
ಬೆಳ್ತಂಗಡಿ (ಆ.೧): ದಕ್ಷಿಣ ಕನ್ನಡ(Dakshina kannada) ಜಿಲ್ಲೆಯಲ್ಲೇ ಅತಿ ದೊಡ್ಡ ಗ್ರಾಮ ಪಂಚಾಯಿತಿಯಾಗಿರುವ ಉಜಿರೆ(Ujire)ಯಲ್ಲಿ ರಾಷ್ಟ್ರಪತಿ(President of India)ಗಳ ಹೆಸರಿನಲ್ಲಿ ಸುಮಾರು 6.20 ಎಕ್ರೆ ಜಮೀನಿರುವ ವಿಚಾರ ಚರ್ಚೆಗೆ ಗ್ರಾಸವಾಗಿದೆ.
ಸರ್ಕಾರದಿಂದ ಅಧಿಕೃತವಾಗಿ ಬಿಡುಗಡೆಯಾಗಿರುವ ದಿಶಾಂಕ್ ಆ್ಯಪ್‌ನಲ್ಲಿ ಉಜಿರೆಯ 208 ಸರ್ವೇ ನಂಬರ್ ನಲ್ಲಿ 6.20 ಎಕ್ರೆ ಜಮೀನು ‘ರಾಷ್ಟ್ರಪತಿ, ಕೇಂದ್ರ ಸರ್ಕಾರ’ದ ಹೆಸರಿನಲ್ಲಿದೆ. ಇದು ಉಜಿರೆ ಸರ್ಕಲ್, ರಸ್ತೆ ಸೇರಿ ಎಚ್.ಪಿ.ಪೆಟ್ರೋಲ್ ಪಂಪ್ ನಿಂದ ಬೆಳಾಲು ಕ್ರಾಸ್ ತನಕ ಎಲ್ ಆಕೃತಿಯಲ್ಲಿದೆ. ಜೊತೆಗೆ ಅದೇ ಸರ್ವೇ ನಂಬರ್‌ನಲ್ಲಿ ಬೇರೆಯವರ ಹೆಸರಲ್ಲೂ ಜಮೀನು ಇದೆ. ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್ ಇಂಡಿಯಾ (ಎಸಿಸಿಇಐ) ಮಾಜಿ ಅಧ್ಯಕ್ಷ, ಎಂಜಿನಿಯರ್ ಜಗದೀಶ ಪ್ರಸಾದ್ ಅವರು ದಿಶಾಂಕ್ ಆ್ಯಪ್ ಪರಿಶೀಲಿಸಿದ ವೇಳೆ ಈ ವಿಚಾರ ಬೆಳಕಿಗೆ ಬಂದಿದೆ.
ಪಡುವೆಟ್ನಾಯ ಮತ್ತು ಅವರ ಪುತ್ರನ ಹೆಸರಿನಲ್ಲಿ 6 ಸೆಂಟ್ಸ್ ಮತ್ತು 2 ಸೆಂಟ್ಸ್, ಹೇಮಂತ್ ಶೆಟ್ಟಿ ಎಂಬುವರ ಹೆಸರಿನಲ್ಲಿ 6 ಸೆಂಟ್ಸ್ ಹಾಗೂ ಸದಾಶಿವ ಶೆಟ್ಟಿ ಎಂಬುವರ ಹೆಸರಿನಲ್ಲಿ 6 ಸೆಂಟ್ಸ್ ಭೂಮಿ ಕಂಡು ಬಂದಿದೆ.
ಸರ್ಕಾರದಿಂದ ಅಧಿಕೃತವಾಗಿ ಬಿಡುಗಡೆಗೊಂಡ ದಿಶಾಂಕ್ ಆ್ಯಪ್‌ನಲ್ಲಿ ಉಜಿರೆಯಲ್ಲಿ 208 ಸರ್ವೇ ನಂಬರ್ ನಲ್ಲಿ 6.20 ಎಕ್ರೆ ಜಮೀನು ರಾಷ್ಟ್ರಪತಿಗಳ ಹೆಸರಿನಲ್ಲಿ ದಾಖಲಾಗಿರುವುದು ಕಂಡು ಬಂದಿದೆ. ಇದು ತಪ್ಪು ಎಂದಾದರೆ ಕಂದಾಯ ಇಲಾಖೆಯವರು ಸರ್ವೇ ಮಾಡಿ, ರಾಷ್ಟ್ರಪತಿ ಭೂಮಿ ಅಲ್ಲ, ಇದು ತಮ್ಮದು ಎಂದು ಹೇಳಬೇಕು.
- ಜಗದೀಶ್ ಪ್ರಸಾದ್, ಮಾಜಿ ಅಧ್ಯಕ್ಷರು, ಎಸಿಸಿಇಐ.