ಸರ್ಕಾರ ಒಂದು ಕೋಮಿನ, ಗುಂಪಿನ ಸ್ವತ್ತಲ್ಲ : ಪೇಜಾವರ ಶ್ರೀ

By Ravi Janekal  |  First Published Apr 7, 2024, 7:32 PM IST

ಹನುಮಾನ್ ಚಾಲಿಸಾ ಹಚ್ಚಿ ಹಲ್ಲೆಗೊಳಗಾದ ಮುಕೇಶ್ ಮೇಲೆ ಕೇಸ್ ದಾಖಲಾದ ವಿಚಾರವಾಗಿ ವಿಜಯಪುರದಲ್ಲಿ ಪೇಜಾವರ ಶ್ರೀಗಳ ಪ್ರತಿಕ್ರಿಯೆ ನೀಡಿ, ಸರ್ಕಾರ ಒಂದು ಕೋಮಿನ, ಗುಂಪಿನ ಸ್ವತ್ತಲ್ಲ ಎಂದು ರಾಜ್ಯ ಸರ್ಕಾರದ ವಿರುದ್ದ ಅಸಮಧಾನ ಹೊರಹಾಕಿದ್ದಾರೆ.


ವಿಜಯಪುರ (ಏ.7) : ಹನುಮಾನ್ ಚಾಲಿಸಾ ಹಚ್ಚಿ ಹಲ್ಲೆಗೊಳಗಾದ ಮುಕೇಶ್ ಮೇಲೆ ಕೇಸ್ ದಾಖಲಾದ ವಿಚಾರವಾಗಿ ವಿಜಯಪುರದಲ್ಲಿ ಪೇಜಾವರ ಶ್ರೀಗಳ ಪ್ರತಿಕ್ರಿಯೆ ನೀಡಿ, ಸರ್ಕಾರ ಒಂದು ಕೋಮಿನ, ಗುಂಪಿನ ಸ್ವತ್ತಲ್ಲ ಎಂದು ರಾಜ್ಯ ಸರ್ಕಾರದ ವಿರುದ್ದ ಅಸಮಧಾನ ಹೊರಹಾಕಿದ್ದಾರೆ.

ಸರ್ಕಾರ ಒಂದು ಗುಂಪಿಗೆ ಸೀಮಿತ ಅಲ್ಲ:ಪೇಜಾವರ ಶ್ರೀ

Tap to resize

Latest Videos

ವಿಜಯಪುರದ ಕೃಷ್ಣಮಠದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಅದು ಯಾವ ಗುಂಪಾದರೂ ಸರಿ. ಸರ್ಕಾರ ಎಲ್ಲ ಪ್ರಜೆಗಳನ್ನು ಸಮಾನವಾಗಿ ಕಾಣಬೇಕು. ಇದು ಅಧಿಕಾರ ಇದ್ದವರ ಕರ್ತವ್ಯವಾಗುತ್ತದೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಪೇಜಾವರ ಶ್ರೀಗಳಯ ಕಿವಿಮಾತು ಹೇಳಿದರು. ಸರ್ಕಾರ ದುಷ್ಕೃತ್ಯಗಳಿಗೆ ಕೈ ಹಾಕದೆ ಎಲ್ಲ ಸಮಾಜಗಳನ್ನ ಒಟ್ಟಾಗಿ ಕೊಂಡೊಯ್ಯಬೇಕು ಎಂದು ಸಲಹೆ ನೀಡಿದರು.

ನಗರ್ತಪೇಟೆಯ ಹನುಮಾನ್‌ ಚಾಲೀಸಾ ಪ್ರಕರಣ, ಹಲ್ಲೆಗೊಳಗಾದ ಅಂಗಡಿ ಮಾಲೀಕನ ವಿರುದ್ಧವೇ ಎಫ್‌ಐಆರ್‌!

ನಿಮ್ಮ ಊರು, ಮಂದಿರಗಳಲ್ಲೇ ರಾಮನವಮಿ‌ ಆಚರಿಸಿ!

ರಾಮನವಮಿಗೆ(Ram Navami) ಅಯೋಧ್ಯೆ ರಾಮ ಮಂದಿರ(Ayodhya RamMandir)ಕ್ಕೆ ಬರಬೇಡಿ. ತಮ್ಮ ತಮ್ಮ ಊರುಗಳಲ್ಲಿ ರಾಮ ನವಮಿ ಆಚರಿಸಲು ಪೇಜಾವರ ಶ್ರೀ (Pejavar shree)ಗಳು ಭಕ್ತರಲ್ಲಿ‌ ಮನವಿ ಮಾಡಿದರು. ರಾಮನವಮಿಗೆ ಅಯೋಧ್ಯೆಗೆ ಭಕ್ತರು ಬಂದಲ್ಲಿ ದರ್ಶನಕ್ಕೆ ತೊಂದರೆಯಾಗಲಿದೆ. ತಮ್ಮ ಊರಿನ ಮಂದಿರ, ಮನೆಗಳಲ್ಲೆ ರಾಮನವಮಿ ಆಚರಿಸಿ ಎಂದು ಶ್ರೀಗಳ ಸಲಹೆ ನೀಡಿದರು. 

ರಾಮಮಂದಿರ ನಿರ್ಮಾಣ ಬಳಿಕ ದೇಶದಲ್ಲಿ ಧರ್ಮಜಾಗೃತಿ ಪರ್ವ ಆರಂಭವಾಗಿದೆ: ಪೇಜಾವರಶ್ರೀ

ಈಗಲೇ ಪ್ರತಿ ಗಂಟೆಗೆ 15 ಸಾವಿರ ಭಕ್ತರು ದರ್ಶನ ಪಡೆಯುತ್ತಿದ್ದಾರೆ. ನಿತ್ಯ ಲಕ್ಷಾಂತರ ಭಕ್ತರು ದರ್ಶನ ಪಡೆಯುತ್ತಿದ್ದಾರೆ. ರಾಮನವಮಿಗೆ ಇನ್ನಷ್ಟು ಭಕ್ತರು ಆಗಮಿಸಿದಲ್ಲಿ ತೊಂದರೆ ಉಂಟಾಗಲಿದೆ. ಹಾಗಾಗಿ ಭಕ್ತರು ನಿಮ್ಮ ಊರುಗಳು, ಮಂದಿರಗಳಲ್ಲೆ ರಾಮ ನವಮಿ ಆಚರಿಸಿ ಎಂದು ಪೇಜಾವರ ಶ್ರೀ ಸಲಹೆ ನೀಡಿದರು.

click me!