ಕೊರೋನಾ ಸೋಂಕಿತ ಗರ್ಭಿಣಿಯೊಬ್ಬರು ಅವಳಿ- ಜವಳಿ ಮಕ್ಕಳಿಗೆ ಜನ್ಮ ನೀಡಿ ಗಮನ ಸೆಳೆದಿದ್ದಾರೆ. ಯಾರು? ಎಲ್ಲಿ? ಎನ್ನುವ ಮಾಹಿತಿ ಈ ಕೆಳಗಿನಂತಿದೆ.
ಬಳ್ಳಾರಿ, (ಆ.01): ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಕೊರೋನಾ ಸೋಂಕಿತ ಗರ್ಭಿಣಿಯೊಬ್ಬರು ಅವಳಿ- ಜವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಸಿರಗುಪ್ಪದ ಕೊರೋನಾ ಸೋಂಕಿತೆಗೆ ಅವಳಿ ಮಕ್ಕಳು ಜನಿಸಿದ್ದು, ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿದ್ದಾರೆ.
ಹೆಣ್ಣು ಮಗು 1.8 ಕಿಲೋ ಹಾಗೂ ಗಂಡು ಮಗು 2.5 ಕಿಲೋ ತೂಕ ಇದೆ. ಹೆಣ್ಣು ಮಗುವಿನ ತೂಕ ಕಡಿಮೆ ಇರುವ ಐಸಿಯುನಲ್ಲಿ ಇರಿಸಲಾಗಿದೆ.
ಬಳ್ಳಾರಿ: ಮುದ್ದಾದ ಮಗುವಿಗೆ ಜನ್ಮ ನೀಡಿದ ಕೊರೋನಾ ಸೋಂಕಿತೆ
ಸ್ತ್ರೀರೋಗ ತಜ್ಞರಾದ ಶಾರದಾ, ಲಾವಣ್ಯ, ಅರವಳಿಕೆ ತಜ್ಞ ನರೇಂದ್ರ, ಮಕ್ಕಳ ತಜ್ಞ ಸುನೀಲ್, ಶುಶ್ರೂಷಕರಾದ ಮನೀಷಾ ಹಾಗೂ ಹೊನ್ನೂರುಸ್ವಾಮಿ ಶಸ್ತ್ರಚಿಕಿತ್ಸೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಮಹಿಳೆಗೆ ಇದು ಮೂರನೇ ಹೆರಿಗೆಯಾಗಿದೆ. ಈ ಮೊದಲಿನ ಎರಡು ಹೆರಿಗೆಗಳು ಕೂಡ ಶಸ್ತ್ರಚಿಕಿತ್ಸೆ ಮೂಲಕ ಆಗಿದ್ದವು. ಮಹಿಳೆಗೆ ಸಿರಗುಪ್ಪದಲ್ಲಿ ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.