಾಮಸ್ಥರ ಮನವೊಲಿಸುವ ಕೆಲಸ ಮಾಡಿದ್ದಾರೆ ಎಂದು ಇದೇ ಸಮಯದಲ್ಲಿ ಜಿಲ್ಲಾಧಿಕಾರಿಗಳು ತಿಳಿಸಿದರು. ಚುನಾವಣೆ ಬಹಿಷ್ಕರಿಸುವುದಾಗಿ ಹೇಳಿ ಪ್ರತಿಭಟನೆ ನಡೆದ ಗ್ರಾಮಗಳಿಗೆ ತಹಸೀಲ್ದಾರ್ ಹಾಗೂ ತಾ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಅವರ ತೊಂದರೆಗಳನ್ನು ತಿಳಿದುಕೊಂಡು ನಮ್ಮ ಹಂತದಲ್ಲಿ ಸಾಧ್ಯವಿರುವ ಪ್ರಕರಣಗಳಲ್ಲಿ ಪರಿಹಾರ ನೀಡಿದ್ದೇವೆ. ಉಳಿದವನ್ನು ಸರ್ಕಾರದ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದರು.ಈ ಮೂಲಕ ಗ್ರಾಮಸ್ಥರಿಗೆ ಮತದಾನ ಬಹಿಷ್ಕರಿಸದಿರುವಂತೆ ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದೇವೆ. ಮತದಾನ ಸಂವಿಧಾನಾತ್ಮಕ ಹಕ್ಕು ಅದನ್ನು ತಪ್ಪದೇ ಚಲಾಯಿಸಬೇಕು ಎಂದು ತಿಳಿಸಿದ್ದೇವೆ ಎಂದು ಹೇಳಿದರು.

ನಕ್ಸಲ್ ಚಟುವಟಿಕೆ ಸ್ಥಗಿತಗೊಂಡಿದ್ದರೂ ಸೂಕ್ತ ಭದ್ರತೆ : 

ಜಿಲ್ಲೆಯ ಮಲೆನಾಡು ಭಾಗದಲ್ಲಿ ನಕ್ಸಲ್ ಚಟುವಟಿಕೆ ಸ್ಥಗಿತಗೊಂಡಿದೆ ಆದರೂ 57 ಮತಗಟ್ಟೆಗಳನ್ನು ದುರ್ಬಲ ಎಂದು ಪರಿಗಣಿಸಿ ಅದಕ್ಕೆ ಸೂಕ್ತ ಭದ್ರತೆ ಒದಗಿಸಲಾಗುತ್ತಿದೆ. 10 ರಿಂದ 12 ಸೆಕ್ಟರಲ್ ಅಧಿಕಾರಿಗಳನ್ನು ಹಾಗೂ ಕೇಂದ್ರದ ಪ್ಯಾರಾಮಿಲಿಟರಿ ಪಡೆಗಳನ್ನು ನಿಯೋಜಿಸಲಾಗಿದೆ.

click me!