ಕಾಶಪ್ಪನವರ ಹಾಗೂ ಯತ್ನಾಳ್ ಬಣಜಿಗ ಸಮಾಜದ ಬಗ್ಗೆ ಅವಹೇಳನ ಹಾಗೂ ವ್ಯಂಗ್ಯವಾಡಿದ್ದರಿಂದ ಪಂಚಮಸಾಲಿ ಹಾಗೂ ಬಣಜಿಗ ಸಮಾಜಗಳ ಮಧ್ಯೆ ವೈಮನಸ್ಸು ಉಂಟಾಗಿದೆ.
ಕೊಪ್ಪಳ(ಅ.29): ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ, ಹುನಗುಂದದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಹಾಗೂ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಣಜಿಗ ಸಮಾಜದ ಬಗ್ಗೆ ಅವಹೇಳನ ಹಾಗೂ ವ್ಯಂಗ್ಯವಾಡಿದ್ದರಿಂದ ಪಂಚಮಸಾಲಿ ಹಾಗೂ ಬಣಜಿಗ ಸಮಾಜಗಳ ಮಧ್ಯೆ ವೈಮನಸ್ಸು ಉಂಟಾಗಿದೆ. ಹೀಗಾಗಿ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಿಎಂಗೆ ಮನವಿ ಮಾಡಲಾಗುವುದು ಅಂತ ಬಣಜಿಗ ಸಮಾಜದ ಮುಖಂಡರು ತಿಳಿಸಿದ್ದಾರೆ.
ಇಂದು(ಶನಿವಾರ) ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಣಜಿಗ ಸಮಾಜದ ಮುಖಂಡರು, ಯತ್ನಾಳ್ ಹಾಗೂ ಕಾಶಪ್ಪನವರ ವಿರುದ್ಧ ಅಕ್ಟೋಬರ್ 31 ರಂದು ಕೊಪ್ಪಳದಲ್ಲಿ ಬೃಹತ್ ಪ್ರತಿಭಟನೆ ನಡೆಸಲಿದ್ದೇವೆ ಅಂತ ಹೇಳಿದ್ದಾರೆ.
undefined
2ಎ ಮೀಸಲಾತಿ ಹೋರಾಟದಲ್ಲಿ ಭಾಗವಹಿಸಿ, ಶಕ್ತಿ ತುಂಬಿ: ಕಾಶಪ್ಪನವರ
ಮಾಜಿ ಸಚಿವ ಬಸನಗೌಡ ಯತ್ನಾಳ ಹಾಗೂ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಅವರು ಬಣಜಿಗ ಸಮಾಜ ಹಾಗೂ ವೃತ್ತಿಯ ಬಗ್ಗೆ ಅವಹೇಳನಕಾರಿ ಮಾತನಾಡಿದ್ದರಿಂದ ಉಭಯ ನಾಯಕರ ವಿರುದ್ಧ ಬಣಜಿಗ ಸಮಾಜದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.