ರಾಮ ಮಂದಿರಕ್ಕೆ ಭೂಮಿ ಪೂಜೆ: ತಮ್ಮ ಗುರುಳನ್ನು ನೆನೆದ ಪೇಜಾವರ ಶ್ರೀ

By Suvarna NewsFirst Published Aug 1, 2020, 7:24 PM IST
Highlights

ಅಯೋಧ್ಯೆಯಲ್ಲಿ ಆಗಸ್ಟ್ 5ರಂದು ನಡೆಯಲಿರುವ ರಾಮಮಂದಿರ ನಿರ್ಮಾಣದ ಭೂಮಿ ಪೂಜೆಗೆ ಸಕಲ ಸಿದ್ಧತೆಗಳು ಆರಂಭವಾಗಿ. ಇತ್ತ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವಿಶ್ವಸ್ಥ, ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕೆಲ ಮಾಹಿತಿ ಹಂಚಿಕೊಂಡಿದ್ದಾರೆ.

ಉಡುಪಿ, (ಆ.01): ರಾಮ ಮಂದಿರದ ಭೂಮಿ ಪೂಜೆಗಾಗಿ ಸಕಲ ಪೂರ್ವ ಸಿದ್ಧತೆಗಳು ಭರದಿಂದ ಸಾಗಿದೆ. ಇದರ ಮಧ್ಯೆ  ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವಿಶ್ವಸ್ಥ, ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ತಮ್ಮ ಗುರುಗಳಾದ ಶ್ರೀವಿಶ್ವೇಶ ತೀರ್ಥರನ್ನು ನೆನೆದರು.

ಇಂದು (ಶನಿವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ರಾಮ ಮಂದಿರ ಪ್ರಕರಣದ ತೀರ್ಪು ಬಂದ ದಿನ ಗುರುಗಳಾದ ವಿಶ್ವೇಶ ತೀರ್ಥರು ತುಂಬಾ ಭಾವುಕರಾಗಿದ್ದರು. ತಮ್ಮ ಜನ್ಮ ಸಾರ್ಥಕವಾಯಿತು ಎಂದು ಭಾವಿಸಿದ್ದರು. ರಾಮಜನ್ಮಭೂಮಿಗಾಗಿ ಅವತರಿಸಿದ್ದೇವೆ ಎಂಬ ರೀತಿಯಲ್ಲಿ ಬದುಕಿದರು. ಧನ್ಯತಾಭಾವವನ್ನು ತನ್ನೊಳಗೆ ಇರಿಸಿಕೊಳ್ಳಲು ಅವರಿಂದ ಸಾಧ್ಯವಾಗಿಲ್ಲ. ಆ ಖುಷಿಯಲ್ಲೇ ಅವರು ನಮ್ಮನ್ನಗಲಿದರು ಎಂದು ವಿಶ್ವೇಶ ತೀರ್ಥರನ್ನು ಸ್ಮರಿಸಿದರು.

ಅಯೋಧ್ಯೆಯಲ್ಲಿ ತ್ರೇತಾಯುಗ: ಪ್ರತಿ ಮನೆಯ ಗೋಡೆಗಳೂ ಹೇಳುತ್ತಿವೆ ಶ್ರೀರಾಮನ ಕತೆ!

 ಚಾತುರ್ಮಾಸ ವೃತ ಕೈಗೊಂಡಿರುವುದರಿಂದ ತಾವು ಆಯೋಧ್ಯೆಗೆ ಹೋಗುವುದಕ್ಕಾಗದುವುದಿಲ್ಲ ಎಂದು  ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸ್ಪಷ್ಟಪಡಿಸಿದ್ದು, ಬದಲಾಗಿ ಇಲ್ಲಿ ನೀಲಾವರ ಗೋಶಾಲೆಯಲ್ಲಿ ವಿಷ್ಣುಸಹಸ್ರನಾಮ ಮಾಡುತ್ತೇವೆ. ರಾಮ ದೇವರಿಗೆ ಲಕ್ಷ ತುಳಸಿ ಅರ್ಚನೆ ಮಾಡುತ್ತೇವೆ ಎಂದರು.

ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವನ್ನು ಯಾರೂ ವಿರೋಧಿಸಬಾರದು, ಅದು ಸರ್ವೋಚ್ಛ ನ್ಯಾಯಾಲಯ ನೀಡಿದ ತೀರ್ಪಿ ಉಲ್ಲಂಘನೆಯಾಗುತ್ತದೆ. ಸುಪ್ರೀಂ ತೀರ್ಪನ್ನು ವಿರೋಧಿಸುವುದು ನಾಗರಿಕ ಪ್ರಜ್ಞೆ ಅಲ್ಲ ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಡಿ ಹೇಳಿದ್ದಾರೆ.

click me!