ಬಸವನ ಬಾಗೇವಾಡಿ: ಮಾಜಿ ಸಚಿವ ಬೆಳ್ಳುಬ್ಬಿ ಶಾಸಕರಾಗಲೆಂದು ಅಭಿಮಾನಿಗಳ ಅಗ್ನಿ ಪ್ರವೇಶ..!

Published : Mar 23, 2023, 08:34 PM ISTUpdated : Mar 23, 2023, 09:09 PM IST
ಬಸವನ ಬಾಗೇವಾಡಿ: ಮಾಜಿ ಸಚಿವ ಬೆಳ್ಳುಬ್ಬಿ ಶಾಸಕರಾಗಲೆಂದು ಅಭಿಮಾನಿಗಳ ಅಗ್ನಿ ಪ್ರವೇಶ..!

ಸಾರಾಂಶ

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಬಿಜೆಪಿ ಟಿಕೆಟ್ ಆಕ್ಷಾಂಕ್ಷಿ ಬೆಳುಬ್ಬಿ ಫೋಟೋ ಹೊತ್ತು ಅಗ್ನಿಪ್ರವೇಶ ಮಾಡಿದ ಅಭಿಮಾನಿಗಳು. 

ವಿಜಯಪುರ(ಮಾ.23):  ಚುನಾವಣೆಗಳು ಬಂದರೆ ಸಾಕು ರಾಜಕೀಯ ಮುಖಂಡರ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನಿಗಾಗಿ ಒಂದಿಲ್ಲೊಂದು ಸಾಹಸಗಳನ್ನ ಮಾಡ್ತಾ ಇರ್ತಾರೆ. ಹಾಗೇ ವಿಜಯಪುರ ಜಿಲ್ಲೆಯಲ್ಲಿ ಮಾಜಿ ಸಚಿವ ಬೆಳ್ಳುಬ್ಬಿ ಮತ್ತೆ ಶಾಸಕರಾಗಲೆಂದು ಅಭಿಮಾನಿಗಳು ಅಗ್ನಿಪ್ರವೇಶ ಮಾಡಿದ್ದಾರೆ. 

ಜಿಲ್ಲೆಯ ಕೊಲ್ಹಾರದ ರಾಚೋಟೇಶ್ವರ ಮತ್ತು ಗರಸಂಗಿ ವೀರಭದ್ರೇಶ್ವರ ಜಾತ್ರೆಗಳಲ್ಲಿ ಬೆಳ್ಳುಬ್ಬಿ ಅಭಿಮಾನಿಗಳು ಅಗ್ನಿ ಪ್ರವೇಶ ಮಾಡಿ ಹರಕೆ ಕಟ್ಟಿದ್ದಾರೆ. ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಭಾವಚಿತ್ರ ಹೊತ್ತು ಅಗ್ನಿಪ್ರವೇಶ ಮಾಡುವ ಮೂಲಕ ಅಭಿಮಾನ ಮೆರೆದಿದ್ದಾರೆ. 

ಬಸವನ ಬಾಗೇವಾಡಿ ಮತಕ್ಷೇತ್ರದ ಸಮಸ್ಯೆ ಪರಿಹರಿಸಲು ಸಿಎಂ ಬೊಮ್ಮಾಯಿಗೆ ಬೆಳ್ಳುಬ್ಬಿ ಮನವಿ

ಬೆಳ್ಳುಬ್ಬಿ ಬಸವನ ಬಾಗೇವಾಡಿ ಮತಕ್ಷೇತ್ರದ ಬಿಜೆಪಿ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದು, ಟಿಕೆಟ್ ಘೋಷಣೆಗೂ ಮುನ್ನವೇ ಅಭಿಮಾನಿಗಳು ಶಾಸಕರಾಗಲಿ ಎಂದು ಹರಕೆ ಕಟ್ಟಿಕೊಳ್ತಿದ್ದಾರೆ.ಅಭಿಮಾನಿಗಳಾದ ಸುಭಾಶ್ ಭಜಂತ್ರಿ, ಅಕ್ಷಯ್ ಬಿಜ್ಜರಗಿ, ಪ್ರವೀಣ ಬೀಳಗಿ ಮತ್ತು ಮಹೇಶ ಅವರಿಂದ ಅಗ್ನಿಪ್ರವೇಶ ಮಾಡುವ ಮೂಲಕ ಅಭಿಮಾನ ಮೆರೆದಿದ್ದಾರೆ. 

PREV
Read more Articles on
click me!

Recommended Stories

ಬೆಂಗಳೂರು ಏರ್ಪೋರ್ಟ್ ಹೊಸ ಪಿಕ್‌ಅಪ್‌, ಪಾರ್ಕಿಂಗ್ ರೂಲ್ಸ್; ಪ್ರಯಾಣಿಕರ ಸಮಸ್ಯೆ 30 ದಿನಗಳೊಳಗೆ ನಿವಾರಣೆ
ಮಂಗಳೂರಿನಲ್ಲಿ ರಿಷಬ್ ಶೆಟ್ಟಿ ಹರಕೆ ನೇಮ ವಿವಾದ, ತಮ್ಮಣ್ಣ ಶೆಟ್ಟಿ ಎತ್ತಿದ ಹಲವು ಪ್ರಶ್ನೆಗಳಿವು