ಉಡುಪಿಯ ಯುಪಿಸಿಎಲ್ ಉಷ್ಣ ವಿದ್ಯುತ್ ಸ್ಥಾವರ ಆರಂಭವಾದ ದಿನದಿಂದ ಇಂದಿನವರೆಗೂ ಒಂದಲ್ಲ ಒಂದು ವಿವಾದಕ್ಕೆ ಗುರಿಯಾಗಿದೆ. ಈ ಕಂಪೆನಿಯ ವಿರುದ್ಧ ನಿರಂತರವಾಗಿ ಹೋರಾಟ ನಡೆಯುತ್ತಿದ್ದು, ಇತ್ತೀಚೆಗಷ್ಟೆ ಹಸಿರು ಪೀಠ 52 ಕೋಟಿ ರೂಪಾಯಿ ದಂಡ ವಿಧಿಸಿತ್ತು. ಉದ್ಯಮಿ ಅದಾನಿ ಮಾಲಕತ್ವದ ಈ ಹೆಸರಾಂತ ಸಂಸ್ಥೆ ಮತ್ತೊಂದು ವಿವಾದದಲ್ಲಿ ಸಿಲುಕಿದೆ.
ಉಡುಪಿ (ಡಿ.23) : ಉಡುಪಿಯ ಯುಪಿಸಿಎಲ್ ಉಷ್ಣ ವಿದ್ಯುತ್ ಸ್ಥಾವರ ಆರಂಭವಾದ ದಿನದಿಂದ ಇಂದಿನವರೆಗೂ ಒಂದಲ್ಲ ಒಂದು ವಿವಾದಕ್ಕೆ ಗುರಿಯಾಗಿದೆ. ಈ ಕಂಪೆನಿಯ ವಿರುದ್ಧ ನಿರಂತರವಾಗಿ ಹೋರಾಟ ನಡೆಯುತ್ತಿದ್ದು, ಇತ್ತೀಚೆಗಷ್ಟೆ ಹಸಿರು ಪೀಠ 52 ಕೋಟಿ ರೂಪಾಯಿ ದಂಡ ವಿಧಿಸಿತ್ತು. ಉದ್ಯಮಿ ಅದಾನಿ ಮಾಲಕತ್ವದ ಈ ಹೆಸರಾಂತ ಸಂಸ್ಥೆ ಮತ್ತೊಂದು ವಿವಾದದಲ್ಲಿ ಸಿಲುಕಿದೆ.
ಉಡುಪಿಯ ಎಲ್ಲೂರು ಗ್ರಾಮದಲ್ಲಿರುವ ಯುಪಿಸಿಎಲ್ ಉಷ್ಣ ವಿದ್ಯುತ್ ಸ್ಥಾವರ(Udupi Thermal Power Plant) ಮತ್ತೆ ಸುದ್ದಿಯಲ್ಲಿದೆ. ದೇಶದ ಹೆಸರಾಂತ ಉದ್ಯಮಿ ಗೌತಮ ಅದಾನಿ(gautam adani) ಮಾಲಕತ್ವದ ಈ ಯುಪಿಸಿಎಲ್ ಉಷ್ಣ ವಿದ್ಯುತ್ ಸ್ಥಾವರ ಆರಂಭದಿಂದಲೂ ಜನರ ವಿರೋಧ ಎದುರಿಸಿಕೊಂಡು ಬಂದಿದೆ. ಹಲವು ವರ್ಷಗಳಿಂದ ಈ ಭಾಗದಲ್ಲಿ ಕಾರ್ಯಾಚರಿಸುತ್ತಿರುವ ಈ ಯುಪಿಸಿಎಲ್ ಯೋಜನಾ ಪ್ರದೇಶ ವ್ಯಾಪ್ತಿಯ ಪರಿಸರ ಹಾಗೂ ಜನರ ಆರೋಗ್ಯದ ಮೇಲಾಗಿರುವ ದುಷ್ಪರಿಣಾಮಗಳ ಮರು ಪರಿಶೀಲನೆಗಾಗಿ ರಾಷ್ಟ್ರೀಯ ಹಸಿರು ಪೀಠದ ನಿರ್ದೇಶನದಂತೆ ಕಳೆದ ಡಿಸೆಂಬರ್ ತಿಂಗಳಲ್ಲಿ ಜಿಲ್ಲೆಗೆ ಆಗಮಿಸಿದ ಮೂವರು ತಜ್ಞರ ಸಮಿತಿ(ಎನ್‌ಜಿಟಿ) ತನ್ನ ವರದಿ ನೀಡಿದ ಬೆನ್ನಲ್ಲೆ ಹಸಿರು ಪೀಠ ಸಂಸ್ಥೆಗೆ 52 ಕೋಟಿ ದಂಡ ವಿಧಿಸಿತ್ತು.
undefined
ವಾರಾಹಿ ಎಡದಂಡೆ ಕಾಮಗಾರಿ ವ್ಯಾಪ್ತಿಯ ಸಮಸ್ಯೆಗಳನ್ನು ತಕ್ಷಣ ಬಗೆಹರಿಸಿ: ಉಡುಪಿ ಡಿಸಿ ಕೂರ್ಮಾರಾವ್
ಆದರೆ ಇದರ ಬೆನ್ನಲ್ಲೆ ಮತ್ತೊಂದು ಎಡವಟ್ಟಿಗೆ ಕೈ ಹಾಕಿರುವ ಸಂಸ್ಥೆ ಸಿಮೆಂಟ್ ಕಾರ್ಖಾನೆಗೆ ಇದೇ ಆವರಣದಲ್ಲಿ ಆರಂಭಿಸಲು ಅವಕಾಶ ನೀಡಲು ಹೊರಟಿದೆ.
