ಉಡುಪಿ ಸಿಇಓ ಆಡಳಿತ ಯಂತ್ರವೇ ಆಶ್ಚರ್ಯ ಪಡುವ, ಅಧಿಕಾರಿಗಳು ಇತ್ತ ನೋಡುವ ಕೆಲಸವೊಂದನ್ನು ಮಾಡಿದ್ದಾರೆ. ದಿನಾ ಇನ್ನೋವ ಕಾರು ಹತ್ತುವ ಸಿಇಒ ಪ್ರಸನ್ನ ಟೆಂಪೋ ಚಲಾಯಿಸಿ ವಿಚಾರವೊಂದರ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.
ವರದಿ; ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್
ಉಡುಪಿ (ಸೆ.25): ಐಎಎಸ್ ಅಧಿಕಾರಿಗಳು ಅಂದ್ರೆ ಹೀಗೆನೇ ಇರ್ತಾರೆ ಅಥವಾ ಇರಬೇಕು ಅಂತ ಬಯಸೋ ಜನ ನಾವು. ಅಧಿಕಾರಿಗಳೂ ಅಷ್ಟೇ, ಟಾಕುಟೀಕು ಸೂಟು ಬೂಟು ಧರಿಸಿಯೇ ಕಚೇರಿ ಮತ್ತು ಜನರ ಮುಂದೆ ಕಾಣಿಸಿಕೊಳ್ತಾರೆ. ಆದ್ರೆ ಉಡುಪಿಯಲ್ಲಿ ಮಾತ್ರ ಇದಕ್ಕೆ ಭಿನ್ನ ವಾದ ವಿದ್ಯಮಾನ ನಡೆದಿದೆ. ಕಸ ಸಂಗ್ರಹಿಸೋ ಕೆಲಸವನ್ನು ಖುಷಿ ಖುಷಿಯಿಂದ ಮಾಡಿದ ಅಧಿಕಾರಿಯೊಬ್ರು ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಗ್ರಾಮಗಳ ಅಭಿವೃದ್ಧಿ- ಇಡೀ ಜಿಲ್ಲೆಯ ಹಳ್ಳಿಗಳ ನಿರ್ವಹಣೆಯ ನಿಗಾ ವಹಿಸುವುದು ಜಿಲ್ಲಾ ಪಂಚಾಯತ್ ಸಿಇಓ ಕೆಲಸ. ಆದರೆ ಉಡುಪಿ ಸಿಇಓ ಆಡಳಿತ ಯಂತ್ರವೇ ಆಶ್ಚರ್ಯ ಪಡುವ, ಅಧಿಕಾರಿಗಳು ಇತ್ತ ನೋಡುವ ಕೆಲಸವೊಂದನ್ನು ಮಾಡಿದ್ದಾರೆ. ದಿನಾ ಇನ್ನೋವ ಕಾರು ಹತ್ತುವ ಸಿಇಒ ಪ್ರಸನ್ನ ಟೆಂಪೋ ಚಲಾಯಿಸಿ ವಿಚಾರವೊಂದರ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. ಬಿಳಿ ಟಿ ಷರ್ಟ್ ಹಾಕೊಂಡು ಕಸದ ಗೋಣಿ ಸಂಗ್ರಹಿಸುತ್ತಿರುವ ಇವರು ಹೆಚ್. ಪ್ರಸನ್ನ. ಐಎಎಸ್ ಅಧಿಕಾರಿ. ಉಡುಪಿ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಬೆಳ್ಳಂ ಬೆಳಗ್ಗೆ ಎದ್ದು ಕಸ ಸಂಗ್ರಹಿಸುವ ಟೆಂಪೋವನ್ನು ಹತ್ತಿದ್ದಾರೆ. ತಾನೇ ಕಸದ ವಾಹನ ಚಲಾವಣೆ ಮಾಡಿಕೊಂಡು ಹೋಗಿದ್ದಾರೆ. ಮನೆ ಮನೆಗೆ ತೆರಳಿ ಕಸ ಸಂಗ್ರಹಿಸಿ ಸ್ವಚ್ಛ ಭಾರತ್ ಅಭಿಯಾನದ ಮಹತ್ವವನ್ನು ಸಾರಿದ್ದಾರೆ. ಜನರಲ್ಲಿ ಕಸ ನಿರ್ವಹಣೆ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಈ ಮೂಲಕ ಯಾವುದೇ ಕೆಲಸ ಕೀಳಲ್ಲ, ಸುಂದರ ಸಮಾಜ ನಿರ್ಮಾಣಕ್ಕೆ ಆಡಳಿತ ಯಂತ್ರದ ಪ್ರತಿಯೊಬ್ಬ ಸಿಬ್ಬಂದಿಯ ಕೊಡುಗೆಯು ಇರುತ್ತೆ ಅನ್ನೋದನ್ನ ಸಾರಿದ್ದಾರೆ.
