ಉಡುಪಿ: ಆಕಾಶದಲ್ಲಿ ಚಲಿಸುವ ನಕ್ಷತ್ರ ಕಂಡು ಬೆಚ್ಚಿಬಿದ್ದ ಜನ..!

By Girish GoudarFirst Published Oct 29, 2022, 2:36 PM IST
Highlights

ವಾಸ್ತವದಲ್ಲಿ ಇವು ನಕ್ಷತ್ರಗಳಲ್ಲ, ಏಲಿಯನ್‌ಗಳೂ ಅಲ್ಲ. ಹೆಚ್ಚಿನ ಇಂಟರ್‌ನೆಟ್ ವ್ಯವಸ್ಥೆಗಾಗಿ ಆಕಾಶಕ್ಕೆ ಹಾರಿ ಬಿಟ್ಟ ಸ್ಯಾಟ್‌ಲೈಟ್‌ಗಳು  

ಉಡುಪಿ(ಅ.29):  ಆಕಾಶದಲ್ಲಿ ಸಾಲು ಸಾಲು ನಕ್ಷತ್ರಗಳನ್ನು ಕಂಡು ಜನರು ಬೆಚ್ಚಿಬಿದ್ದ ಘಟನೆ ಉಡುಪಿ ಜಿಲ್ಲೆಯ ಹಲವೆಡೆ ನಡೆದಿದೆ. ಉಡುಪಿ ಜಿಲ್ಲೆಯ ಹಲವೆಡೆ ಚಲಿಸುವ ನಕ್ಷತ್ರಗಳು ಗೋಚರವಾಗಿದೆ. ಇದರಿಂದ ಏಲಿಯನ್‌ಗಳು ಭೂಮಿಗೆ ಬಂದಿವೆ ಅಂತ ಜನರು ಮಾತನಾಡಿಕೊಳ್ಳುತ್ತಿದ್ದಾರೆ. 

ವಾಸ್ತವದಲ್ಲಿ ಇವು ನಕ್ಷತ್ರಗಳಲ್ಲ, ಏಲಿಯನ್‌ಗಳೂ ಅಲ್ಲ. ಹೆಚ್ಚಿನ ಇಂಟರ್‌ನೆಟ್ ವ್ಯವಸ್ಥೆಗಾಗಿ ಸ್ಯಾಟ್‌ಲೈಟ್‌ಗಳನ್ನ ಆಕಾಶಕ್ಕೆ ಹಾರಿ ಬಿಡಲಾಗಿದೆ. ಅಮೆರಿಕದಿಂದ ಈ ಕೃತಕ ಉಪಗ್ರಹಗಳನ್ನ ಹಾರಿ ಬಿಡಲಾಗಿದೆ. ಹೆಚ್ಚಿನ ಇಂಟರ್‌ನೆಟ್ ವ್ಯವಸ್ಥೆಗಾಗಿ 53 ಕೃತಕ ಉಪಗ್ರಹಗಳನ್ನ ಆಕಾಶಕ್ಕೆ ಹಾರಿಸಲಾಗಿದೆ ಅಂತ ಹೇಳಲಾಗುತ್ತಿದೆ. 

ಉಡುಪಿ: ಕಡಲಿನ ನಡುವೆ ನೂರಾರು ಬೋಟುಗಳಲ್ಲಿ ಕೋಟಿ ಕಂಠ ಗಾಯನ

ಶುಕ್ರವಾರವಷ್ಟೇ ಆಕಾಶಕ್ಕೆ ಸ್ಯಾಟಿಲೈಟ್‌ಗಳನ್ನು ಹಾರಿಸಲಾಗಿತ್ತು. ಸಾಲಾಗಿ ಸಾಗುವ ಸ್ಯಾಟಲೈಟ್‌ಗಳನ್ನು ಕಂಡು ಉಡುಪಿ ಜಿಲ್ಲೆಯ ಜನರು ಅಚ್ಚರಿ ಪಟ್ಟಿದ್ದಾರೆ. ವರ್ಷದ ಹಿಂದೆಯೂ ಉಡುಪಿ ಸೇರಿದಂತೆ ಹಲವಡೆ ಸ್ಯಾಟ್‌ಲೈಟ್‌ಗಳು ಗೋಚರಿಸಿದ್ದವು. ಆಕಾಶ ಸ್ವಚ್ಚವಾಗಿದ್ದರೆ ಇಂದೂ ಕೂಡ ಸ್ಯಾಟ್‌ಲೈಟ್‌ಗಳು ಕಾಣಿಸುವ ಸಾಧ್ಯತೆ ಇದೆ.  
 

click me!