ಉಡುಪಿಯ ಜನತೆಗೆ ಮತ್ತೊಂದು ಪರಿಸರ ವಿರೋಧಿ ಕಾರ್ಖಾನೆಯ ಹೊರೆ ಹೊರಿಸುವ ಯತ್ನ ಇದಾಗಿದೆ.
ಜಿಲ್ಲೆಯ ಪಡುಬಿದ್ರಿ ಪರಿಸರದ ಯುಪಿಸಿಎಲ್ ವಿದ್ಯುತ್ ಘಟಕದ ಆವರಣದಲ್ಲಿ ಸಿಮೆಂಟ್ ಕಾರ್ಖಾನೆ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ. ಎರಡು ಮಿಲಿಯನ್ ಟನ್ ವಾರ್ಷಿಕ ಉತ್ಪಾದನಾ ಸಾಮರ್ಥ್ಯದ ಸಿಮೆಂಟ್ ಕಾರ್ಖಾನೆ ಇದಾಗಿದ್ದು, ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರದಿಂದ ರೋಸಿ ಹೋಗಿರುವ ಜನರಿಗೆ ಆತಂಕ ಹೆಚ್ಚಾಗಲಿದೆ.
ಸದ್ಯ ಫ್ಯಾಕ್ಟರಿ ನಿರ್ಮಾಣಕ್ಕೆ ಯುಪಿಸಿಎಲ್ ನಿಂದ 35 ಎಕರೆ ಭೂಮಿ ಮೀಸಲಿರಿಸಲಾಗಿದೆ. ಉಡುಪಿ ಸಿಮೆಂಟ್ ಗ್ರೈಂಡಿಂಗ್ ಪ್ಲಾಂಟ್ ಎಂಬ ಹೆಸರಿನಲ್ಲಿ ಶೀಘ್ರ ಕಾರ್ಯ ಆರಂಭವಾಗುವ ನೀರಿಕ್ಷೆ ಇದೆ. ಈ ನಿಟ್ಟಿನಲ್ಲಿ ಯುಪಿಸಿಎಲ್ ವಿರುದ್ಧ ನಾಗರಿಕ ಹೋರಾಟ ನಿರ್ಣಾಯಕ ಹಂತ ತಲುಪಿದೆ. ನಂದಿಕೂರು ಜನಜಾಗೃತಿ ಸಮಿತಿ ಮೂಲಕ ಸುಪ್ರೀಂಕೋರ್ಟ್ ನಲ್ಲಿ ಹೋರಾಟ ಮುಂದುವರಿಸಿದ್ದಾರೆ.
ಯುಪಿಸಿಎಲ್ ಘಟಕ ಹಸಿರು ಪೀಠದ ಆದೇಶ ಪಾಲಿಸದೆ ನ್ಯಾಯಾಂಗ ನಿಂದನೆ ಮಾಡಿದೆ. ಸದ್ಯ ಕೋರ್ಟ್ ಮುಂದೆ ಯುಪಿಸಿಎಲ್ ಸಂಸ್ಥೆ ಅರ್ಜಿ ಸಲ್ಲಿಸಿದೆ, ಅಸಮರ್ಪಕ ಅರ್ಜಿಯನ್ನು ಸರಿಪಡಿಸಿ ಮರು ಸಲ್ಲಿಸುವಂತೆ ಕೋರ್ಟು ಸೂಚನೆ ನೀಡಿದೆ.
Udupi: ಮಂಗಳೂರು ವಿಶ್ವವಿದ್ಯಾನಿಲಯ ವಿರುದ್ದ ಸಿಡಿದೆದ್ದ ವಿದ್ಯಾರ್ಥಿ ಸಮೂಹ
ಒಟ್ಟಾರೆಯಾಗಿ,ಈಗಾಗಲೇ 600 ಮೆಗಾ ವ್ಯಾಟ್ ಸಾಮರ್ಥ್ಯದ ಎರಡು ಘಟಕ ಕಾರ್ಯಾಚರಣೆ ನಡೆಸುತ್ತಿದೆ. ಹೊಸತಾಗಿ 800 ಮೆಗಾ ವ್ಯಾಟ್ ಸಾಮರ್ಥ್ಯದ ಎರಡು ಘಟಕ ಆರಂಭಿಸಲು ಚಿಂತನೆ ನಡೆಸಿದ್ದು, ಕಾರ್ಖಾನೆ ವಿಸ್ತರಣೆಗೆ ಹೆಚ್ಚುವರಿ 600 ಎಕರೆ ಭೂಮಿ ಪಡೆಯುವ ನಿರೀಕ್ಷೆ ಇದೆ, ಸದ್ಯ ಪಡುಬಿದ್ರೆ ಗ್ರಾಮದ ಜನರಿಗೆ ಗಾಯದ ಮೇಲೆ ಬರೆ ಎಳೆದ ಪರಿಸ್ಥಿತಿ ನಿರ್ಮಾಣವಾಗಿದೆ.