ಉಡುಪಿ ಜಿಲ್ಲೆಯ 155 ಗ್ರಾಮ ಪಂಚಾಯತ್ ನಲ್ಲಿ 140 ಗ್ರಾಮ ಪಂಚಾಯತ್ ಶೇ. 80ರಷ್ಟು ಮನೆಗಳಿಂದ ಕಸ ಸಂಗ್ರಹ ಮಾಡಲಾಗುತ್ತಿದೆ. ಸ್ವಚ್ಛತಾ ಹೀ ಸೇವಾ ಅಭಿಯಾನ ದೇಶಾದ್ಯಂತ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಉಡುಪಿಯ 80 ಬಡಗುಬೆಟ್ಟು
ಪಂಚಾಯತ್ ನ ಸದಸ್ಯರು ಪಿಡಿಒ ಮತ್ತು ಸ್ಥಳೀಯ ಅಧಿಕಾರಿಗಳು ಸಿಇಒ ಗೆ ಕೈಜೋಡಿಸಿದರು.
ಉಡುಪಿ ಜಿಲ್ಲೆಯಲ್ಲಿ ಒಂದು ಸಾವಿರಕ್ಕಿಂತ ಹೆಚ್ಚು ಮಹಿಳೆಯರು ಕಸ ಸಂಗ್ರಹಣೆಯಲ್ಲಿ ತೊಡಗಿಸಿದ್ದಾರೆ. ಅವರೆಲ್ಲರಿಗೆ ಸ್ಪೂರ್ತಿ ತುಂಬುವ ಉದ್ದೇಶದಿಂದ ಮತ್ತು ಕಸ ಸಂಗ್ರಹದ ಸಂದರ್ಭ ಇರುವಂತಹ ಸವಾಲುಗಳು ಸಾರ್ವಜನಿಕರ ಸಮಸ್ಯೆಗಳನ್ನು ತಿಳಿದುಕೊಳ್ಳಲು ಸಹಕಾರಿಯಾಗಿದೆ.
ಸ್ವಚ್ಛ ಭಾರತ್ ಯೋಜನೆ ಮೂಲಕ ಸರ್ಕಾರ ಒಳ್ಳೆಯ ಉದ್ದೇಶ ಇಟ್ಟುಕೊಂಡು ಕಾರ್ಯಕ್ರಮಗಳನ್ನು ರೂಪಿಸುತ್ತದೆ. ಜನರು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದು ಸಿಇಒ ಕರೆ ನೀಡಿದರು. ಅಕ್ಟೋಬರ್ 2 ರ ಒಳಗೆ ಶೇ. 20 ರಷ್ಟು ಮನೆಗಳ ಮನ ಒಲಿಸುವ ಜವಾಬ್ದಾರಿ ನೀಡಲಾಗಿದೆ.
ಪಿತೃ ತರ್ಪಣದಿಂದ ಕುಟುಂಬಕ್ಕೆ ಏಳಿಗೆ ಆಗುತ್ತೆ, ಮಕ್ಕಳ ಭವಿಷ್ಯ ಉಜ್ವಲವಾಗುತ್ತೆ ಅನ್ನೋದು ಈ ಭಾಗದ ಜನರ ನಂಬಿಕೆ, ಇಂದು ಪಿತೃ ತರ್ಪಣ ಬಿಟ್ಟರೆ ಹಿರಿಯರ ಆತ್ಮಗಳಿಗೆ ಮೋಕ್ಷ ದೊರಕುತ್ತಂತೆ, ಮಲ್ಪೆ ಮಾತ್ರವಲ್ಲದೆ ಕರಾವಳಿ ತೀರದುದ್ದಕ್ಕೂ ವೈದಿಕರ ಮೂಲಕ ಈ ಧಾರ್ಮಿಕ ಕಾರ್ಯ ಸಂಪನ್ನಗೊಂಡಿತು.
ಬದುಕಿರುವ ಹಿರಿಯರನ್ನೇ ಗೌರವಿಸದ ಕಾಲ ಇದು, ಆದರೆ ನಮ್ಮನ್ನಗಲಿದ ಪೂವೀಕರನ್ನು ಪ್ರತಿವರ್ಷ ನೆನೆಯೋದು ಅಪರೂಪದ ಸಂಸ್ಕೃತಿ. ಕರಾವಳಿ ತೀರದಲ್ಲಿ ಇಂದಿಗೂ ಈ ಸಂಪ್ರದಾಯ ಪಾಲಿಸಿಕೊಂಡು ಬರಲಾಗುತ್ತಿದೆ.